ಸ್ವಯಂ ಉದ್ಯೋಗದ ಮೂಲಕ ಮಹಿಳಾ ಸಬಲೀಕರಣ : ಮಂಜುಳಾ ಕರಡಿ
ಕೊಪ್ಪಳ,: ಸ್ವಯಂ ಉದ್ಯೋಗ ಕಲ್ಪಿಸುವ ಮೂಲಕ ಕ್ಷೇತ್ರದ ಮಹಿಳೆಯರ ಸಬಲೀಕರಣ ಮಾಡಲಾಗುವುದು ಎಂದು ಬಿಜೆಪಿ ಅಭ್ಯರ್ಥಿ ಮಂಜುಳಾ ಅಮರೇಶ ಕರಡಿ ಹೇಳಿದರು.
ತಾಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತಿ ವ್ಯಾಪ್ತಿಯ ವಿವಿಧ
ವಾಡ್೯ಗಳಲ್ಲಿ ಮತ ಪ್ರಚಾರ ನಡೆಸಿದ ಅವರು ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದರೆ ವಿಶೇಷ ಯೋಜನೆ ಮೂಲಕ ಸ್ವಯಂ ಉದ್ಯೋಗಕ್ಕೆ ಸಾಲ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಬಿಜೆಪಿ ಸರ್ಕಾರವು 75ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆ ಜಿಲ್ಲೆಯ 75 ಮಹಿಳೆಯರ ಸ್ವಯಂ ಉದ್ಯೋಗಕ್ಕೆ 2 ಲಕ್ಷ ರೂ. ವರೆಗೆ ಸಾಲ ಸೌಲಭ್ಯ ಕಲ್ಪಿಸಿದೆ. ಈ ಯೋಜನೆಯನ್ನು ಎಲ್ಲ ಮಹಿಳೆಯರಿಗೆ ವಿಸ್ತರಿಸುವ ಮೂಲಕ ಮಹಿಳಾ ಸಬಲೀಕರಣ ಮಾಡಲಾಗುವುದು. ಇನ್ನು ಸ್ತ್ರೀ ಶಕ್ತ ಸಂಘಟನೆಗಳಿಗೆ ಸಬ್ಸಿಡಿ ನೀಡುವ ಮೂಲಕ ಸಂಘಟನೆ ಬಲಪಡಿಸಲಾಗುವುದು. ಭಾಗ್ಯನಗರ ಪಟ್ಟಣ ಪಂಚಾಯತಿಯಲ್ಲಿ ಮಹಿಳೆಯರು ಕೈಮಗ್ಗ ವೃತ್ತಿಯನ್ನು ಅವಲಂಬಿಸಿದೆ. ಇತ್ತೀಚಿನ ವರ್ಷಗಳಲ್ಲಿ ನೇಕಾರರಿಗೆ ಬಹಳಷ್ಟು ತೊಂದರೆಗಳಿವೆ. ಆದ್ದರಿಂದ ಬಿಜೆಪಿ ಸರ್ಕಾರ ನೇಕಾರ ಸನ್ಮಾನ್ ಯೋಜನೆಯಡಿ ವಾರ್ಷಿಕ 5 ಸಾವಿರ ಹಣ ನೇರ ಖಾತೆಗೆ ಜಮಾ ಮಾಡುವ ಮೂಲಕ ನೇಕಾರರ ಬೆನ್ನಿಗೆ ನಿಂತಿದೆ. ಬಿಜೆಪಿಗೆ ಮತ ನೀಡಿ ನನ್ನನ್ನು ಗೆಲ್ಲಿಸಿದರೆ, ನೇಕಾರ ಸನ್ಮಾನ್ ಯೋಜನೆಯ 5 ಸಾವಿರ ಹಣ ದ್ವಿಗುಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಯುವಕರು, ಮಹಿಳೆಯರು, ಹಿರಿಯರು ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
Tags
ರಾಜಕೀಯ