ಸಡಗರದಿಂದ ರಂಜಾನ್ ಹಬ್ಬ ಆಚರಣೆ
ಸಿಂಧನೂರು ತಾಲೂಕಿನ ತುರ್ವಿಹಾಳ ಪಟ್ಟಣದ ಈದ್ಗಾ ಮೈದಾನದಲ್ಲಿ ಈದ್ ಉಲ್ ಫೀತರ್ ಉಪವಾಸ ಮಾಸದ ಕೊನೆಯ ದಿನವಾಗಿದ್ದು ಶನಿವಾರ ದಂದು ಮುಸ್ಲಿಂ ಬಾಂಧವರು ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುವ ಮೂಲಕ ರಮಜಾನ್ ಹಬ್ಬ ಆಚರಣೆ ಮಾಡಿದರು.
ನಂತರ ಧರ್ಮ ಗುರುಗಳಾದ ಜಹೀರುದ್ದಿನ್ ಸಾಬ್ ಖಾಜಿ ಮಾತನಾಡಿ ರಮಜಾನ್ ತಿಂಗಳು ಸಂಪೂರ್ಣ ವ್ರತಾಚರಣೆ ಯಾಗಿದೆ. ಇದೇ ತಿಂಗಳಲ್ಲಿ ಪವಿತ್ರ ಕುರಾನ್ ಅವತೀರ್ಣಗೊಂಡಿತು. ಇದರ ಗೌರವಾರ್ಹ ಪ್ರತಿವರ್ಷವೂ ಈ ಒಂದು ತಿಂಗಳ ವ್ರತಾಚರಣೆಯನ್ನು ಕಡ್ಡಾಯ ಗೊಳಿಸಲಾಯಿತು. ದೇಹ ಮತ್ತು ಮನಸನ್ನು ಪವಿತ್ರಗೊಳಿ ಸುವುದೇ ಒಂದು ತಿಂಗಳ ಪೂರ್ಣ ವ್ರತಾಚರಣೆಯ ಉದ್ದೇಶವಾಗಿದೆ ಎಂದು ಹೇಳಿದರು.
ಶುಕ್ರವಾರ ಚಂದ್ರ ದರ್ಶನವಾಗಿದ್ದರಿಂದ,ಈದ್ ಉಲ್ ಫಿತರ್ ಶನಿವಾರ ಆಚರಿಸಲಾಗುತ್ತದೆ.
ಈ ಹಬ್ಬವು ಸತ್ಯ,ಶಾಂತಿ ಮತ್ತು ಸೌಹಾರ್ದತೆಗೆ ಸಂಕೇತವಾಗಿದೆ. ಪಟ್ಟಣದ ಮುಸ್ಲಿಂ ಬಾಂಧವರು ಒಬ್ಬರನ್ನೊಬ್ಬರು ಅಪ್ಪಿಕೊಂಡು ರಂಜಾನ್ ಹಬ್ಬದ ಶುಭಾಶಯ ಹೇಳುತ್ತಾ ಹಬ್ಬವನ್ನು ಆಚರಿಸಿದರು.
ಈದ್ಗಾ ಮೈದಾನದಲ್ಲಿ ಸಮಿಉಲ್ಲಾ ಅಫೀಜ್ ಪ್ರಾರ್ಥನೆ ಮಾಡಿಸಿದರು, ಶಾಸಕರ ಸಹೋದರ ಶೇಖರಗೌಡ ದೇವರಮನಿ, ಆರ್ ಶಿವನಗೌಡ, ಬಾಪುಗೌಡ ದೇವರಮನಿ, ಪ್ರಕಾಶ ಗುತ್ತೇದಾರ, ಯಂಕಪ್ಪ, ಹಾಗೂ ಸಮಾಜದ ಹಿರಿಯರು ಮತ್ತು ಯುವಕರು ಸೇರಿದಂತೆ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು.
ವರದಿ : ಮೆಹಬೂಬ್ ಮೊಮಿನ್
Tags
ರಾಜ್ಯ