ಅಡವಿಭಾವಿ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರಿಂದ ಮತಯಾಚನೆ
ಕುಷ್ಟಗಿ ಕ್ಷೇತ್ರದ ಅಡವಿಭಾವಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಅಮರೇಗೌಡ ಬಯ್ಯಾಪುರ ಪರ ವಿಧಾನ ಪರಿಷತ್ ಸದಸ್ಯರಾದ ಶರನಗೌಡ ಪಾಟೀಲ್ ಬಯ್ಯಾಪುರ ಅವರ ಸುಪುತ್ರನಾದ ಅಭಿಷೇಕ್ ಪಾಟೀಲ್ ಬಯ್ಯಾಪುರ ಅವರು ಮತ್ತು ಕಾಂಗ್ರೆಸ್ ಮುಖಂಡರು ಮಹಿಳೆಯರು ನಿನ್ನೆ ದಿನ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡರಾದ ಮಲ್ಲನಗೌಡ ಪೊಲೀಸ್ ಪಾಟೀಲ್ ಕಾಂಗ್ರೆಸ್ ಪಕ್ಷವನ್ನು ಹಾರಿಸಿ ತಂದರೆ ಬಡವರ ಬದುಕು ಬಂಗಾರವಾಗುತ್ತದೆ ಇವಾಗ ಚುನಾವಣೆ ಬಂದಿದೆ ವಾರಕ್ಕೆ ಎರಡು ಸಲ ಬಂದು ಪ್ರಚಾರ ಮಾಡಿ ಹೋಗತಾರೆ ಹಾಗಾಗಿ ಕಷ್ಟದಲ್ಲಿ ಬರದೇ ಇರುವಂತವರಿಗೆ ಚುನಾವಣೆ ಯಲ್ಲಿ ಬಂದಿರುವಂತ ಬಿಜೆಪಿ ಪಕ್ಷದವರಿಗೆ ನಮ್ಮ ಮತದಾನದ ಪಾಠವನ್ನ ಕಲಿಸಬೇಕಾಗಿದೆ ಏಕೆಂದರೆ ಭ್ರಷ್ಟ ಬಿಜೆಪಿ ಸರಕಾರ ಶ್ರೀಮಂತರ ಪಕ್ಷ ದಿನ ನಿತ್ಯ ಬಳಕೆ ಮಾಡುವ ವಸ್ತುಗಳು ಬೆಲೆ ಏರಿಕೆ ಎಲ್ಲರಿಗೂ ಗೊತ್ತಿರುವಂತ ವಿಚಾರ ಏಕೆಂದರೆ ನಾವು ಬಡವರು ದಿನದಲಿತರು ಶೋಷಿತರು ನಮ್ಮ ಎಲ್ಲರಿಗೂ ಧ್ವನಿಯಾಗಿರುವಂತ ಈ ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ಕೊಡಬೇಕೆಂದು ನಾನು ಮತ್ತೊಮ್ಮೆ ಕೇಳಿಕೊಳ್ಳುತೇನೆ ಗ್ಯಾರಂಟಿ ಇನ್ನೊಂದು ಹೆಸರೇ ಕಾಂಗ್ರೆಸ್ ಈಗಾಗಲೇ ಹಲವಾರು ಗ್ಯಾರಂಟಿಗಳನ್ನ ಕಾಂಗ್ರೇಸ್ ಪಕ್ಷ ಘೋಷಣೆ ಮಾಡಿದೆ ಎಂದು ಹೇಳಿದರು.ಇದೆ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡರಾದ ಮಾನಪ್ಪ ತಳವಾರ. ಗ್ರಾಮ ಪಂಚಾಯತಿ ಸದಸ್ಯರಾದ ಸುರೇಗೌಡ ಮಾಲಿಪಾಟೀಲ್.ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಕಾಂಗ್ರೇಸ್ ಮುಖಂಡರಾದ ಸಂಗಪ್ಪ ಮಲಕಾಪುರ್. ಅಮರಪ್ಪ ತೋಪಲಕಟ್ಟಿ.ಗುರುಬಸಪ್ಪ ಶಡ್ಲಿಗೇರಿ.ಬಸವರಾಜ್ ಮಾಲಿಪಾಟೀಲ್.ಹನಮಪ್ಪ ಕುಮಟಗಿ.ವಿಜಯಕುಮಾರ್ ಭಾವಿಮಾನಿ.ಹನಮಪ್ಪ ಹುರುಕೇನ.ತಿಪ್ಪನಗೌಡ ಮಾಲಿಪಾಟೀಲ್.ಕಳಕಪ್ಪ ಹಡಪದ.ಮಲ್ಲಪ್ಪ ಕುಮಟಗಿ.ಸತ್ಯನಗೌಡ ಮಾಲಿಪಾಟೀಲ್.ಇನ್ನೂ ಅನೇಕ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವರದಿ : ಶ್ರವಣ ಅಂಗಡಿ, ಸಿದ್ದಿ ಟಿವಿ, ಕುಷ್ಟಗಿ