ಏ.02.ಕಂಪ್ಲಿ: ತಾಲೂಕಿನ ಎಲ್ ಎಲ್ ಸಿ ಕಾಲುವೆಗೆ ಸಂಬಂಧಿಸಿದ ಸಣಾಪುರ ವಿತರಣಾ ಕಾಲುವೆಗೆ ನಿಯಮದಂತೆ ನೀರು ಹರಿಸಲು ಒತ್ತಾಯಿಸಿ ಭಾನುವಾರ ದೇವಸಮುದ್ರ ಕಾಲುವೆ ಮೇಲೆ ರೈತರು ರಾಸಯನಿಕ ಔಷಧ ಬಾಟಲ್ ಹಿಡಿದು ಪ್ರತಿಭಟನೆ ನಡೆಸಿದರು.ನಂತರ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರುಸೇನೆಯ ಬಳ್ಳಾರಿ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಮಾತನಾಡಿ, ಸಣಾಪುರ ವಿತರಣಾ ಕಾಲುವೆಗೆ ಇರುವ ತುಂಗಭದ್ರ ಎಲ್ ಎಲ್ ಸಿ ವಿತರಣ ಕಾಲುವೆಗೆ 52 ಕ್ಯೂಸೆಕ್ ನೀರನ್ನು ಹರಿಸಬೇಕಿತ್ತು. ಆದರೆ ಇದಕ್ಕೆ ಸಂಬಂಧಿಸಿದ ನೀರಾವರಿ ಇಲಾಖೆ ಅಧಿಕಾರಿಗಳು 30 ಕ್ಯೂಸೆಕ್ ಗೆ ಹರಿವನ್ನು ಸೀಮಿತಗೊಳಿಸಿದ್ದಾರೆ.ಇದರಿಂದ ಕೊನೆಯ ಭಾಗದ ರೈತರಿಗೆ ನೀರು ದೊರೆಯುತ್ತಿಲ್ಲ. ರೈತರು ಬೆಳೆದ ಭತ್ತದ ಜಮೀನಿಗೆ ನೀರು ಸರಿಯಾಗಿ ದೊರೆಯದೆ ಬೆಳೆ ಸಂಪೂರ್ಣ ಒಣಗಿ ಹೋಗುವ ಹಂತದಲ್ಲಿದೆ. ಬೆಳೆ ಏನಾದರೂ ಕೈಕೊಟ್ಟರೆ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ.
ನೀರಾವರಿ ಅಧಿಕಾರಿಗಳು ಹೊಣೆಯಾಗಲಿದ್ದಾರೆ. ಎಪ್ರಿಲ್ 15 ರವರೆಗೆ ಕಾಲುವೆ ಮತ್ತು ವಿತರಣ ಕಾಲುವೆಗೆ ನೀರು ಹರಿಸಬೇಕು. ಆಫ್ ಪದ್ಧತಿಯಲ್ಲಿ ಅನುಸರಿಸದೆ ಡಿಸ್ಟಿಬೂಟರ್ ಕಾಲುವೆಗೆ ಸಮರ್ಪಕವಾಗಿ ರೈತರ ಜಮೀನಿಗೆ
ನೀರನ್ನು ಬಿಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಕಂಪ್ಲಿ ನಗರ ಘಟಕ ಅಧ್ಯಕ್ಷ ಕೆ.ರಮೇಶ ಮಾತನಾಡಿ, ಕೆಳಭಾಗದ ರೈತರು ಪ್ರತಿ ವರ್ಷ ನೀರಿಗಾಗಿ ಪರದಾಡುವುದು ತಪ್ಪುತ್ತಿಲ್ಲ. ಪ್ರತಿ ವರ್ಷ ನೀರಿನ ಸಮಸ್ಯೆಯಿಂದಾಗಿ ರೈತರು ಸಂಕಷ್ಟದಲ್ಲಿದ್ದರೂ ನೀರಾವರಿ ಇಲಾಖೆ ಅಧಿಕಾರಿಗಳು ಮಾತ್ರ ಕಾಳಜಿ ತೋರುತ್ತಿಲ್ಲ ಎಂದು ಆರೋಪಿಸಿದರು. ಜಿಲ್ಲಾಧಿಕಾರಿಗಳು ರೈತರ ಬಗ್ಗೆ ಗಮನ ಹರಿಸಿ ಸಮರ್ಪಕವಾಗಿ ನೀರನ್ನು ಹರಿಸಬೇಕೆಂದರು.
ಈ ಸಂದರ್ಭದಲ್ಲಿ ಗೌರವಧ್ಯಕ್ಷ ಟಿ.ಗಂಗಣ್ಣತಾಲೂಕು ಕಾರ್ಯದರ್ಶಿ ಡಿ.ಮುರಾರಿ,ಉಪಾಧ್ಯಕ್ಷ ಎನ್.ತಿಮ್ಮಪ್ಪ,ಸಂಚಾಲಕ ಅಕ್ಬರಸಾಬ್ ರೈತರಾದ
ಸಿದ್ದಾಪುರ ಬಸವರಾಜ್,ದೇವಣ್ಣ,ಬೆಳಗೋಡ ಬಸವರಾಜ್ ಸೇರಿದಂತೆ ಅನೇಕರಿದ್ದರು.
ವರದಿ : ಚನ್ನಕೇಶವ
Tags
ಟಾಪ್ ನ್ಯೂಸ್