ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ :ಜಗದೀಶ್ ಶೆಟ್ಟರ್
ಕೊಪ್ಪಳ,: ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ಯಾರೂ ಏನೇ ಹೇಳಲಿ 140 ರಿಂದ 150ಕ್ಕೂ ಅಧಿಕ ಸ್ಥಾನ ಗೆದ್ದು ಅಧಿಕಾರಕ್ಕೆ ಬರಲಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ಸೋಮವಾರ ನಗರದ ಶಿವಶಾಂತವೀರ ಭವನದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷದ ಸಿದ್ಧಾಂತ ಮೆಚ್ಚಿ ಸೇರಿದ್ದು, ವಿಧಾನಸಭೆ ಚುನಾವಣೆ ಪ್ರಯುಕ್ತ ಎಲ್ಲಾ ಕ್ಷೇತ್ರಗಳಿಗೆ ಭೇಟಿ ಕೊಟ್ಟು ಅಭ್ಯರ್ಥಿಗಳ ಗೆಲವಿಗೆ ಶ್ರಮಿಸುತ್ತೇನೆ. ನಾನು 6 ಸಲ ಗೆದ್ದು ಶಾಸಕ, ಸಚಿವ ಹಾಗೂ ಮುಖ್ಯಮಂತ್ರಿ ಬಿಜೆಪಿಯಲ್ಲಿ ಇದ್ದಾಗ ಆಗಿದ್ದರು. 2023ರ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡಲಿಲ್ಲ ಯಾಕೆ ? ನಾನು ಏನಾದರೂ ಭ್ರಷ್ಟಾಚಾರ ಮಾಡಿದ್ದೇನೆ ? ಇಲ್ಲ ಲೂಟಿ ಹೊಡಿದಿದ್ದೇನೆಯೇ ಎಂದು ಕೇಳಿದರೂ ಬಿಜೆಪಿಯವರು ನನಗೆ ಟಿಕೆಟ್ ಕೊಡಲಿಲ್ಲ.
ನನಗೆ ರಾಜಕೀಯದಿಂದ ನಿವೃತ್ತಿರಾಗಿ ಎಂದು ಪತ್ರ ಕಳಿಸಿದರು. ಬಿಜೆಪಿ ಬಿಟ್ಟು ಹೋಗುತ್ತಾರೆ ಎಂದು ಗೊತ್ತಾದ ಬಳಿಕ. ರಾಜ್ಯ ಸಭಾ ಸದಸ್ಯನಾಗಿ ಮಾಡುತ್ತೇವೆ ಎಂದು ಹೇಳಿ, ನನನ್ನು ಮೂಲೆ ಗುಂಪು ಮಾಡಲು ಬಿಜೆಪಿ ಅವರು ನೋಡಿದರು.
ಮತೇ ಬಿಜೆಪಿಯವರು ಎಲ್ಲಡೆ ಕುಟುಂಬ ರಾಜಕಾರಣ ಮಾಡುದಿಲ್ಲ ಎಂದು ಹೇಳುತ್ತಾರೆ. ಕೊನೆಗೆ ನನ್ನ ಸೊಸೆಗೆ ಟಿಕೇಟ್ ಕೊಡುತ್ತೇವೆ ಎಂದು ನೀವು ಬಿಜೆಪಿ ಬಿಡಬೇಡಿ ಎಂದು ಹೇಳುವ ಅವರು, ಇಲ್ಲಿ ಕೊಪ್ಪಳಕ್ಕೆ ಸಂಸದರ ಸೊಸೆಗೆ ಬಿಜೆಪಿ ಟಿಕೆಟ್ ಕೊಟ್ಟು ಕುಟುಂಬ ರಾಜಕಾರಣ ಮಾಡುತ್ತಿರುವವರು ಯಾರು? ಅವರಿಗೆ ಅಧಿಕಾರದ ದಾಹ ಹಿಡಿದಿದೆ. ಅದಕ್ಕೆ ನನ್ನನ್ನು ಹೊರ ಇಟ್ಟರು. ಕೇತ್ರದ ಜನತೆ ರಾಷ್ಟ್ರೀಯ ಪಕ್ಕಕ್ಕೆ ಸೇರಿ ಎಂದು ತಿಳಿಸಿದರು. ಅದಕ್ಕೆ ಕಾಂಗ್ರೆಸ್ ಪಕ್ಕ ಸೇರಿದ್ದೇನೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶ್ರಮಿಸುತ್ತೇನೆ ಎಂದರು.
ಮುಖ್ಯಮಂತ್ರಿ ಇದ್ದಾಗ ಕೊಪ್ಪಳಕ್ಕೆ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಿದೆ. ಈ ಚುನಾವಣೆಯಲ್ಲಿ ಅಭ್ಯರ್ಥಿ ರಾಘವೇಂದ್ರ ಹಿಟ್ನಾಳ ಅವರಿಗೆ ಬಹುಮತದಿಂದ ಆರಿಸಿ ತರಬೇಕು ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ರಾಘವೇಂದ್ರ ಹಿಟ್ನಾಳ, ಮಾಜಿ ಶಾಸಕ ಬಸವರಾಜ ಹಿಟ್ನಾಳ, ಮುಖಂಡರಾದ ಎಸ್.ಬಿ.ನಾಗರಳ್ಳಿ, ಜುಲ್ಲು ಖಾದ್ರಿ, ಸುರೇಶ ದೇಸಾಯಿ, ಹೆಚ್.ಎಲ್.ಹಿರೇಗೌಡ್ರ, ಇಂದಿರಾ ಬಾವಿಕಟ್ಟಿ, ರೇಷ್ಮಾ ಖಾಜಾವಲಿ, ಶಕುಂತಲಾ ಹುಡೇಜಾಲಿ, ಲತಾ ಗವಿಸಿದ್ದಪ್ಪ ಚಿನ್ನೂರು. ರಾಜಶೇಖರ ಹಿಟ್ನಾಳ, ಕೃಷ್ಣ ಇಟ್ಟಂಗಿ, ಶಿವರಾಮೇಗೌಡ, ಕೃಷ್ಣರಡ್ಡಿ ಗಲಿಬಿ, ಗಾಳೆಪ್ಪ ಪೂಜಾರ, ಕಾಟನ್ ಪಾಷಾ, ಮಲ್ಲು ಪೂಜಾರ, ಪರಶುರಾಮ ಕೆರೆಹಳ್ಳಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.
ವರದಿ : ಶಿವಕುಮಾರ ಹಿರೇಮಠ