ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳನ್ನು ಮೀರಿಸುವಂತಿದೆ ಬಿಜೆಪಿ ಪ್ರಣಾಳಿಕೆ
3 ಉಚಿತ ಸಿಲಿಂಡರ್,5 ಕೆಜಿ ಸಿರಿದಾನ್ಯ
ರಾಜ್ಯ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆ ಇಂದು ಬಿಡುಗಡೆ ಮಾಡಿದ್ದು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಮೀರಿಸುವಂತಿವೆ.
ಬಿಜೆಪಿ ತನ್ನ 2023 ಚುನಾವಣೆ ಪ್ರಣಾಳಿಕೆಯಲ್ಲಿ ಪ್ರತೀ ಕುಟುಂಬಕ್ಕೆ ಪ್ರತೀ ವರ್ಷ 3 ಉಚಿತ ಸಿಲಿಂಡರ್ ಕೊಡುವುದಾಗಿ ಹೇಳಿದೆ, ಯುಗಾದಿ, ಗಣೇಶ್ ಚತುರ್ಥಿ, ದೀಪಾವಳಿಗೆ ಈ ಸಿಲಿಂಡರ್ ನೀಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಪ್ರತೀ ಬಿ ಪಿ ಎಲ್ ಕುಟುಂಬಕ್ಕೆ ಈಗಿನ 5 ಕೆಜಿ ಅಕ್ಕಿಯ ಜೊತೆಗೆ ಶ್ರೀ ಅನ್ನ ಯೋಜನೆ ಅಡಿಯಲ್ಲಿ 5 ಕೆಜಿ ಸಿರಿದಾನ್ಯ ಹಿರಿಯ ನಾಗರಿಕರಿಗೆ ಉಚಿತ ಅರೋಗ್ಯ ತಪಾಷಣೆ ಸೇರಿದಂತೆ ಅನೇಕ ಜನಪ್ರಿಯ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸಿದೆ.
ಎಸ್ ಸಿ ಎಸ್ ಟಿ ಮಹಿಳೆಯರಿಗೆ ಹತ್ತು ಸಾವಿರ ಫಿಕ್ಸ್ ಡಿಪಾಸಿಟ್ ನ ಒನಕೆ ಓಬವ್ವ ಯೋಜನೆ, ವಿಧವೆಯರ ಮಾಶಾಸನ 2 ಸಾವಿರಕ್ಕೆ ಏರಿಕೆ, ಬಿಪಿಎಲ್ ಕುಟುಂಬಕ್ಕೆ ಅಯುಷ್ಮಾನ್ ಯೋಜನೆ ಅಡಿ ಈಗಿರುವ 5 ಲಕ್ಷ ವೆಚ್ಚವನ್ನು 10 ಲಕ್ಷಕ್ಕೆ ಏರಿಕೆ, ಪ್ರಣಾಳಿಕೆಯ ಪ್ರಮುಖ ಅಂಶಗಳು.
ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ ಪ್ರತೀ ವಾರ್ಡ್ ನಲ್ಲಿ ಅಟಲ್ ಆಹಾರ ಕೇಂದ್ರ ಸ್ಥಾಪನೆ, ಬಿ ಪಿ ಎಲ್ ಕುಟುಂಬಕ್ಕೆ ಪ್ರತೀ ದಿನ ಅರ್ಧ ಲೀಟಲ್ ಹಾಲು ಬಿಜೆಪಿ ಇಂದು ಪ್ರಕಟಿಸುವ ತನ್ನ ಪ್ರಣಾಳಿಕೆಯ ಮಹತ್ವದ ಯೋಜನೆಗಳು.
5 ಹೊಸ ಆಗ್ರೋ ಕ್ಲಸ್ಟರ್ ಸ್ಥಾಪನೆ, 30 ಸಾವಿರ ಕೋಟಿ ರೂ ವೆಚ್ಚದಲ್ಲಿ ಕೃಷಿ ನಿಧಿ ಸ್ಥಾಪನೆ, ಇಸ್ರೇಲ್ ಮಾದರಿ ಹನಿ ನೀರಾವರಿ, ಸರ್ವರಿಗೂ ಸೂರು ಅಡಿಯಲ್ಲಿ 10 ಲಕ್ಷ ಸೈಟ್ ಮನೆ ನಿರ್ಮಾಣ, ಸರ್ಕಾರಿ ಶಾಲೆ ಮೇಲದರ್ಜೆಗೆ ಸೇರಿದಂತೆ ಅನೇಕ ಜನಪ್ರಿಯ ಯೋಜನೆಗಳ ಪ್ರಣಾಳಿಕೆಯನ್ನು ಬಿಜೆಪಿ ಇಂದು ಬಿಡುಗಡೆ ಮಾಡಿದೆ.
ಬಿಜೆಪಿ ತನ್ನ ಜನಪ್ರಿಯ ಯೋಜನೆಗಳ ಪ್ರಣಾಳಿಕೆಗೆ ಮತದಾರ ಯಾವ ರೀತಿ ಸ್ಪಂದಿಸುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ.
Reported By : Erayya Kurthakoti