ದೀನದಲಿತರ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ಹಾಕಿ. ಡಾ.ಸತೀಶ್ಚಂದ್ರದ್ವೆವೇದಿ.
ತುರ್ವಿಹಾಳ:ಪಟ್ಟಣದ ಪ್ರಮುಖ ವೃತ್ತಗಳಾದ ವಾಲ್ಮೀಕಿ,ಬಸವೇಶ್ವರ, ಅಂಬೇಡ್ಕರ್,ಕನಕದಾಸ, ಸರ್ವಜ್ಞರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ರಾಜ್ಯದ ಅಭಿವೃದ್ಧಿ ಕೇವಲ ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ಸಾಧ್ಯ. ಮಾನ್ಯ ಮತದಾರರು ಬಿಜೆಪಿಗೆ ಮತ ಚಲಾಯಿಸುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೆ ತನ್ನಿ ಎಂದು ಉತ್ತರ ಪ್ರದೇಶದ ಮಾಜಿ ಸಚಿವ ಡಾ.ಸತೀಶ್ಚಂದ್ರ ದ್ವೆವೇದಿ ತಿಳಿಸಿದರು.
ಅವರು ಚುನಾವಣಾ ಪ್ರಚಾರದಲ್ಲಿ ಮಾತನಾಡಿ ಮಾನ್ಯ ಪ್ರಧಾನಿ ನರೇಂದ್ರ ಮೋದಿಜಿ ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರವು ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದು ಮಹಿಳೆಯರು ದೀನ ದಲಿತರು ಮತ್ತು ಮಧ್ಯಮ ವರ್ಗದ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದ್ದು ಅದನ್ನು ಯಶಸ್ವಿಯಾಗಿ ಜನಸಾಮಾನ್ಯರ ಮನೆ ಮನೆಗೆ ತಲುಪಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಈ ಹಿಂದೆ ರಾಜ್ಯವನ್ನು ಕೊಳ್ಳೆ ಹೊಡೆದಿದ್ದು ಸಾಮೂಹಿಕ ಹತ್ಯೆಗೆ ಕುಮ್ಮಕ್ಕು ನೀಡಿದ್ದು.ಮತ್ತೊಮ್ಮೆ ರಾಜ್ಯವನ್ನು ದಿವಾಳಿಗೆ ನೂಕಲು ತಯಾರಾಗಿದ್ದು ಇದನ್ನು ತಡೆಯಲು ಮಸ್ಕಿಯಲ್ಲಿ ಪಬಿಜೆಪಿಯ ಅಭ್ಯರ್ಥಿ ಸರಳ ವ್ಯಕ್ತಿತ್ವ ಉಳ್ಳ ಪ್ರತಾಪಗೌಡ ಪಾಟೀಲ್ ಗೆಲ್ಲಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರ.ಕಾ. ಓಂಪ್ರಕಾಶ್ ದೃಭೆ. ಪ್ರಸನ್ನ ಪಾಟೀಲ್. ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ. ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸಿದ್ದೇಶ್ವರ ಗುರಿಕಾರ್,ನಿಂಗಪ್ಪ ಕಟ್ಟಿಮನಿ,ಕರಕಪ್ಪ ಸಾಹುಕಾರ
ವೇಂಕೋಬಯ್ಯ ಶ್ರೇಷ್ಠಿ, ತಿರುಪತೇಪ್ಪ ನಾಯಕ್,ಮೌನೇಶ್ ಮಸ್ಕಿ, ದುರುಗೇಶವಕೀಲರು, ಚನ್ನಬಸವ ದೇಸಾಯಿ, ಶಿವಕುಮಾರ್,ಕರಿಯಪ್ಪ ಭಂಗಿ ಎಂ.ಡಿ.ಇಸ್ಮಯಿಲ್ ಖಾಜಿ, ನಿರುಪಾದಿ,ಸುಖಮುನಿ, ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು ಕಾರ್ಯಕರ್ತರು ಇದ್ದರು.
ವರದಿ : ಮೆಹಬೂಬ್ ಮೊಮಿನ್