Turvihal : ಬಿಜೆಪಿಯ ಸ್ಟಾರ್ ಪ್ರಚಾರಕರಾಗಿ ಪಟ್ಟಣಕ್ಕೆ ನಟ ಸುದೀಪ್ ಅಬ್ಬರದ ಪ್ರಚಾರ


ಬಿಜೆಪಿಯ ಸ್ಟಾರ್ ಪ್ರಚಾರಕರಾಗಿ ಪಟ್ಟಣಕ್ಕೆ ನಟ ಸುದೀಪ್ ಅಬ್ಬರದ ಪ್ರಚಾರ

ವಿಧಾನಸಭಾ ಚುನಾವಣೆ ಪ್ರಯುಕ್ತ ಮಸ್ಕಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಪ್ರತಾಪಗೌಡ ಪಾಟೀಲ್ ಅವರ ಪರವಾಗಿ ತುರುವಿಹಾಳ ಪಟ್ಟಣಕ್ಕೆ  ಆಗಮಿಸಿದ ಖ್ಯಾತ ಚಲನಚಿತ್ರ ನಟ ಕಿಚ್ಚ ಸುದೀಪ್ ಹಾಗೂ ಚಲುವಾದಿ ನಾರಾಯಣಸ್ವಾಮಿ  ಮತಯಾಚನೆಗೆ ಆಗಮಿಸಿದ್ದರು .

ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಸುದೀಪ್ ಅವರಿಗೆ ಪಟಾಕಿ ಹಚ್ಚಿ ಅದ್ದೂರಿ ಇಂದ ಸ್ವಾಗತಿಸಿದರು. ಸಮಯ ಅಭಾವದಿಂದ ಸ್ಥಳದಲ್ಲೆ  ಮಾತನಾಡಿದ ಅವರು ಮೇ 10ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ  ಬಿಜೆಪಿಗೆ ಮತ ನೀಡುವುದರ ಮೂಲಕ ಪ್ರತಾಪಗೌಡರನ್ನು ಈ ಬಾರಿ ಬಹುಮತದಿಂದ ಗೆಲ್ಲಿಸಿ ಮತ್ತು ನಾನು ನಿಮ್ಮೂರಿಗೆ ಬಂದಿದ್ದಕ್ಕೆ ಒಂದು ಅರ್ಥ ಕೊಡಿ ಎಂದು ಹೆಳುತ್ತ. ಅಭಿಮಾನಿಗಳಿಗೆ ವೀರ ಮದಕರಿ ಚಿತ್ರದ ಡೈಲಾಗ್ ಹೊಡೆದು ನೆರೆದಿದ್ದ ಅಪಾರ ಅಭಿಮಾನಿಗಳಿಗೆ ಖುಷಿ ಪಡಿಸಿದರು.

ನೆಚ್ಚಿನ ನಟನನ್ನು ನೋಡಲು ಪಟ್ಟಣ ಹಾಗೂ ಸುತ್ತ ಮುತ್ತಲಿನಿಂದ ಜನಸಾಗರ ಹರಿದು ಬಂದಿತ್ತು ನೆಚ್ಚಿನ ನಟನನ್ನು ನೋಡಿ ಶಿಳ್ಳೆ ಕೇಕೆಯ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.

ನಂತರ ಪಟ್ಟಣದ ವಾಲ್ಮೀಕಿ ವೃತ್ತದಿಂದ ಬಸ್ ಸ್ಟ್ಯಾಂಡ್ ಮೂಲಕ ಕನಕದಾಸ ವೃತ್ತದ ವರೆಗೆ ಭರ್ಜರಿ ರೋಡ್ ಶೋ ನಡೆಸಿದರು.

ಕೈ ಕಸರತ್ತು : ಕಿಚ್ಚ ಸುದೀಪ್ ಆಗಮಿಸುವ ವೇಳೆಯಲ್ಲಿ ಕೆಲ ಕಿಡಿಗೇಡಿಗಳು ಕಾಂಗ್ರೆಸ್ ಧ್ವಜ ಬೈಕ್ ಮೇಲೆ ಹಾರಿಸುತ್ತಿತುವುದನ್ನು ಕಂಡು ಬಿಜೆಪಿಗರು ಬೈಕ್ ಸವಾರನನ್ನು ಎಳೆದಾಡಿದ ಘಟನೆ ಕೂಡ ಜರುಗಿತು.

ಸಂದರ್ಭದಲ್ಲಿ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ. ನಾಗಪ್ಪ ಸಂದೂರಿ, ನಿಂಗಪ್ಪಕಟ್ಟಿಮನಿ,ರುದ್ರಸ್ವಾಮಿ ಕೆಂಡದಮಠ, ಶಿವನಗೌಡ. ತಿರುಪತೇಪ್ಪನಾಯಕ್, ಕರಿಯಪ್ಪ ಬಂಗಿ, ಮೌನೇಶ ನಾಯಕ್ ಮಸ್ಕಿ, ದುರ್ಗೇಶ ವಕೀಲರು, ಸಿದ್ದೇಶ್ವರಗುರಿಕಾರ್,ದಾವಲಸಾಬ್ ಕೆ ಉಮಲೂಟಿ ಶಿವಮಣಿ, ವೆಂಕಣ್ಣ ಉಪ್ಪಾರ್, ಎಂ ಡಿ ಇಸ್ಮಾಯಿಲ್. ಸಕುಮನಿ, ಮುತ್ತು ನಾಯಕ್, ಹಾಗೂ  ಬಿಜೆಪಿ ಪಕ್ಷದ ಮುಖಂಡರು ಮತ್ತು ಕಿಚ್ಚ ಸುದೀಪ್ ಅಭಿಮಾನಿಗಳು ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.


ವರದಿ : ಮೆಹಬೂಬ್ ಮೊಮಿನ್

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">