ಮಹಾತಾಯಿ ಸೂಲಗಿತ್ತಿ ಫಕಿರಮ್ಮ ಹತ್ತಿಗುಡ್ಡ ನಿಧನ
ತುರ್ವಿಹಾಳ: ಪಟ್ಟಣದ ನೂರಾರು ಗರ್ಭಿಣಿಯರಿಗೆ ಹೆರಿಗೆ ಮಾಡಿಸುತ್ತಿದ್ದ ಫಕಿರಮ್ಮ ಭಾನುವಾರ ವಯೋಸಹಜದಿಂದ ನಿಧನ ಹೊಂದಿದ್ದಾರೆ.
ಗರ್ಭಿಣಿಯರಿಗೆ ಹೆರಿಗೆ ಸಮಯದಲ್ಲಿ ತಾಯಂದಿರನ್ನು ನೆನಪಿಸಿಕೊಳ್ಳುವವಂತಹ ಸೂಲಗಿತ್ತಿ ಕೆಲಸವನ್ನು ಮಾಡುತ್ತಿದ್ದರು.
ಅವರು ನೂರಾರು ಗರ್ಭಿಣಿಯರಿಗೆ ಸುಮಾರು ವರ್ಷಗಳಿಂದ ಹೆರಿಗೆ ಮಾಡುತ್ತ ಅವರು ಹೆರಿಗೆ ನೋವು ಕಾಣಿಸಿಕೊಂಡರೇ ಸಾಕು ಈ ಮಹಾತಾಯಿ ಹಾಜರಿದ್ದು ಹೆರಿಗೆ ಮಾಡುವ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು ಹಾಗೂ ಅಪಾರ ಅನುಭವ ಮತ್ತ ಸೇವಾ ಮನೋಭಾವದೊಂದಿಗೆ ಹೆರಿಗೆಯನ್ನು ಯಾವುದೇ ತೊಂದರೆಯಾಗದಂತೆ ಮಾಡುತ್ತಿದ್ದರು.
ಬಾಲ್ಯದಿಂದಲೂ ಬಡತನದಲ್ಲಿ ಬೆಳದವರು ಇವರಿಗೆ 4ಜನ ಗಂಡು ಮಕ್ಕಳು ಇಬ್ಬರು ಹೆಣ್ಣುಮಕ್ಕಳು ಮತ್ತು ಕುಟುಂಬಸ್ಥರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ವರದಿ : ಮೆಹಬೂಬ್ ಮೊಮಿನ್
Tags
ರಾಜ್ಯ