Koppal : ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಗೆ ಆದ್ಯತೆ: CVC


ಕ್ಷೇತ್ರದಲ್ಲಿ ಬಿರುಸಿನ ಮತಯಾಚನೆ ಮಾಡಿದ : ಸಿವಿ ಚಂದ್ರಶೇಖರ


ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಗೆ ಆದ್ಯತೆ: CVC

ಕೊಪ್ಪಳ,

: ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೇ ಹೋಬಳಿಗೊಂದರಂತೆ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಿ ಅವುಗಳನ್ನು ಮಾದರಿ ಶಾಲೆಗಳನ್ನಾಗಿ ಪರಿವರ್ತಿಸಲಾಗುವುದು ಎಂದು ಕೊಪ್ಪಳ ವಿಧಾನಸಭಾ ಜೆಡಿಎಸ್ ಪಕ್ಷದ ಅಭ್ಯರ್ಥಿ ಸಿವಿ ಚಂದ್ರಶೇಖರ ಹೇಳಿದರು.

ತಾಲೂಕಿನ ಚಿಲವಾಡಗಿ, ಕಲಕೇರಿ, ಹಟ್ಟಿ, ದೇವಲಾಪುರ, ಮಾದಿನೂರ, ನರೇಗಲ್ ಹಾಗೂ ಹುಚ್ಚೇಶ್ವರ ಕ್ಯಾಂಪ್‌ಗಳಲ್ಲಿ ಮತಯಾಚನೆ ಮಾಡಿ ಮಾತನಾಡಿದರು.

ಶಿಕ್ಷಣ ಕ್ಷೇತ್ರದಲ್ಲಿ ಕೊಪ್ಪಳ ತೀರಾ ಹಿಂದುಳಿದೆ. ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಮಕ್ಕಳ ವಿದ್ಯಾಭ್ಯಾಸ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕಳೆದ ಮೂರು ದಶಕಗಳಿಂದ ಕ್ಷೇತ್ರವನ್ನು ಪ್ರತಿನಿಧಿಸಿದ ಶಾಸಕರಿಗೆ ಶಿಕ್ಷಣದ ಮಹತ್ವವೇ ಗೊತ್ತಿರಲಿಲ್ಲ. ಅವರು ಅತ್ಯಂತ ಮುಖ್ಯ ಕ್ಷೇತ್ರವೊಂದನ್ನು ಅಲಕ್ಷಿಸಿ ಪ್ರಮಾದ ಮಾಡಿದರು. ಶಾಸಕರಾದವರಿಗೆ ಪ್ರಭಲ ಶೈಕ್ಷಣಿಕ ಹಿನ್ನಲೆ ಇರಬೇಕಾದದ್ದು ಅನಿವಾರ್ಯ ಎಂದರು. ತಮ್ಮ ಆಶೀರ್ವಾದದಿಂದ ನಾನು ಶಾಸಕನಾಗಿ ಆಯ್ಕೆಯಾದರೇ ಹೋಬಳಿಗೊಂದರಂತೆ ಸರಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸುತ್ತೇನೆ. ಸರಕಾರಿ ಶಾಲೆಗಳ ಸುಧಾರಣೆಗಾಗಿ ಖಾಸಗಿ ಸಂಸ್ಥೆ ಹಾಗೂ ವ್ಯಕ್ತಿಗಳ ಸಹಾಯ ಪಡೆಯಲಾಗುವುದು ಎಂದರು.

ಶಾಸಕರ ಹಾಗೂ ಅವರ ಕುಟುಂಬಸ್ಥರ ಅನಪೇಕ್ಷಿತ ಹಸ್ತಕ್ಷೇಪದಿಂದಾಗಿ ಸರಕಾರಿ ನೌಕರರು ಕ್ಷೇತ್ರದಲ್ಲಿ ಕೆಲಸ ಮಾಡದಂತಾಗಿದೆ. ಕೆಲವೊಬ್ಬರು ದಕ್ಷ ಅಧಿಕಾರಗಳನ್ನು ಹೆದರಿಸುತ್ತಿರುವುದು ವರದಿಯಾಗಿದೆ. ಪಕ್ಷ ಅಧಿಕಾರಕ್ಕೆ ಬಂದರೇ ವಾರಕ್ಕೊಮ್ಮೆ ಸರಕಾರಿ ಅಧಿಕಾರಗಳ ಜೊತೆಗೆ ಸಂವಾದ ನಡೆಸಿ ಅವರ ಕುಂದು ಕೊರತೆಗಳನ್ನು ನೀಗಿಸಲಾಗುವುದು ಎಂದರು. ಕೊಪ್ಪಳದ ಅಭಿವೃದ್ಧಿಗೆ ದಕ್ಷ ಅಧಿಕಾರಗಳ ಅಗತ್ಯವಿದೆ. ಅಂತಹ ಅಧಿಕಾರಿಗಳನ್ನು ಕ್ಷೇತ್ರಕ್ಕೆ ವರ್ಗಾವಣೆ ಮಾಡಿಸಿಕೊಂಡು ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು. ಪಕ್ಷದ ಜಿಲ್ಲಾಧ್ಯಕ್ಷ ವೀರೇಶ ಮಹಾಂತಯ್ಯನಮಠ, ಮುಖಂಡರಾದ ಡಾ ಮಹೇಂದ್ರ ಕಿಂದ್ರೆ, ಮೌನೇಶ್ ಕರಾಟೆ, ಚನ್ನಪ್ಪ ಮುತ್ತಾಳ, ಮೂರ್ತೆಪ್ಪ ಹಿಟ್ನಾಳ ಸೇರಿದಂತೆ ಅನೇಕ  ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

ವರದಿ : ಶಿವಕುಮಾರ ಹಿರೇಮಠ

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">