Siruguppa : ಭತ್ತದ ನಾಡಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಎಂಎಸ್ ಸೋಮಲಿಂಗಪ್ಪ ಅವರು ನಾಮಪತ್ರ ಸಲ್ಲಿಕೆ

ರಂಗೇರಿದ ವೈಭವದ ಆಡಂಭರದ ಜೊತೆಗೆ ಇಂದು ಭತ್ತದ ನಾಡಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಎಂಎಸ್ ಸೋಮಲಿಂಗಪ್ಪ ಅವರು ನಾಮಪತ್ರ ಸಲ್ಲಿಕೆ
92ನೇ ಸಂಖ್ಯೆಯ ಪರಿಶಿಷ್ಟ ಪಂಗಡ ಮೀಸಲಾತಿಯ ವಿಧಾನಸಭಾ ಕ್ಷೇತ್ರವಾದ ಸಿರುಗುಪ್ಪ ವಿಧಾನಸಭಾ ಕ್ಷೇತ್ರಕ್ಕೆ ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಎರಡನೇ ವಿಭಾಗದ ನಿವಾಸಿ ಲೇಟ್ ಎಮ್ ಸಿದ್ದಪ್ಪ ಇವರ 62 ವರ್ಷ ವಯಸ್ಸಿನ ಪುತ್ರ ಎಂಎಸ್ ಸೋಮಲಿಂಗಪ್ಪ ತಾಲೂಕು ಅಧ್ಯಕ್ಷ , ಆರ್ ಸಿ ಪಂಪನಗೌಡ, ಪಕ್ಷದ ಹಿರಿಯ ಮುಖಂಡ ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ದಮ್ಮೂರು ಸೋಮಪ್ಪ, ಕುಂಟ್ನಾಳ ಮಲ್ಲಿಕಾರ್ಜುನ ಸ್ವಾಮಿ 
 ಮತ್ತು ಸೂಚಕರಾಗಿ ಎಂ ಆರ್ ಬಸವನಗೌಡ  ಇವರೊಂದಿಗೆ ಶಾಸಕ ಸ್ಥಾನದ ಸ್ಪರ್ಧೆಗಾಗಿ ತಮ್ಮ ಉಮೇದುವಾರಿಕೆಯನ್ನು ಚುನಾವಣಾ ಅಧಿಕಾರಿ ಕೆಹೆಚ್ ಸತೀಶರಿಗೆ ಸಲ್ಲಿಸಿದರು
ಒಟ್ಟು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಇವರು ಎರಡು ಬಾರಿ ಬಿಜೆಪಿ ಪಕ್ಷದಿಂದಲೇ ಗೆಲುವು ಸಾಧಿಸಿದ್ದು ಇದೀಗ ಪಕ್ಷದ ವತಿಯಿಂದ ಮತ್ತೆ ಟಿಕೆಟ್ ಪಡೆಯಲ್ಲಿ ಯಶಸ್ವಿಯಾಗಿ ಹ್ಯಾಟ್ರಿಕ್ ...ಕೆಲವರು ಸಾಧಿಸಿ ಮಂತ್ರಿ ಪದವಿ ಪಡೆಯುವ ಸಾಧನೆಯ ಹಾದಿಯಲ್ಲಿದ್ದಾರೆ ಹೀಗಾಗಿ ಈ ಬಾರಿಯ ನಾಮಪತ್ರ ಸಲ್ಲಿಕೆ ಮೆರವಣಿಗೆಗೆ ತಾಲೂಕಿನ ಅನೇಕ ಭಾಗಗಳಿಂದ ಮುಖಂಡರು ಕಾರ್ಯಕರ್ತರು ಮತ್ತು ಅಭಿಮಾನಿಗಳನ್ನು ಆಹ್ವಾನಿಸಿದ್ದು ಸಾವಿರಾರು ಜನ ನಗರದ ತಾಲೂಕು ಕ್ರೀಡಾಂಗಣದಲ್ಲಿ ಸೇರಿ ಶಕ್ತಿ ಪ್ರದರ್ಶನ ಬಲ ಪ್ರದರ್ಶನ ಮೂಲಕ ರೋಡ್ ಶೋ ನಡೆಸಿದರು.  ಪಕ್ಷದ ಜವಾಬ್ದಾರಿ ಇರುವ ಅನೇಕ ಮುಖಂಡರು ಜನಪ್ರತಿನಿಧಿಗಳು ಕಾರ್ಯಕರ್ತರು ಮತ್ತು ಅಭಿಮಾನಿಗಳು ಸೇರಿ ಹನುಮಧ್ವಜ ,ಬಿಜೆಪಿ ಪಕ್ಷದ ಧ್ವಜ, ಬಿಜೆಪಿ ಹೆಸರಿನ ಟೋಪಿ ಸಾಲುಗಳನ್ನು ಧರಿಸಿ ಅದ್ದೂರಿ ಮೆರವಣಿಗೆಯಲ್ಲಿ ಸಾಗಿ ಬಂದರು 
ನಾಮಪತ್ರ ಸಲ್ಲಿಕೆಯ ನಂತರ ಶಾಸಕ ಎಂ ಎಸ್ ಸೋಮಲಿಂಗಪ್ಪ ಮಾತನಾಡಿ ಕ್ಷೇತ್ರದ ಪ್ರತಿಯೊಂದು ತಾಲೂಕಿನಲ್ಲಿ ನಾವು ಮಾಡಿರುವ ಅಭಿವೃದ್ಧಿ ಕಾರ್ಯಗಳೇ ನಮಗೆ ಶ್ರೀರಕ್ಷೆ, ಹೀಗಾಗಿ ಅತ್ಯಂತ ಹೆಚ್ಚಿನ ಬಹುಮತದ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿದ್ದೇನೆ ಮತ್ತೆ ಶಾಸಕನಾಗಿ ಬಂದ ನಂತರ ಸಿರುಗುಪ್ಪ ನಗರದಲ್ಲಿ 75 ಕೋಟಿ ವೆಚ್ಚದಲ್ಲಿ ಏತ  ನೀರಾವರಿ ಮಾಡಿಕೊಡುತ್ತೇವೆ ಒಂದು ತುಂಗಭದ್ರಾ ನದಿಯಿಂದ ಮತ್ತೊಂದು ವೇದಾವತಿ ನದಿಯಿಂದ ಅಧಿಕಾರಕ್ಕೆ ಬಂದ ಎರಡು ತಿಂಗಳ ಒಳಗಡೆ ರೈತರಿಗೆ ನೀರನ್ನು ಒದಗಿಸಿಕೊಡುತ್ತೇವೆ ಎಂದು ಭರವಸೆ ಕೊಟ್ಟರು ಮತ್ತು ಉಪ್ಪಾರ ಹೊಸಳ್ಳಿ ಹತ್ತಿರ 12.5 ಎಕ್ಕರೆ ಗೋಶಾಲೆ ಮಾಡುತ್ತೇವೆ ಎಂದು ತಿಳಿಸಿದರು.

ವರದಿ ಎಂ ಪವನ್ ಕುಮಾರ್
ಸಿದ್ದಿ ಟಿವಿ ಸಿರುಗುಪ್ಪ
Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">