ರಾಜ್ಯಅನ್ನ ಭಾಗ್ಯ ಯೋಜನೆಯನ್ನು ಸಾಕಾರಗೊಳಿಸಲು ನೆರೆಯ ರಾಜ್ಯಗಳಿಂದ ಅಕ್ಕಿ ಖರೀದಿಸಲು ಕರ್ನಾಟಕ ಮುಂದು!
ಕಾಂಗ್ರೆಸ್ ಸರ್ಕಾರವು ಪ್ರತಿ ಬಿಪಿಎಲ್ ಕುಟುಂಬ ಮತ್ತು ಅಂತ್ಯೋದಯ ಅನ್ನ ಯೋಜನೆ ಕಾರ್ಡ್ ಹೊಂದಿರುವವರಿಗೆ ಅನ್ನ ಭಾಗ್ಯ ಖಾತ್ರಿ ಯೋಜನೆಯಡಿ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ನೀಡುವ ಭರವಸೆಯನ್ನು ಈಡೇರಿಸುವಲ್ಲಿ ಸವಾಲನ್ನು ಎದುರಿಸುತ್ತಿದೆ. ಭಾರತೀಯ ಆಹಾರ ನಿಗಮದಿಂದ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ-ಡೊಮೆಸ್ಟಿಕ್ (ಒಎಂಎಸ್‌ಎಸ್-ಡಿ) ಅಡಿಯಲ್ಲಿ ರಾಜ್ಯಗಳಿಗೆ ಗೋಧಿ ಮತ್ತು ಅಕ್ಕಿ ಮಾರಾಟವನ್ನು ನಿಲ್ಲಿಸುವ ಕೇಂದ್ರದ ನಿರ್ಧಾರವು ತೊಂದರೆಗೆ ಕಾರಣವಾಗಿದೆ.
ಕುತೂಹಲದ ಸಂಗತಿಯೆಂದರೆ, ಸರಿಯಾದ ಬೆಲೆಯಲ್ಲಿ ಅಕ್ಕಿ ಖರೀದಿಸಲು ಮಾತುಕತೆಗಾಗಿ ನೆರೆಯ ರಾಜ್ಯಗಳಿಗೆ ನಿಯೋಗವನ್ನು ಮುನ್ನಡೆಸಲು ಸಿದ್ದರಾಮಯ್ಯ ಉತ್ಸುಕರಾಗಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ಈಗಾಗಲೇ ಅಕ್ಕಿ ಖರೀದಿ ಕಾರ್ಯಾಚರಣೆ ಆರಂಭವಾಗಿದೆ. 'ಜುಲೈ 1ರಂದು ಭರವಸೆ ಯೋಜನೆ ಆರಂಭಿಸಲು ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ' ಎಂದರು.
ಸಿದ್ದರಾಮಯ್ಯ ಮತ್ತು ಅವರ ಸಹೋದ್ಯೋಗಿಗಳು 2.28 ಲಕ್ಷ ಟನ್ ಅಕ್ಕಿಯನ್ನು ಎಫ್‌ಸಿಐನಂತೆ ಪ್ರತಿ ಕ್ವಿಂಟಲ್‌ಗೆ 3,400 ರೂ. ನಂತೆ 2.28 ಲಕ್ಷ ಟನ್‌ಗಳಷ್ಟು ಖರೀದಿಸಲು ದಾರಿಗಳನ್ನು ರೂಪಿಸುತ್ತಿದ್ದಾರೆ. ಹೀಗಾದರೆ, ತಿಂಗಳಿಗೆ 775.25 ಕೋಟಿ ರೂ. ಖರ್ಚಾಗುತ್ತದೆ.
ಮುನಿಯಪ್ಪ ಮಾತನಾಡಿ, ಕರ್ನಾಟಕ ಸರ್ಕಾರವು ಮುಕ್ತ ಮಾರುಕಟ್ಟೆಯಿಂದ ಅಕ್ಕಿಯನ್ನು ಸಂಗ್ರಹಿಸುವುದಿಲ್ಲ. ಆದರೆ, ಅದನ್ನು ನೆರೆಯ ರಾಜ್ಯಗಳಿಂದ, ವಿಶೇಷವಾಗಿ ತೆಲಂಗಾಣದ ಸರ್ಕಾರಿ ಸಂಸ್ಥೆಗಳಿಂದ ಖರೀದಿಸಲು ಪ್ರಯತ್ನಿಸುತ್ತದೆ. ಸರ್ಕಾರಿ ಕಾರ್ಯದರ್ಶಿಗಳು ತೆಲಂಗಾಣದಲ್ಲಿ ತಮ್ಮ ಸಹವರ್ತಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ಮಾತುಕತೆಗಾಗಿ ಈಗಾಗಲೇ ಅಧಿಕಾರಿಗಳ ಬ್ಯಾಚ್ ಅಲ್ಲಿಗೆ ತೆರಳಿದೆ. 'ಗ್ರಾಹಕ ಮತ್ತು ಮಾರುಕಟ್ಟೆ ಒಕ್ಕೂಟಗಳಂತಹ ಸರ್ಕಾರಿ ಸಂಸ್ಥೆಗಳು ಇರುವುದರಿಂದ ನಾವು ಮುಕ್ತ ಮಾರುಕಟ್ಟೆಗೆ ಹೋಗುವುದಿಲ್ಲ ಮತ್ತು ನಾವು ಈ ಹಿಂದೆ ಆಹಾರಧಾನ್ಯಗಳನ್ನು ಸಂಗ್ರಹಿಸಿದ್ದೇವೆ' ಎಂದು ತಿಳಿಸಿದರು.
