ಪಕ್ಷೇತರ ಅಭ್ಯರ್ಥಿಯಾಗಿ ವಕೀಲ ಬಾಳಪ್ಪ ವೀರಾಪುರ ನಾಮಪತ್ರ ಸಲ್ಲಿಕೆ
ಯಲಬುರ್ಗಾ : ಸಾರ್ವತ್ರಿಕ ವಿಧಾನಸಭಾ ಚುನಾವಣೆ ಗೆ ಯಲಬುರ್ಗಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಪಟ್ಟಣದ ವಕೀಲ ಬಾಳಪ್ಪ ವೀರಾಪುರ ಅವರು ನಾಮಪತ್ರ ಸಲ್ಲಿಸಿದ್ದಾರೆ.
ಇಂದು ತಮ್ಮ ಬೆಂಬಲಿಗರೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ಅಧಿಕಾರಿ ಕಾವ್ಯಾರಣಿ ಕೆ ವಿ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು. ಈ ವೇಳೆಯಲ್ಲಿ ಪ್ರಕಾಶ್ ವಜ್ರಬಂಡಿ, ಹುಚ್ಚಿರಪ್ಪ, ಸುರೇಶ್, ಅಮರೇಶ್ ಹಡಪದ, ಪ್ರಕಾಶ್ ಉಪ್ಪಾರ, ಜಯರಾಮ್ ಗಂಗೋರ್ ಸೇರಿದಂತೆ ಅನೇಕ ಬೆಂಬಲಿಗರು ಉಪಸ್ಥಿತರಿದ್ದರು.
ನಾಮಪತ್ರ ಸಲ್ಲಿಸಿ ನಂತರ ಮಾತನಾಡಿದ ಅಭ್ಯರ್ಥಿ ಬಾಳಪ್ಪ ವೀರಾಪುರ ಅವರು, ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ, ಅಭಿವೃದ್ಧಿ ಕೆಲಸ ಮಾಡುವಂತಹ ಯುವಕರು ರಾಜಕೀಯಕ್ಕೆ ಬರಬೇಕು, ನೀರಾವರಿ, ಉದ್ಯೋಗ ದಲ್ಲಿ ಯಲಬುರ್ಗಾ ಕ್ಷೇತ್ರ ಹಿಂದುಳಿದಿದೆ,
ಹೊಸ ಮುಖಗಳಿಗೆ ಮತದಾರ ಮಣೆ ಹಾಕುತ್ತಾನೆ, ಮತ ಹಾಕುತ್ತಾನೆ ಎನ್ನುವ ವಿಶ್ವಾಸದಿಂದ ಸ್ಪರ್ದಿಸಿದ್ದೇನೆ ಎಂದು ಅಭ್ಯರ್ಥಿ ಬಾಳಪ್ಪ ವೀರಾಪುರ ಹೇಳಿದರು.
ವರದಿ : ಈರಯ್ಯ ಕುರ್ತಕೋಟಿ