ಬಾಗೇವಾಡಿ ಗ್ರಾಮದಲ್ಲಿ ಪೊಲೀಸ್ ಮತ್ತು ಅರಸೇನಾ ಪಡೆಯಿಂದ ಪಥ ಸಂಚಲನ
ಸಿರುಗುಪ್ಪ :ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ ದಡೇಸುಗೂರು ಮಾರ್ಗದಿಂದ ಅರಸೀನಾ ಪಡೆಯ ಪಥ ಸಂಚಲನ ಪ್ರಾರಂಭಗೊಂಡಿತು ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮುಕ್ತ ಹಾಗೂ ಪಾರದರ್ಶಕ ಮತದಾನಕ್ಕಾಗಿ ಚುನಾವಣಾ ಆಯೋಗದ ಸೂಚನೆಯಂತೆ ಮತದಾರರು ಧೈರ್ಯವಾಗಿ ಮತಗಟ್ಟೆಗೆ ಬಂದು ತಮ್ಮ ಹಕ್ಕಿನ ಮತ ಚಲಾಯಿಸಲು ಹಾಗೂ ಯಾವುದೇ ಅಕ್ರಮಗಳಿಗೆ ಅವಕಾಶವಿಲ್ಲದಂತೆ ನಿರ್ಭೀತ ಮತದಾನದ ಚುನಾವಣೆಗಾಗಿ ನಾವಿದ್ದೇವೆ ಎಂಬ ಅಂಶ ಸರ್ವ ಹರಸೇನ ಪಡೆಯ ಪತ ಸಂಚಲನವು ಗುರುವಾರ ಸಾಯಂಕಾಲ ಪೊಲೀಸ್ ಇಲಾಖೆ ಮತ್ತು ಅರಸೇನೆ ಪಡೆಯಿಂದ ನಡೆಯಿತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಿಸ್ತುಬದ್ಧವಾಗಿ ಪಥಸಂಚನದಲ್ಲಿ ಸಾಗುತ್ತಿರುವ ಯೋಧರಿಗೆ ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ಸಾರ್ವಜನಿಕರು ಸ್ವಾಗತ ಕೋರಿದರು.
ನಂತರ ಸಿರುಗುಪ್ಪ ಸಿಪಿಐ ಯಶ್ವಂತ್ ಬಿಸ್ನಳ್ಳಿ ಮಾತನಾಡಿ ಒತ್ತಡಗಳನ್ನು ಬದುಗೊತ್ತಿ ಮತದಾನದಲ್ಲಿ ಪಾಲ್ಗೊಳ್ಳಿ ಯಾವುದೇ ಆಮಿಷವಾಗಲಿ ಭಯ ಆಗಲಿ ಯಾವುದೇ ಬೆದರಿಕೆ ಆಗಲಿ ಅತಿ ನಿರ್ಭೀತಿಯಿಂದ ಚುನಾವಣೆಯನ್ನು ಎದುರಿಸುವ ಮತದಾರರು ಮಾಡಬೇಕು ತಮ್ಮೆಲ್ಲರ ಬೆಂಬಲಕ್ಕೆ ಸರ್ಕಾರದ ಎಲ್ಲಾ ಅಧಿಕಾರಿಗಳು ಕೆಲಸ ಮಾಡಕ್ಕೆ ರೆಡಿ ಇದ್ದಾರೆ ಎಂದು ತಿಳಿಸಿದರು.
ವರದಿ ಎಂ ಪವನ್ ಕುಮಾರ್
ಸಿದ್ದಿ ಟಿವಿ ಸಿರುಗುಪ್ಪ
Tags
ರಾಜ್ಯ