ವಿವಿಧ ಹಳ್ಳಿಗಳಲ್ಲಿ ರೂಪ ಸಿದ್ದನಗೌಡರಿಂದ ಅಬ್ಬರದ ಪ್ರಚಾರ.
ತುರ್ವಿಹಾಳ:ರಾಜ್ಯದಲ್ಲಿ ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಇನ್ನೂ 13 ದಿನಗಳು ಮಾತ್ರ ಬಾಕಿ ಉಳಿದಿದ್ದು, ಶಾಸಕ ಆರ್ ಬಸನಗೌಡ ತುರ್ವಿಹಾಳ ಪರ ಮತದಾರರನ್ನು ಓಲೈಸಲು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರೂಪ ಸಿದ್ದನಗೌಡ ಗುರುವಾರ ಕ್ಷೇತ್ರದ ನಾನಾ ಹಳ್ಳಿ ಗಳಿಗೆ ತೆರಳಿ ಬಿರುಸಿನ ಪ್ರಚಾರ ನಡೆಸಿದ್ದಾರೆ.
ಕಳೆದ 18 ತಿಂಗಳ ಅವಧಿಯಲ್ಲಿ ಶಾಸಕ ಆರ್ ಬಸನಗೌಡ ತುರ್ವಿಹಾಳ ಅವರು ಕ್ಷೇತ್ರದ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಅಲ್ಪಾವಧಿಯಲ್ಲೇ ಸಾಕಷ್ಟು ಅನುದಾನವನ್ನು ತಂದು ಅಭಿವೃದ್ಧಿ ಪಡಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮನೆಯೊಡತಿಯ ಖಾತೆಗೆ 2000 ರೂ ಹಾಗೂ ಪ್ರತಿ ಬಿಪಿಎಲ್ ಕಾರ್ಡು ಹೋಂದಿದ ಕುಟುಂಬದ ಪ್ರತಿ ಒಬ್ಬರಿಗೆ 10 ಕೆಜಿ ಅಕ್ಕಿ ನೀಡುವ ಭರವಸೆ ಯೊಂದಿಗೆ ಆರ್.ಬಸನಗೌಡರಿಗೆ ತಮ್ಮ ಅಮೂಲ್ಯವಾದ ನಿಡುವ ಮೂಲಕ ಮತ್ತೊಮ್ಮೆ ಆಯ್ಕೆ ಮಾಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.
ವರದಿ : ಮೆಹಬೂಬ್ ಮೊಮಿನ್