************
ಉತ್ತರಪ್ರದೇಶ; ಯುವಕನೊಬ್ಬ ಪ್ರೀತಿಸುತ್ತಿದ್ದ ಯುವತಿ ತನ್ನ ಪ್ರಿಯತಮನ ತಂದೆಯೊಂದಿಗೆ ಪರಾರಿಯಾಗಿರುವ ಅಚ್ಚರಿಯ ಘಟನೆ ಉತ್ತರಪ್ರದೇಶದ ಕಾನ್ಪುರದ ಚಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಪ್ರಿಯಕರನ ತಂದೆಯ ಜೊತೆ ಓಡಿಹೋಗಿ 13 ತಿಂಗಳ ಸಂಸಾರವನ್ನು ಕೂಡ ಈಕೆ ನಡೆಸಿದ್ದಾಳೆ. ನಾಪತ್ತೆಯಾಗಿದ್ದ ಯುವತಿ ದೆಹಲಿಯಿಂದ ಪೊಲೀಸರ ಕೈಗೆ ಸಿಕ್ಕಿದ್ದಾರೆ.
ಉತ್ತರ ಪ್ರದೇಶದ ಔರೈಯಾ ಜಿಲ್ಲೆಯ ಕಂಜುಸಿ ಗ್ರಾಮದ ನಿವಾಸಿ ಕಮಲೇಶ್ ಕುಮಾರ್ ವೃತ್ತಿಯಲ್ಲಿ ಮೇಸ್ತ್ರಿ ಆಗಿದ್ದರು. 2022ರಲ್ಲಿ, ಅವರು ತಮ್ಮ ಮಗ ಅಮಿತ್ ಜೊತೆ ಚಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ಸಮಯದಲ್ಲಿ, ಅವನ ಮಗ ಆ ಪ್ರದೇಶದಲ್ಲಿ ವಾಸಿಸುವ ಹುಡುಗಿಯೊಂದಿಗೆ ಸ್ನೇಹ ಬೆಳೆಸಿದ್ದ. ಕ್ರಮೇಣ ಇಬ್ಬರಿಗೂ ಪ್ರೇಮಾಂಕುರವಾಗಿದೆ. ಈ ವಿಚಾರ ತಿಳಿದ ಕೂಡಲೇ ಕಮಲೇಶ್ ಕುಮಾರ್ ಮಗನನ್ನು ಗದರಿಸಿ ಮನೆಗೆ ಬೀಗ ಹಾಕಿ ಬಾಲಕಿಯನ್ನು ಭೇಟಿಯಾಗದಂತೆ ನಿರ್ಬಂಧ ಹೇರಿದ್ದ.
ಆದರೂ ಯುವತಿಯೊಂದಿಗೆ ಮೊಬೈಲ್ನಲ್ಲಿ ಮಾತನಾಡುವುದನ್ನು ಅಮಿತ್ ಮುಂದುವರಿಸಿದ್ದ. ನಂತರ ಇಬ್ಬರ ಮದುವೆಗೆ ಕಮಲೇಶ್ ಒಪ್ಪಿಗೆ ಸೂಚಿಸಿದ್ದ ಎನ್ನಲಾಗಿದೆ.ಆದರೆ ಮಾರ್ಚ್ 2022ರಲ್ಲಿ ಆ ಯುವತಿ ಕಾಣೆಯಾಗಿದ್ದಳು.
ಯುವತಿ ಮನೆಯವರು, ಸಂಬಂಧಿಕರು ಅಪರಿಚಿತರ ವಿರುದ್ಧ ಚಕೇರಿ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದರು.
ಇನ್ನೊಂದು ಕಡೆ ಅಮಿತ್ ನ ತಂದೆ ಕಮಲೇಶ್ ಕೂಡ ಕಾಣೆಯಾಗಿದ್ದಾರೆ. ಈ ಕುರಿತು ಯುವತಿ ಕುಟುಂಬಸ್ಥರು ಹಾಗೂ ಅಮಿತ್ ಕುಟುಂಬಸ್ಥರು ಈ ಬಗ್ಗೆ ಪ್ರತ್ಯೇಕ ದೂರು ದಾಖಲಿಸಿದ್ದರು.
ಪ್ರತ್ಯೇಕ ದೂರುಗಳನ್ನು ದಾಖಲಿಸಿಕೊಂಡಿದ್ದ ಪೊಲೀಸರು ಕಳೆದ ಒಂದು ವರ್ಷದಿಂದ ಹುಡುಕಾಟ ನಡೆಸಿದ್ದಾರೆ. ಕೊನೆಗೆ ಪೊಲೀಸರು ಕಮಲೇಶ್ ಹಾಗೂ ಯುವತಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ಇಬ್ಬರು ದೆಹಲಿಯಲ್ಲಿ ಜೊತೆಯಾಗಿ ವಾಸವಿದ್ದರು. ಯುವತಿಯನ್ನು ರಕ್ಷಿಸಿರುವ ಪೊಲೀಸರು ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಇನ್ನು ಕಮಲೇಶನ್‌ನ್ನು ವಶಕ್ಕೆ ಪಡೆದಿದ್ದಾರೆ.
ಸಿದ್ದಿ ಟಿವಿ