Koppal JDS: ಜೆಡಿಎಸ್ ಪಕ್ಕಕ್ಕೆ ಬೆಂಬಲ ಕೊಟ್ಟ ಮಹಿಳೆಯರ ತಂಡ


ಜೆಡಿಎಸ್ ಪಕ್ಕಕ್ಕೆ ಬೆಂಬಲ ಕೊಟ್ಟ ಮಹಿಳೆಯರ ತಂಡ

ಕೊಪ್ಪಳ,: ದಿನದಿಂದ ದಿನಕ್ಕೆ ಜೆಡಿಎಸ್ ಕ್ಷೇತ್ರದಲ್ಲಿ ಬಲಿಷ್ಠವಾಗುತ್ತಲೇ ಇದೆ. ಪಕ್ಷವನ್ನು ಸೇರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಜೆಡಿಎಸ್ ಪಕ್ಷದ ಸಿದ್ಧಾಂತ ಮೆಚ್ಚಿ ನಗರದಲ್ಲಿ ವಿವಿಧ ಪಕ್ಷಗಳಿಂದ ಮಹಿಳಾ ನಾಯಕಿಯರು ಜೆಡಿಎಸ್ ಪಕ್ಷವನ್ನು ಸೇರಿದರು. ನಗರದ ವಾರ್ಡ್ 20ರಲ್ಲಿ ಅನೇಕ ಮಹಿಳಾ ನಾಯಕಿಯರು ಲಕ್ಷ್ಮಿದೇವಿ ಚಂದ್ರಶೇಖರ ಅವರ ಸಮ್ಮುಖದಲ್ಲಿ ಪಕ್ಷವನ್ನು ಸೇರಿದರು. ಪಕ್ಷದ ಶಾಲ್ ಹಾಕುವ ಮೂಲಕ ಅವರನ್ನು ಪಕ್ಷೆಕ್ಕೆ ಬರಮಾಡಿಕೊಳ್ಳಲಾಯಿತು. ನಂತರ ಅವರು ಮಾತನಾಡಿ, ಎರಡೂ ರಾಷ್ಟ್ರೀಯ ಪಕ್ಷಗಳು ಮಹಿಳಾ ಅಭಿವೃದ್ಧಿಯನ್ನು ಆದ್ಯತೆಯನ್ನಾಗಿ ಪರಿಗಣಿಸಿಲ್ಲ. ಸಿವಿ ಚಂದ್ರಶೇಖರ ಅವರಿಗೆ ಶೈಕ್ಷಣಿಕ ಹಿನ್ನಲೆಯಿದೆ. ಮಹಿಳಾ ಸಮಸ್ಯೆಗಳ ಅರಿವಿದೆ. ಲಕ್ಷ್ಮೀದೇವಿ ಅವರು ಸುಲಭವಾಗಿ ಮಹಿಳೆಯರ ಭೇಟಿಗೆ ಸಿಗುತ್ತಾರೆ. ಹೀಗಾಗಿ ಮಹಿಳೆಯರು ಸಿವಿ ಚಂದ್ರಶೇಖರ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ ಎಂದರು. 

ಈ ಸಂದರ್ಭದಲ್ಲಿ ಅನೇಕ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">