Siruguppa-ಲಾಳಗೊಂಡ ಸಮಾಜ ಮುಖಂಡರಿಂದ ಸುದ್ದಿಗೋಷ್ಠಿ

ನಗರದ ವಿಜಯ ವಿಠಲ ನಗರದಲ್ಲಿನ ಸಾಧನ ಕೋಚಿಂಗ್ ಸೆಂಟರ್ ಕಚೇರಿಯಲ್ಲಿ ಲಾಳಗೊಂಡ ಸಮಾಜ ಮುಖಂಡರಿಂದ ಸುದ್ದಿಗೋಷ್ಠಿ

ಲಾಳಗೊಂಡ ಸಮಾಜದ ಮುಖಂಡರು ಮಾತನಾಡಿ ನಮ್ಮ ಸಮಾಜವನ್ನು ಜಾತಿ ಪಟ್ಟಿಗೆ ಸೇರ್ಪಡೆ ಮಾಡುವಂತೆ ಸುಮಾರು 30 ವರ್ಷಗಳಿಂದ ಮನವಿ ಸಲ್ಲಿಸಲಾಗುತ್ತಿತ್ತು. ಸರಕಾರ ಸಕಾರತ್ಮಕವಾಗಿ ಸ್ಪಂದನೆ ನೀಡಿರಲಿಲ್ಲ, ಆದರೆ ಕಳೆದ ಒಂದು ತಿಂಗಳಲ್ಲಿ ಸಿರುಗುಪ್ಪ ತಾಲೂಕಿನ ಹಾಗೂ ರಾಯಚೂರು ಜಿಲ್ಲೆಯ ಪದಾದಿಕಾರಿಗಳ ನಿರಂತರ ಸಂಪರ್ಕ ಮಾಡಿದ್ದರಿಂದ ಸರಕಾರವು ಸ್ಪಂದಿಸಿ ಲಾಳಗೊಂಡರನ್ನು ಜಾತಿ ಪಟ್ಟಿಯಲ್ಲಿ ಸೇರ್ಪಡೆ ಮಾಡಿರುವುದು ಸಂತಸ ತಂದಿದೆ. 
 ಲಾಳಗೊಂಡ ಸಮಾಜವನ್ನು 2ಡಿ ಜಾತಿ ಪಟ್ಟಿಗೆ ಸೇರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವರಿಗೆ ಶಾಸಕರಿಗೆ ಮನವಿ ಸಲ್ಲಿಸಲಾಗಿತ್ತು ಎಲ್ಲರ ಸಹಕಾರದಿಂದ ಸ್ವಾತಂತ್ರಾನಂತರ ಲಾಳಗೊಂಡ ಸಮಾಜವನ್ನು ಜಾತಿ ಪಟ್ಟಿಗೆ ಸೇರ್ಪಡೆ ಮಾಡಿರುವುದಕ್ಕೆ ಹೋರಾಟಕ್ಕೆ ಸಂದ ಗೌರವವಾಗಿದೆ. 

 ಜಾತಿ ಪಟ್ಟಿ ಸೇರ್ಪಡೆಗೆ ಕಾರಣರಾದ ಕೊಪ್ಪಳ ಸಂಸದ ಕರಡಿ ಸಂಗಣ್ಣ, ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್ ಹಾಗೂ ಶಾಸಕ ಎಂ.ಎಸ್. ಸೋಮಲಿಂಗಪ್ಪ, ಸಿಂಧನೂರು ಶಾಸಕ ವೆಂಕಟರಾವ್‌ನಾಡಗೌಡ, ಕನಕಗಿರಿ ಶಾಸಕ ದಡೇಸೂಗೂರು ಬಸವರಾಜರ ನಿಯೋಗದೊಂದಿಗೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಡಾ.ಜಯಪ್ರಕಾಶ ಹೆಗಡೆಯವರಿಗೆ ಮಾಡಿದ ಮನವಿಗೆ ತಕ್ಷಣವೇ ಸ್ಪಂದಿಸಿ ಸರಕಾರಕ್ಕೆ ಜಾತಿ ಸೇರ್ಪಡೆಗೆ ಅಗತ್ಯ ವರದಿಯನ್ನು ನೀಡುವ ಮೂಲಕ ಹಿಂದುಳಿದ ವರ್ಗ 2 ಡಿಗೆ ಲಾಳಗೊಂಡ ಜಾತಿಯನ್ನು ಸೇರ್ಪಡೆ ಮಾಡಿರುವುದು ಅವರ ಸೇವೆಗೆ ಗೌರವ ಸಲ್ಲಿಸಬೇಕಾಗಿದೆ. 
ಅಭಿನಂದನ ಕಾರ್ಯಕ್ರಮ ಹಮ್ಮಿಕೊಳ್ಳಲು ಚುನಾವಣೆ ನೀತಿ ಸಂಹಿತೆ ಜಾರಿ ಇದ್ದಕಾರಣ ಮುಂದಿನ ದಿನಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದರು.
 
ಈ ವೇಳೆ ಲಾಳಗೊಂಡ ಸಮಾಜದ ಮಾಜಿ ಅಧ್ಯಕ್ಷ ಆರ್.ಸಿ.ಪಂಪನಗೌಡ, ಅಧ್ಯಕ್ಷ ಜೆ.ಬಸವನಗೌಡ, ಪ್ರದಾನ ಕಾರ್ಯದರ್ಶಿ ಪಂಪಾಪತಿ ಓತೂರು. ಖಜಾಂಚಿ ರವಿಕುಮಾರ, ಸಮಾಜದ ಮುಖಂಡರಾದ ದೊಡ್ಡವೀರನಗೌಡ, ಎಂ.ಆರ್.ಬಸವನಗೌಡ, ಮಾಜಿ ಕಾರ್ಯದರ್ಶಿ ಎನ್.ಲಿಂಗನಗೌಡ, ಬಿ.ಸುರೇಶಗೌಡ, ಗಜಿಗಿನಹಾಳು ಮರೇಗೌಡ ಸೇರಿದಂತೆ ಇತರರು ಇದ್ದರು.

ವರದಿ : ಎಂ ಪವನ್ ಕುಮಾರ್
ಸಿದ್ದಿ ಟಿವಿ ಸಿರುಗುಪ್ಪ
Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">