ರೋಣ ತಾಲೂಕ ಮೆಣಸಗಿ ಗ್ರಾಮದಲ್ಲಿ ಬಾಬ ಸಾಹೇಬ ಅಂಬೇಡ್ಕರವರ 132ನೇ ಜಯಂತಿ ಆಚರಿಸಿದರು ಬಳಿಕ ಮಾತನಾಡಿದ ಭೀಮಾ ಆರ್ಮಿ ತಾಲೂಕ ಉಪಾದ್ಯಕ್ಷ ಪುಂಡಲಿಕ ಮಾದರ ಮಾತನಾಡಿ ಬಾಬ ಸಾಹೇಬ ಅಂಬೇಡ್ಕರವರು ಏಪ್ರಿಲ್ 14, 1891 ರಂದು ಆಗಿನ ಮಧ್ಯ ಪ್ರಾಂತ್ಯದ ಈಗ ಮಧ್ಯಪ್ರದೇಶದ ಇಂದೋರ್ ಬಳಿಯ ಮೊಹೋದಲ್ಲಿ ಜನಿಸಿದರು.
ಮೊದಲ ಬಾರಿಗೆ, ಕಾರ್ಯಕರ್ತ ಜನಾರ್ದನ್ ಸದಾಶಿವ್ ರಣಪಿಸೆ ಅವರು ಅಂಬೇಡ್ಕರ್ ಅವರ ಜನ್ಮದಿನವನ್ನು 14 ಏಪ್ರಿಲ್ 1928 ರಂದು ಪುಣೆಯಲ್ಲಿ ಸಾರ್ವಜನಿಕವಾಗಿ ಆಚರಿಸಿದರು. ಅಂದಿನಿಂದ, ಈ ದಿನವನ್ನು ಅಂಬೇಡ್ಕರ್ ಜಯಂತಿ ಅಥವಾ ಭೀಮ್ ಜಯಂತಿ ಎಂದು ಆಚರಿಸಲಾಗುತ್ತದೆ ಹಾಗೂ ಸ್ವಾತಂತ್ರ್ಯ ಬಂದು 75 ವರ್ಷಾಗಳಾದರೂ ನಮ್ಮ ಸಮಾಜದಲ್ಲಿ ಈಗಲೂ ಇರುವ ಜಾತಿ ಆಧಾರಿತ ತಾರತಮ್ಯದ ಕಡೆಗೆ ನಮ್ಮ ಗಮನ ಸೆಳೆಯುವ ಮೂಲಕ ಅಂಬೇಡ್ಕರ್ ಜಯಂತಿಗೆ ಸಾಕಷ್ಟು ಮಹತ್ವವಿದೆ.
ಈ ದಿನವನ್ನು ಆಚರಿಸುವ ಮೂಲಕ ದಲಿತರ ಮತ್ತು ಅಸ್ಪೃಶ್ಯರ ಉನ್ನತಿಗಾಗಿ ಬಾಬಾಸಾಹೇಬರ ಕೊಡುಗೆಯನ್ನು ಸ್ಮರಿಸುತ್ತೇವೆ. ಜಾತಿ, ಮತ, ಧರ್ಮ, ಜನಾಂಗ ಮತ್ತು ಸಂಸ್ಕೃತಿಯನ್ನು ಲೆಕ್ಕಿಸದೆ ಈ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಸಮಾನ ಹಕ್ಕುಗಳನ್ನು ಒದಗಿಸುವ ಸಂವಿಧಾನವನ್ನು ಅವರು ರಚಿಸಿದರು. ಅಂಬೇಡ್ಕರ ಇತಿಹಾಸದ ಬಗ್ಗೆ ತಿಳಿಸಿದರು.
ವರದಿ : ಹನಮಂತ ಚಲವಾದಿ
Tags
ರಾಜ್ಯ