ಯಲಬುರ್ಗಾದಲ್ಲಿ ಹಾಲಪ್ಪ ಆಚಾರ್ ಪರ ಯತ್ನಾಳ್ ಪ್ರಚಾರ
ಯಲಬುರ್ಗಾ : ಈ ಕ್ಷೇತ್ರದ ಶಾಸಕ ಹಾಲಪ್ಪ ಆಚಾರ್ ಅವರು 3280 ಕೋಟಿ ರೂ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ, ನೀರಾವರಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಈ ಸಲವೂ ಬಿಜೆಪಿ ಗೆ ಮತ ನೀಡಿ ಹಾಲಪ್ಪ ಆಚಾರ್ ಅವರಿಗೆ ಆಶೀರ್ವದಿಸಿ ಎಂದು ಕೇಂದ್ರದ ಮಾಜಿ ಸಚಿವ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ನಿನ್ನೆ ಸಂಜೆ ಯಲಬುರ್ಗಾ ಪಟ್ಟಣದ ಬಯಲು ರಂಗಮಂದಿರ ಜಾಗದಲ್ಲಿ ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ ಪರ ಬಹಿರಂಗ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಯತ್ನಾಳ್ ಮಾತನಾಡಿದರು.
ಯತ್ನಾಳ್ ತಮ್ಮ ಭಾಷನದುದ್ದಕ್ಕೂ ಕಾಂಗ್ರೆಸ್ ಪಕ್ಷದ ವಿರುದ್ಧ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ವಿರುದ್ಧ ಟೀಕಾ ಪ್ರಹಾರ ಮಾಡಿದರು. ರಾಹುಲ್ ಗಾಂಧಿ ಹೋದಲ್ಲೆಲ್ಲ ಕಾಂಗ್ರೆಸ್ ಸೋತಿದೆ, ರಾಹುಲ್ ಪೆದ್ದನಂತಿದ್ದಾರೆ ಇಲ್ಲಿಯ ಮಾಜಿ ಶಾಸಕರೊಬ್ಬರು ಟಿಕ್ಕನಂತೆ ಇದ್ದು ತಾವೇ ಬುದ್ದಿವಂತರಂತೆ ವರ್ತಿಸುತ್ತಿದ್ದಾರೆ, ಪಂಚಮಸಾಲಿ ಸಮುದಾಯಕ್ಕೆ ಸಿಗಬೇಕಾಗಿದ್ದ ಮೀಸಲಾತಿಯನ್ನು ರಾಯರಡ್ಡಿ ವಿರೋಧಿಸಿದ್ದರು ಎಂದು ಮಾಜಿ ಸಚಿವ ರಾಯರಡ್ಡಿ ವಿರುದ್ಧ ಟೀಕಿಸಿದರು.
ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಖಂಡಿಸಿದ ಯತ್ನಾಳ್ ಚೀನಾ ಪಾಕಿಸ್ತಾನದ ಎಜಂಟ್ ರಂತೆ ಕೆಲಸ ಮಾಡುವ ಸೋನಿಯಾ ಗಾಂಧಿ ಯಾರು ಎಂದು ಪ್ರಶ್ನಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಸಚಿವ ಹಾಲಪ್ಪ ಆಚಾರ್ ಕ್ಷೇತ್ರದ ಅಭಿವೃದ್ಧಿಗೆ ನೀರಾವರಿಗೆ ಪ್ರಾಮಾಣಿಕ ಪ್ರಯತ್ನ ಮಾಡಿರುವೆ, ಎಲ್ಲ ವರ್ಗದ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ ಮತ್ತೊಮ್ಮೆ ಆಶೀರ್ವದಿಸಿ ಎಂದು ಮತ ಯಾಚನೆ ಮಾಡಿದರು.
ಪಟ್ಟಣದ ಅಂಬೇಡ್ಕರ್ ಸರ್ಕಲ್ ನಿಂದ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಯತ್ನಾಳ್ ವೇದಿಕೆಗೆ ಬಂದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು, ಕಾರ್ಯಕರ್ತರು ಯತ್ನಾಳ್ ಅವರನ್ನು ನೋಡಲು, ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.
ಪ್ರಚಾರ ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ್ ಮರೀಬಸಪ್ಪ, ಯಲಬುರ್ಗಾ ಚುನಾವಣೆ ಉಸ್ತುವಾರಿ ಪಾಲನ್ ರೆಡ್ಡಿ,ಬಸಲಿಂಗಪ್ಪ ಬೂತೆ, ಸಿ ಎಸ್ ಪೊಲೀಸ್ ಪಾಟೀಲ್, ಶಿವಶಂಕರ ದೇಸಾಯಿ, ವೀರಣ್ಣ ಹುಬ್ಬಳ್ಳಿ, ಸುಧಾಕರ್ ದೇಸಾಯಿ,ಮಾಜಿ ಶಾಸಕರ ಪುತ್ರರು ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಕಾರ್ಯಕರ್ತರು ನೆರೆದಿದ್ದರು.
Reported By : Erayya Kurthakoti
ಸಿದ್ದಿ ಟಿವಿ