ಏಪ್ರಿಲ್ 13 ಕುಕನೂರ್ ಗೆ ಟಗರು ಸಿದ್ದರಾಮಯ್ಯ : ರಂಗೇರಿದ ಕಾಂಗ್ರೆಸ್ ಪ್ರಚಾರ
ಕುಕನೂರು : ಇದೇ ಏಪ್ರಿಲ್ 13 ರಂದು ಕುಕನೂರು ಪಟ್ಟಣಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದು ಕಾಂಗ್ರೆಸ್ ಚುನಾವಣೆ ಪ್ರಚಾರಕ್ಕೆ ಭರ್ಜರಿ ಚಾಲನೆ ಕೊಡಲಿದ್ದಾರೆ. ಈ ಮೂಲಕ 2023 ಚುನಾವಣೆ ತಾಲೂಕಿನಲ್ಲಿ ಮತ್ತಷ್ಟು ರಂಗೇರಲಿದೆ.
ಏಪ್ರಿಲ್ 13 ರಂದು ಕಾಂಗ್ರೆಸ್ ಪಕ್ಷದಿಂದ ಯಲಬುರ್ಗಾ ವಿಧಾನಸಭಾ ಚುನಾವಣೆ ಪ್ರಚಾರ ನಿಮಿತ್ತ ಕುಕನೂರ್ ಪಟ್ಟಣದಲ್ಲಿ ಬ್ರಹತ್ ಪ್ರಚಾರ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರಲ್ಲಿ ಸತೀಶ್ ಜಾರಕಿಹೊಳಿ, ಭೈರತಿ ಸುರೇಶ್, ಸೇರಿದಂತೆ ರಾಜ್ಯ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ನ ಮೊದಲ ಪಟ್ಟಿಯಲ್ಲಿಯೇ ಟಿಕೆಟ್ ಪಡೆದಿರುವ ಬಸವರಾಜ್ ರಾಯರಡ್ಡಿ ಕ್ಷೇತ್ರದಲ್ಲೇ ನೆಲೆಸಿದ್ದು 2023 ರ ಚುನಾವಣೆಯ ಅಸಲಿ ಆಟಕ್ಕೆ ರಂಗಪ್ರವೇಶ ಮಾಡಿದ್ದಾರೆ.
ಅತ್ತ ಬಿಜೆಪಿ ಪಕ್ಷದ ಅಭ್ಯರ್ಥಿ ಇನ್ನೂ ಅಧಿಕೃತವಾಗಿಲ್ಲ, ರಾಯರಡ್ಡಿ ಎದುರಾಳಿ ಯಾರು ಎಂದು ಇನ್ನ ಮೇಲಷ್ಟೇ ಘೋಷಣೆಯಾಗಬೇಕಿದೆ. ಹಾಲಿ ಶಾಸಕ, ಸಚಿವ ಹಾಲಪ್ಪ ಆಚಾರ್ ಅವರು ತಮಗೆ ಟಿಕೆಟ್ ಸಿಗುವ ವಿಶ್ವಾಸದಲ್ಲಿ ಚುನಾವಣೆ ಪ್ರಚಾರ,ಎಂದಿನಂತೆ ಪಕ್ಷ ಸಂಘಟನೆ ಮುಂದುವರೆಸಿದ್ದಾರೆ.
ಇತ್ತ ಕಾಂಗ್ರೆಸ್ ಅಭ್ಯರ್ಥಿ ರಾಯರಡ್ಡಿ ಈಗಾಗಲೇ ತಾಲೂಕಿನಲ್ಲಿ ಪ್ರಚಾರ ಮಾಡಲು ಬಿಡುವಿಲ್ಲದ ವೇಳಾಪಟ್ಟಿ ಮಾಡಿಕೊಂಡು ಪಕ್ಷ ಸಂಘಟನೆ ಮಾಡುತ್ತಿದ್ದಾರೆ. 2023 ರ ಚುನಾವಣೆಗೆ ಕಾರ್ಯಕರ್ತರ ಪಡೆ ಸಜ್ಜು ಮಾಡುತ್ತಿದ್ದಾರೆ.
ವರದಿ : ಈರಯ್ಯ ಕುರ್ತಕೋಟಿ
Tags
ರಾಜಕೀಯ