ಸೋಮಲಿಂಗಪ್ಪರಿಗೆ ಮತ್ತೆ ಟಿಕೆಟ್ ನೀಡಿದರೆ ಇಲ್ಲಿ ಬಿಜೆಪಿ ಸೋಲುತ್ತದೆ
ಸಿರುಗುಪ್ಪ: ಏ-02: ನಮ್ಮ ಬಿಜೆಪಿ ಪಕ್ಷದಲ್ಲಿ ಕುಟುಂಬ ರಾಜಕೀಯ ಇಲ್ಲ. ಅಲ್ಲದೆ ಸಿರುಗುಪ್ಪ ಪರಿಶಿಷ್ಟ ಪಂಗಡದ ಮೀಸಲು ವಿಧಾನಸಭಾ ಕ್ಷೇತ್ರ ವಾಗಿದ್ದು ಈಗಾಗಲೇ ಅವರು ಎರಡು ಬಾರಿ ಬಿಜೆಪಿ ಮತ್ತು ಒಂದು ಬಾರಿ ಸಾಮಾನ್ಯ ಕ್ಷೇತ್ರದಿಂದ ಗೆದ್ದು ಮೂರು ಬಾರಿ ಅಧಿಕಾರ ಅನುಭವಿಸಿದ್ದಾರೆ. ಆದ್ದರಿಂದ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕೆಂದು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಮುಖಂಡರು ತಿಳಿಸಿದರು
ಶಾಸಕ ಸೋಮಲಿಂಗಪ್ಪರು ಕಾರ್ಯಕರ್ತರ ಶ್ರಮದಿಂದಾಗಿ ಶಾಸಕರಾಗಿದ್ದಾರೆ. ಆದರೆ ಈಗ ಕುಟುಂಬ ರಾಜಕಾರಣ ಮಾಡುತ್ತಾ ಕಾರ್ಯಕರ್ತರನ್ನಷ್ಟೇ ಅಲ್ಲದೆ ಮುಖಂಡರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ.
ಎಲ್ಲದಕ್ಕೂ ತಾನು ಮತ್ತು ತನ್ನ ಮಕ್ಕಳು ಎಂಬಂತೆ ಆಗಿದ್ದಾರೆ. ಇದರಿಂದಾಗಿ ಕ್ಷೇತ್ರದಾದ್ಯಂತ ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನವಿದ್ದು ಈ ಬಾರಿಯ ಚುನಾವಣೆಯಲ್ಲಿ ತಮ್ಮ ಪಾತ್ರ ಏನು ಎಂಬುದನ್ನು ತೋರಿಸುತ್ತೇವೆ ಎಂದಿದ್ದಾರೆ. ಆದರೆ ಕೇಂದ್ರ ಮತ್ತು ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತಿರುವ ನಮ್ಮ ಪಕ್ಷವು ಮತ್ತೆ ಸಿರುಗುಪ್ಪ ವಿಧಾನಸಭಾ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಲ್ಲಿ ಅಧಿಕಾರದಲ್ಲಿ ಇರಬೇಕಾದರೆ ಯಾವುದೇ ಕಾರಣಕ್ಕೂ ಸಿರುಗುಪ್ಪ ವಿಧಾನಸಭಾ ಕ್ಷೇತ್ರ ಕಳೆದುಕೊಳ್ಳಬಾರದೆಂದು ನಮ್ಮ ಇಂಗಿತವಾಗಿದೆ ಎಂದು ತಿಳಿಸಿದರು.
ಅಕಸ್ಮಾತ್ ಸೋಮಲಿಂಗಪ್ಪರಿಗೆ ಪಕ್ಷ ಟಿಕೆಟ್ ನೀಡಿದರೆ ಇಲ್ಲಿ ಬಿಜೆಪಿ ಪಕ್ಷ 30,000ಕ್ಕೂ ಅಧಿಕ ಮತಗಳಿಂದ ಸೋಲುವುದು ನಿಶ್ಚಿತ. ಇದು ಅನೇಕ ಕಾರ್ಯಕರ್ತರ ಒಕ್ಕೊರಲ ಒಮ್ಮತದ ಮನದಾಳದ ಮಾತುಗಳಾಗಿವೆ
ಆದ್ದರಿಂದ ಪಕ್ಷದ ಹಿತಕ್ಕಾಗಿ ಈ ಮೂಲಕ ಪಕ್ಷದ ಹಿರಿಯರು ಮತ್ತು ಹೈಕಮಾಂಡಿಗೂ ಸಹ ವಿನಂತಿಸುತ್ತಿದ್ದೇನೆ ಎಂದು ತಿಳಿಸಿದರು
ಈ ಸುದ್ದಿಗೋಷ್ಠಿ ವೇಳೆ ಬಿಜೆಪಿ ಎಸ್.ಟಿ.ಮೊರ್ಚ್ ರಾಜ್ಯ ಕಾರ್ಯಕಾರಣಿ ಮಾಜಿ ಸದಸ್ಯ ಜಿ.ಸಿದ್ದಪ್ಪ,
ಎಸ್ ಸಿ ಮೋರ್ಚ ಮಾಜಿ ಜಿಲ್ಲಾಧ್ಯಕ್ಷ ಕೊಡ್ಲೆ ಮಲ್ಲಿಕಾರ್ಜುನ, ಸಿರುಗುಪ್ಪ ನಗರಸಭೆ ಮಾಜಿ ಸದಸ್ಯ ವಿರೂಪಾಕ್ಷಿ, ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಜಿಲ್ಲಾಧ್ಯಕ್ಷ ಎರೆಪ್ಪ, ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಮುದ್ದು ವೀರಪ್ಪ, ಉಪಾಧ್ಯಕ್ಷ ಶಾಂತನಗೌಡ, ತಾ.ಪಂ ಮಾಜಿ ಸದಸ್ಯರಾದ ದೇವೇಂದ್ರ, ಫಕೀರಪ್ಪ, ಶಾನುವಾಸಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಂಪಾಪತಿ ಮುಖಂಡರಾದ ಬೆಳಗಲ್ ಮಂಜು, ಹುಸೇನ್ ಸಾಬ್, ಚೌದ್ರಿ ಬಾಷಾ ಸೇರಿದಂತೆ ಅನೇಕರಿದ್ದರು.
ವರದಿ ಎಂ ಪವನ್ ಕುಮಾರ್
ಸಿದ್ದಿ ಟಿವಿ ಸಿರುಗುಪ್ಪ
Tags
ರಾಜಕೀಯ