Teacher : ಶಿಕ್ಷಕಿ ಮರಿಯಮ್ಮ‌ ಬೆಲ್ಲದ ವಯೋನಿವೃತ್ತಿ : ಶಿಕ್ಷಕರ ಸಂಘದಿಂದ ಸನ್ಮಾನ

ಶಿಕ್ಷಕಿ ಮರಿಯಮ್ಮ‌ ಬೆಲ್ಲದ ವಯೋನಿವೃತ್ತಿ : 
ಶಿಕ್ಷಕರ ಸಂಘದಿಂದ ಸನ್ಮಾನ
ಕೊಪ್ಪಳ,: ಸುದೀರ್ಘ 26 ವರ್ಷಗಳ ಕಾಲ ಶಿಕ್ಷಣ ಇಲಾಖೆಯಲ್ಲಿ ಸೇವೆಯನ್ನು ಸಲ್ಲಿಸಿ, ಮಕ್ಕಳ ಬಾಳಿಗೆ ಬೆಳಕಾದ ಶಿಕ್ಷಕಿ ಶ್ರೀಮತಿ‌ ಮರಿಯಮ್ಮ ಬೆಲ್ಲದ ಅವರು ವಯೋನಿವೃತ್ತಿಯನ್ನು ಪಡೆದಿದ್ದಾರೆ. ನಿವೃತ್ತಿ ಕಾರ್ಯಕ್ರಮವನ್ನು ತಾಲೂಕಿನ ಹೂವಿನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತ್ಯಂತ ಅರ್ಥಗರ್ಭಿತವಾಗಿ ಜರುಗಿತು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಶರಣಬಸನಗೌಡ ಪಾಟೀಲ ಅವರು ಮಾತನಾಡಿ, ಶಿಕ್ಷಕಿ ಮರಿಯಮ್ಮ‌ ಬೆಲ್ಲದರವರು ನೊಂದವರಿಗೆ ಸಹಾಯ ಮಾಡುವ ಗುಣ, ಕಷ್ಟದಲ್ಲಿರುವವರಿಗೆ ಸಾಂತ್ವನಹೇಳಿ ಬದುಕನ್ನು ಪ್ರೀತಿಸುವ ಗುಣ ಕಲಿಸಿದವರು. ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ಅಂಗನವಾಡಿ ಶಿಕ್ಷಕಿ, ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಶಿಕ್ಷಕರ ಮದರ್ ಥೆರೆಸಾ ಎಂದು ಪ್ರೀತಿಯಿಂದ ಕರೆಯಿಸಿಕೊಂಡ ಶ್ರೀಮತಿ ಮರಿಯಮ್ಮ ಬೆಲ್ಲದರವರ ಜೀವನ‌ ಸು:ಖ ಶಾಂತಿ ನೆಮ್ಮದಿ ದೊರೆಯಲೆಂದು ಶಿಕ್ಷಕರ  ಶುಭ ಕೊರುತ್ತೇನೆ ಎಂದರು. 
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ‌.ಬಿ. ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಕಮಲಾಪುರ, ತಾಲ್ಲೂಕಾ ಅಧ್ಯಕ್ಷ ಕೊಟ್ರಪ್ಪ ಗಡಗಿ, ಸರಕಾರಿ ನೌಕರರ ಸಂಘದ ನಿರ್ದೇಶಕ ಸುಬಾಸರೆಡ್ಡಿ, ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು, ಮುಖ್ಯೋಪಾಧ್ಯಾಯ ವೀರೇಶ ಅರಳಿಕಟ್ಟಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪೂರ್ಣಿಮಾ ತುಪ್ಪದ, ಸಂಘಟನಾ ಕಾರ್ಯದರ್ಶಿ ರಮೇಶ ಬುಡ್ಡನಗೌಡ್ರ, ನಿರ್ದೇಶಕರಾದ ಬಾಳಪ್ಪ ಕಾಳಿ, ಸಂಪನ್ಮೂಲ ವ್ಯಕ್ತಿಗಳಾದ ಬಸನಗೌಡ್ರ ವಣಗೇರಿ, ಮರ್ದಾನಪ್ಪ, ಮುಖ್ಯ ಗುರುಗಳಾದ ವಿಜಯಕುಮಾರ ಹೂಗಾರ, ನಿವೃತ್ತ ಶಿಕ್ಷಕ ಪಂಪಣ್ಣ, ಶಿಕ್ಷಕರಾದ ಬಸವರಾಜ ನಾಗರೆಡ್ಡಿ, ಶ್ರೀಕಾಂತ ಬಣವಿ, ಗವಿಸಿದ್ದಪ್ಪ, ಧರ್ಮಪ್ಪ ಕಾತರಕಿ, ಶಶಿಕಲಾ, ಪ್ರಭಾವತಿ, ಕವಿತಾ ಸೇರಿದಂತೆ ಸಿಬ್ಬಂದಿ ವರ್ಗದವರು
ಇದ್ದರು.

ವರದಿ : ಶಿವಕುಮಾರ ಹಿರೇಮಠ
Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">