Yalaburga : ಹಾಲಪ್ಪ ಆಚಾರ್ ಶಕ್ತಿ ಪ್ರದರ್ಶನ,ಭಾರೀ ಜನಸ್ತೋಮದ ಮದ್ಯೆ ಹಾಲಪ್ಪ ಆಚಾರ್ ನಾಮಪತ್ರ ಸಲ್ಲಿಕೆ

ಹಾಲಪ್ಪ ಆಚಾರ್ ಶಕ್ತಿ ಪ್ರದರ್ಶನ,ಭಾರೀ ಜನಸ್ತೋಮದ ಮದ್ಯೆ ಹಾಲಪ್ಪ ಆಚಾರ್ ನಾಮಪತ್ರ ಸಲ್ಲಿಕೆ

ಯಲಬುರ್ಗಾ :  ಬ್ರಹತ್ ಜನಸ್ತೋಮದ ಮದ್ಯೆ ಸಚಿವ ಹಾಲಪ್ಪ ಆಚಾರ್  ಬಿಜೆಪಿ ಅಭ್ಯರ್ಥಿಯಾಗಿ ಇಂದು ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ಪಟ್ಟಣದ ಮೊಗ್ಗಿ ಬಸವೇಶ್ವರ ದೇವಸ್ಥಾನದಿಂದ ತೆರೆದ ವಾಹನದಲ್ಲಿ ಭರ್ಜರಿ ರೋಡ್ ಶೋ ನಡೆಸಿ,ಅಪಾರ,ಬೆಂಬಲಿಗರು, ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ತಮ್ಮ ಬ್ರಹತ್ ಶಕ್ತಿ ಪ್ರದರ್ಶನ ನಡೆಸಿ ನಾಮಪತ್ರ ಸಲ್ಲಿಸಿದರು.

ಬಿಜೆಪಿ ಪಕ್ಷದ ಮುಖಂಡರು, ಮಹಿಳಾ,ಪ್ರತಿನಿಧಿಗಳು,ಕಾರ್ಯಕರ್ತರು, ಅಭಿಮಾನಿಗಳು ಕೇಸರಿ ಶಾಲು ಧರಿಸಿ ಹಾಲಪ್ಪ ಆಚಾರ್ ಅವರೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ನಂತರ ಮಾಧ್ಯಮದೊಂದಿಗೆ ಮಾತನಾಡಿದ ಹಾಲಪ್ಪ ಆಚಾರ್, ಅಪಾರ, ಜನಸ್ತೋಮ, ಜನ ಬೆಂಬಲ ಕಂಡು ನಿಜಕ್ಕೂ ಸಂತಸವಾಗಿದೆ, ಕ್ಷೇತ್ರದ ಮತದಾರ ಈ ಸಲವೂ ತಮಗೆ ಆಶೀರ್ವಾದ ಮಾಡುತ್ತಾರೆ, ಗೆಲ್ಲಿಸುತ್ತಾರೆ ಎಂದು ವಿಶ್ವಾಸದಿಂದ ಹೇಳಿದರು.

ಬಿಜೆಪಿ ಕಾರ್ಯಕರ್ತರ ಪಕ್ಷ, ಕಾರ್ಯಕರ್ತರೆ ಬಿಜೆಪಿ ಪಕ್ಷದ ಶಕ್ತಿ, ಲಕ್ಷ್ಮಣ್ ಸವದಿ ಬಂದು ಪ್ರಚಾರ ಮಾಡಿದರೂ ಅವರಿಂದ ಯಾವುದೇ ಪರಿಣಾಮ ಬಿರುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಯಲಬುರ್ಗಾ ಮಂಡಲ ಅಧ್ಯಕ್ಷ ವಿಶ್ವನಾಥ್ ಮರೀಬಸಪ್ಪ, ಎಂ ಎಲ್ ಸಿ ಹೇಮಲತಾ ನಾಯಕ್, ಬಸಲಿಂಗಪ್ಪ ಬೂತೆ, ಸಿ ಎಸ್ ಪೊಲೀಸ್ ಪಾಟೀಲ್, ಕಳಕಪ್ಪ ಕಂಬಳಿ, ಶರಣಪ್ಪ ಬಣ್ಣದಬಾವಿ, ವೀರಣ್ಣ ಹುಬ್ಬಳ್ಳಿ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ವರದಿ : ಈರಯ್ಯ ಕುರ್ತಕೋಟಿ

 

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">