ಭರ್ಜರಿ ರೋಡ್ ಶೋ ಮೂಲಕ ಬಸವರಾಜ್ ರಾಯರಡ್ಡಿ ನಾಮಪತ್ರ ಸಲ್ಲಿಕೆ
ಯಲಬುರ್ಗಾ : ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಭರ್ಜರಿ ರೋಡ್ ಶೋ ಮೂಲಕ ನಾಮಪತ್ರ ಸಲ್ಲಿಸಿದ ಬಸವರಾಜ್ ರಾಯರಡ್ಡಿ
ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ್ ರಾಯರಡ್ಡಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು, ಬೆಂಬಲಿಗರೊಂದಿಗೆ ತೆರೆದ ವಾಹನದಲ್ಲಿ ಭರ್ಜರಿ ರೋಡ್ ಶೋ
ಈ ವೇಳೆ ಅವಳಿ ತಾಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು, ಕಾಂಗ್ರೆಸ್ ಮುಖಂಡರುಗಳು ರಾಯರಡ್ಡಿ ಯೊಂದಿಗೆ ರೋಡ್ ಶೋ ನಲ್ಲಿ ಉಪಸ್ಥಿತರಿದ್ದರು
ರಾಯರಡ್ಡಿ ಮಗಳು ಮಮತಾ ಬಾತೆ ಮತ್ತು ಅಳಿಯ ರತನ್ ಬಾತೆ ಕೂಡಾ ರಾಯರಡ್ಡಿಗೆ ಸಾಥ್ ನೀಡಿದರು
ಚುನಾವಣೆ ಅಧಿಕಾರಿ ಕಾವ್ಯಾರಾಣಿ ಕೆ ವಿ ಅವರಿಗೆ ಉಮೇದುವಾರಿಕೆ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ರಾಯರಡ್ಡಿ,
ಸೂಚಕರಾಗಿ ಹನುಮಂತಗೌಡ ಚೆಂಡೂರ್ ಮತ್ತು ಬಸವರಾಜ್ ಉಳ್ಳಾಗಡ್ಡಿ ಅವರು ರಾಯರಡ್ಡಿ ನಾಮಪತ್ರ ಸಲ್ಲಿಕೆ ವೇಳೆ ಉಪಸ್ಥಿತರಿದ್ದರು.
ವರದಿ : ಈರಯ್ಯ ಕುರ್ತಕೋಟಿ
Tags
ರಾಜಕೀಯ