Sindhanuru : ಆರ್ ಬಸನಗೌಡ ತುರ್ವಿಹಾಳರ ಪರ ಪ್ರಚಾರಕ್ಕೆ ಆಗಮಿಸಿದ ತೆಲಂಗಣ ರಾಜ್ಯದ ಮುಳುಗು ವಿಧಾನಸಭಾ ಕ್ಷೇತ್ರದ ಶಾಸಕಿ ಸೀತಾಕ್ಕ


ಆರ್ ಬಸನಗೌಡ ತುರ್ವಿಹಾಳರ ಪರ ಪ್ರಚಾರಕ್ಕೆ ಆಗಮಿಸಿದ ತೆಲಂಗಣ ರಾಜ್ಯದ ಮುಳುಗು ವಿಧಾನಸಭಾ ಕ್ಷೇತ್ರದ ಶಾಸಕಿ ಸೀತಾಕ್ಕ

ಸಿಂಧನೂರು ತಾಲ್ಲೂಕಿನ 7 ನೇ ಮೈಲ್ ಕ್ಯಾಂಪ್ ನಲ್ಲಿ ರವಿವಾರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆರ್ ಬಸನಗೌಡ ತುರ್ವಿಹಾಳ ಪರ ಪ್ರಚಾರಕ್ಕೆ ಆಗಮಿಸಿದ ತೆಲಂಗಣ ರಾಜ್ಯ ಮುಳುಗು ವಿಧಾನಸಭಾ ಕ್ಷೇತ್ರದ ಶಾಸಕಿ ಮತ್ತು ಬುಡಕಟ್ಟು ಜನಾಂಗದ ನಾಯಕಿ ಸೀತಕ್ಕ ರವರು ಬಸವ ಜಯಂತಿಯ ಶುಭಾಶಯಗಳು ಹೇಳುತ್ತಾ ಶಾಸಕ ಬಸನಗೌಡ ತುರ್ವಿಹಾಳ ರವರು ಉಪಚುನಾವಣೆಯಲ್ಲಿ 30 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು ಈಗ ಮತ್ತೆ 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಅಲೆ ಇದ್ದು ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ ಎಂಬ ವಿಶ್ವಾಸದಿಂದ ಮಸ್ಕಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಬಸನಗೌಡ ಪರ ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡಬೇಕಾಗಿದೆ ಹಾಗೂ ಬಿಜೆಪಿ ಸರ್ಕಾರದ ದುರಾಡಳಿತ,ಬೆಲೆ ಏರಿಕೆ ಹಾಗೂ 40% ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು. 
ನಂತರ ಮಾತನಾಡಿದ ಸ್ಥಳೀಯ ಕಾಂಗ್ರೆಸ್ ಮುಖಂಡರಾದ ವೆಂಕಟೇಶ್ ರಾವ್ ನಕ್ಕಂಟಿ ಮತಾನಾಡಿ ಕ್ಷೇತ್ರ ಪುನರ್ವಿಂಗಡಣೆಯಿಂದ ಮಸ್ಕಿ ಪ.ಪಂಗಡ ಮೀಸಲು ಕ್ಷೇತ್ರ ವಾದಾಗಿನಿಂದ ಇಲ್ಲಿವರಿಗೂ ಪ್ರಭಲ ಎದುರಾಳಿ ಇಲ್ಲದ ಪರಿಣಾಮ ಮಸ್ಕಿ ಕ್ಷೇತ್ರದಲ್ಲಿ ಮಾಜಿ ಶಾಸಕರದ್ದೆ ಆಟವಾಗಿತ್ತು. ಆರ್ ಬಸನಗೌಡ ತುರ್ವಿಹಾಳ ರವರು ವಿಧಾನ ಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಆದರೂ ಅವಾಗನಿಂದ ಸ್ವಾಭಿಮಾನಿ ಮತದಾರರ ಮನ ಮುಟ್ಟಿ ಆರ್ ಬಸನಗೌಡ ಅವರಿಗೆ ಉಪಚುನಾವಣೆಯಲ್ಲಿ ಗೆಲುವು ತಂದು ಕೊಟ್ಟ ಮಾಹಾಜನತೆ ನಂತರ ಸಿಕ್ಕ ಅಲ್ಪಾವಧಿಯಲ್ಲಿ ಜನಮನ ಅಭಿವೃದ್ಧಿ ಕೆಲಸಗಳು ಮಾಡಿ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ ಎಂದು ಹೇಳಿದರು. 
ತೆಲಂಗಾಣ ರಾಜ್ಯ ಮುಳುಗು ಮತ ಕ್ಷೇತ್ರದ ಶಾಸಕಿ ಸೀತಕ್ಕ ಪಟ್ಟಣದ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಮಲ್ಲನಗೌಡ ದೇವರಮನಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ,ಎಂ.ಡಿ.ಫಾರುಕ್ ಸಾಬ್ ಖಾಜಿ ಅಲ್ಪಸಂಖ್ಯಾತ ಘಟಕದ ರಾಜ್ಯ ಪ್ರದಾನ ಕಾರ್ಯದರ್ಶಿ,ಕಿಸಾನ್ ಘಟಕದ ಅಧ್ಯಕ್ಷ ಮೈಬೂಬ್ ಸಾಬ್ ಮುದ್ದಾಪುರ್,ಶೇಖರಗೌಡ 
ದೇವರಮನಿ,ಮೌಲಪ್ಪಯ್ಯ ಗುತ್ತೇದಾರ್,ಬಾಪುಗೌಡ ದೇವರಮನಿ. ಎಂ.ಡಿ.ಅಬುತುರಾಬ್ ಖಾಜಿ,
ಶರಣಬಸವ ಗಡೆದ. ಸಿರಾಜ್ ಪಾಷಾ ದಳಪತಿ,ರವಿಗೌಡ ಮಲ್ಲದಗುಡ್ಡ .ಕರಿಯಪ್ಪ ವಿರುಪಾಪುರ, ಪಕೀರಪ್ಪ ಭಂಗಿ,ಅರವಿಂದ ರೆಡ್ಡಿ,ಶರಣಪ್ಪ ರೇಡ್ಡರ್ ಮಲ್ಲಪ್ಪ ತೆಗ್ಗಿಹಾಳ,ಮಾಹತೇಶ ಸಜ್ಜನ,ಮರಿಸ್ವಾಮಿ ಹತ್ತಿಗುಡ್ಡ,ಚಂದ್ರು ಗೌಡ ವಿರುಪಾಪುರ,ಶಿವರಾಜ ಅರಗಿ,ಇಶಪ್ಪ ಬೇರ್ಗಿ,
ಪಂಪಾಪತಿಕಾರಟಗಿ, ಸುಬ್ಬಯ್ಯ,ಹಾಗೂ 
ಮಹಿಳಾ ಘಟಕದ ಅಧ್ಯಕ್ಷ ಬೇಗಂ ಸೆರಿದಂತೆ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ : ಮೆಹಬೂಬ್ ಮೊಮಿನ್
Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">