Yalaburga : ಬಿಜೆಪಿ ಬಿಡುವುದಿಲ್ಲ : ವದಂತಿಗಳಿಗೆ ತೆರೆ ಎಳೆದ ಬಸಲಿಂಗಪ್ಪ ಬೂತೆ


ಬಿಜೆಪಿ ಬಿಡುವುದಿಲ್ಲ : ವದಂತಿಗಳಿಗೆ ತೆರೆ ಎಳೆದ ಬಸಲಿಂಗಪ್ಪ ಬೂತೆ

ಹಾಲಪ್ಪ ಆಚಾರ್ ಗೆಲುವಿಗೆ ಶ್ರಮಿಸುತ್ತೇವೆ

ಲಕ್ಷ್ಮಣ್ ಸವದಿ ಪ್ಯಾಕ್ಟ್ ರ್ ನಡೆಯುವುದಿಲ್ಲ

ಯಲಬುರ್ಗಾ  :  ಬಿಜೆಪಿ ಪಕ್ಷ ತೊರೆಯುವ ಮಾತೇ ಇಲ್ಲಾ, ಬಿಜೆಪಿಯಲ್ಲಿಯೇ ಇರುತ್ತೇನೆ ಪಕ್ಷದ ನಿರ್ಣಯಕ್ಕೆ ಬದ್ಧನಾಗಿದ್ದೇನೆ, ಸಚಿವ ಹಾಲಪ್ಪ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಲು ಶ್ರಮಿಸುತ್ತೇವೆ ಎಂದು ಯಲಬುರ್ಗಾ ಬಿಜೆಪಿ ಹಿರಿಯ ಮುಖಂಡ ಬಸಲಿಂಗಪ್ಪ ಬೂತೆ ಹೇಳಿದ್ದಾರೆ.

ಇಂದು ಯಲಬುರ್ಗಾ ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಸಲಿಂಗಪ್ಪ ಬೂತೆ ಅವರು,ಕೆಲ ದಿನಗಳಳಿಂದ ಪಕ್ಷ ಬಿಡುತ್ತಾರೆ ಎಂದು ವದಂತಿ ಹಬ್ಬಿತ್ತು, ಆದರೆ ನನು ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿ ಆಗಿದ್ದು, ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಹಾಲಪ್ಪ ಆಚಾರ್ ಅವರನ್ನು ಗೆಲ್ಲಿಸಲು  ಶ್ರಮಿಸುತ್ತೇವೆ ಎಂದು ಹೇಳಿದರು.

ಅನ್ಯ ಸಮಾಜದ ಲಿಂಗಾಯತ ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವುದು ಕ್ಷೇತ್ರದಲ್ಲಿ ಯಾವುದೇ ಪರಿಣಾಮ ಬಿರುವುದಿಲ್ಲ ಎಂದು ಪರೋಕ್ಷವಾಗಿ ಲಕ್ಷ್ಮಣ್ ಸವದಿ ಅವರ ಎಫೆಕ್ಟ್ ಬಿಜೆಪಿ ಮೇಲೆ ಆಗುವುದಿಲ್ಲ ಎಂದು ಹೇಳಿದರು.

ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಮಹೇಶ್ ಬೂತೆ ಮಾತನಾಡಿ, ಯಲಬುರ್ಗಾ ಮಂಡಲ ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ, ನಮ್ಮ ತಂದೆಯವರಾದ ಬಸಲಿಂಗಪ್ಪ ಬೂತೆ ಅವರು ಹಾಲಪ್ಪ ಆಚಾರ್ ಅವರ ಗೆಲುವಿಗಾಗಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದರು.

ಸುದ್ದಿಗೋಷ್ಟಿಯಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಅಮರೇಶ್ ಹುಬ್ಬಳ್ಳಿ, ಪ್ರಭುರಾಜ್ ಕಲಬುರಗಿ, ದಾನನಗೌಡ ತೊಂಡಿಹಾಳ್, ಸುರೇಶ್ ಗೌಡ ಶಿವನಗೌಡರ್, ದೊಡ್ಡಯ್ಯ ಗುರುವಿನ, ಶರಣಗೌಡ ಪೊಲೀಸ್ ಪಾಟೀಲ್, ಕಳಕಪ್ಪ ತಳವಾರ್, ಸಿದ್ದಪ್ಪ ದಂಡಿನ ಅಭಿಮಾನಿಗಳು ಬೆಂಬಲಿಗರು ಇದ್ದರು.


ವರದಿ : ಈರಯ್ಯ ಕುರ್ತಕೋಟಿ

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">