ಅನ್ನಭಾಗ್ಯ: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಹೆಚ್ಚುವರಿ ಅಕ್ಕಿಗೆ ನಿರಾಕರಣೆ; ತೆಲಂಗಾಣಕ್ಕೆ ಸಚಿವ ಕೆಎಚ್ ಮುನಿಯಪ್ಪ ದೌಡು
ಅಕ್ಕಿ ಜತೆಗೆ ರಾಗಿ, ಜೋಳ ವಿತರಿಸುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಲಿದೆ. ನಾವು ಆಹಾರಧಾನ್ಯ ನೀಡುವುದಾಗಿ ಭರವಸೆ ನೀಡಿದಂತೆ ಫಲಾನುಭವಿಗಳಿಗೆ ಹಣ ವರ್ಗಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಯ ಮನೋಭಾವನೆಗೆ ಬದ್ಧವಾಗಿಲ್ಲ ಎಂದು ಮುನಿಯಪ್ಪ ಆರೋಪಿಸಿದರು.
ತಜ್ಞರ ಪ್ರಕಾರ, ಸರ್ಕಾರವು ಒಂದು ಅಥವಾ ಎರಡು ತಿಂಗಳವರೆಗೆ ಧಾನ್ಯಗಳನ್ನು ಪೂರೈಸಲು ಈಗ ಸಮರ್ಥವಾಗಿದೆ. ಆದರೆ, ಈ ಯೋಜನೆಯನ್ನು ದೀರ್ಘಕಾಲ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಂತಿಮವಾಗಿ, ಹಿಂದೆ ಸಂಭವಿಸಿದಂತೆ ಅಕ್ಕಿ ಮರುಬಳಕೆಗಾಗಿ ಅನಧಿಕೃತ ಮಾರುಕಟ್ಟೆಗೆ ಮರಳುವುದನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಹೇಳಿದರು.
ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರ ವಾಗ್ದಾಳಿ
ಕೇಂದ್ರದೊಂದಿಗಿನ ಅಕ್ಕಿ ಸಮರ ಬಿಸಿಯಾಗುತ್ತಿದ್ದಂತೆ, ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕದ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, 'ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಬಡವರಿಗೆ ಉಚಿತ ಅಕ್ಕಿ ನಿರಾಕರಣೆ ಕುರಿತು ರಾಜ್ಯ ಬಿಜೆಪಿ ಏಕೆ ಬಾಯಿಗೆ ಟೇಪ್ ಹಾಕಿಕೊಂಡಿದೆ? ಅವರ ಮೌನದ ಅರ್ಥವೇನೆಂದರೆ, ಕರ್ನಾಟಕಕ್ಕೆ ಎಫ್‌ಸಿಐನಿಂದ ಅಕ್ಕಿ ಮಾರಾಟವನ್ನು ನಿರಾಕರಿಸುವ ಬಡವರ ವಿರೋಧಿ ಆದೇಶವನ್ನು ಹೊರಡಿಸಲು ಮೋದಿ ಸರ್ಕಾರಕ್ಕೆ ಇವರ ಬೆಂಬಲವಿದೆಯಾ ಮತ್ತು ಮನವಿ ಮಾಡಿದವರು ಅವರೇ?' ಎಂದು ಅವರು ಟ್ವೀಟ್ ಮಾಡಿದ್ದಾರೆ.
ಅವರು ಜೆಡಿಎಸ್ ವಿರುದ್ಧ ಸಹ ವಾಗ್ದಾಳಿ ನಡೆಸಿದರು. 'ಮೋದಿ ಸರ್ಕಾರದ ಈ ಬಡವರ ವಿರೋಧಿ ಮತ್ತು ಕರ್ನಾಟಕ ವಿರೋಧಿ ನೀತಿ ನಿರ್ಧಾರದ ಬಗ್ಗೆ ಬಿಜೆಪಿಯ 'ಬಿ ಟೀಂ' ಜೆಡಿಎಸ್ ಏಕೆ ಮೌನವಾಗಿದೆ?' ಎಂದು ಅವರು ಟ್ವೀಟ್ ಮಾಡಿದ್ದಾರೆ.
Tags
ರಾಜ್ಯ