Kampli : ಕ್ಷೇತ್ರದಲ್ಲಿ ಅಧಿಕಾರಿಗಳು ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ : ಕಾಂಗ್ರೆಸ್ ಅಭ್ಯರ್ಥಿ J N ಗಣೇಶ್ ಆರೋಪ


 ಕಂಪ್ಲಿ.ಮೇ.01: ತಾಲೂಕಿನ ನಂ.10 ಮುದ್ದಾಪುರ ಗ್ರಾಮದಲ್ಲಿ ಕಂಪ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಆಭ್ಯರ್ಥಿ ಶಾಸಕ ಜೆ.ಎನ್.ಗಣೇಶ ಅವರು ಪತ್ರಕರ್ತರೊಂದಿಗೆ ಮಾತನಾಡಿ ಚುನಾವಣಾಧಿಕಾರಿಗಳು ಮತ್ತು ಕಂಪ್ಲಿ ತಾಲೂಕಿನ ತಹಶೀಲ್ದಾರ ಹಾಗೂ ಪೊಲೀಸ್ ಠಾಣೆಯ ಪಿ.ಐ ಅವರು ಬಿಜೆಪಿ ಪರವಾಗಿ  ಕಾರ್ಯನಿರ್ವಹಿಸುತ್ತಿದ್ದಾರೆ ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತರ ಮನೆ ಮೇಲೆ ದಾಳಿ ಮಾಡುವ ಮೂಲಕ ದೂರು ದಾಖಲು ಮಾಡಿಕೊಳ್ಳುತ್ತಿದ್ದಾರೆ.ಬಿಜೆಪಿ ವಿರುದ್ಧ ದೂರು ಬಂದಲ್ಲಿ  ಅವರಿಗೆ ಮಾಹಿತಿ ನೀಡುವ ಮೂಲಕ ಅವರನ್ನು ರಕ್ಷಿಸುತ್ತಿದ್ದಾರೆ ಹೀಗಾಗಿ ಚುನಾವಣಾಧಿಕಾರಿ,ತಹಶೀಲ್ದಾರ, ಸಿಪಿಐ ಅವರನ್ನು ತಕ್ಷಣಕ್ಕೆ ಬದಲಾವಣೆ ಮಾಡಬೇಕು ಎಂದು ನೇರವಾಗಿ ಆರೋಪಿಸಿದರು. 

ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ  ಜಿಲ್ಲಾಧಿಕಾರಿಗಳು ಸಂಬಂಧ ಪಟ್ಟವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವ ಮೂಲಕ ನ್ಯಾಯ ಒದಗಿಸಬೇಕೇಂದು ಮನವಿ ಮಾಡಿದರು.ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಕೆ.ಶ್ರೀನಿವಾಸರಾವ(ವಾಸಪ್ಪ),ಹಬೀಬ್ ರೆಹಮಾನ್,ಕಟ್ಟೆ ವೆಂಕಟೇಶ,ಶಶಿ,ಜಾಫರ್,ಸೇರಿದಂತೆ ಅನೇಕರಿದ್ದರು.

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">