ಡಾ. ನಾಗವೇಣಿ ಸಮ್ಮುಖದಲ್ಲಿ ನೂರಾರು ಮಹಿಳೆಯರ ಕಾಂಗ್ರೆಸ್ ಸೇರ್ಪಡೆ.
ಮಸ್ಕಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹರಳಳ್ಳಿ ಗ್ರಾಮದಲ್ಲಿ ಬಿಜೆಪಿ. ಜೆ ಡಿ ಎಸ್ ಪಕ್ಷಗಳನ್ನು ತೊರೆದು ನೂರಾರು ಮಹಿಳೆಯರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಂಡರು.
ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷರಾದ ಡಾ. ನಾಗವೇಣಿ ಎಸ್ ಪಾಟೀಲ್ ತುರ್ವಿಹಾಳ ಅವರ ಸಮ್ಮುಖದಲ್ಲಿ ನೂರಾರು ಮಹಿಳೆಯರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.
ನಂತರ ಡಾll ನಾಗವೇಣಿ ಅವರು ಮಾತನಾಡಿ ಕಾಂಗ್ರೆಸ್ ಪಕ್ಷ ಬಹುದೊಡ್ಡ ಇತಿಹಾಸ ಹೊಂದಿದ್ದೆ. ಬಡ ಕೂಲಿ ಕಾರ್ಮಿಕರ ಏಳಿಗೆಗಾಗಿ ಹಗಲಿರಳು ಶ್ರಮಿಸುತ್ತಾ ಬಂದಂತಹ ಪಕ್ಷ ಕಟ್ಟ ಕಡೆಯ ವ್ಯಕ್ತಿಗೂ ಕುಡಾ ಸೌಲತ್ತು ದೊರಕಿಸುವಂತಹ ಯಾವುದಾದರೂ ಒಂದು ಪಕ್ಷ ಇದ್ದರೆ ಅದುವೇ ಕಾಂಗ್ರೆಸ್ ಮಾತ್ರ ಎನ್ನುವುದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿಗಳಾದ ಗದ್ಯಮ್ಮ, ಶೃತಿ ನಾಗರಾಜ್. ಹಾಗೂ ನೂರಾರು ಮಹಿಳೆಯರು ಯುವತಿಯರು ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ : ಮೆಹಬೂಬ್ ಮೊಮಿನ್