ಅಕ್ಕನ ಮಂಟಪದ ವತಿಯಿಂದ ಕೃತಿ ಬಿಡುಗಡೆ ಸಮಾರಂಭ
ಬೆಂಗಳೂರು : ಶ್ರೀಮತಿ ಲಲಿತಾ ಮಾಹಾಂತೇಶ್ ಅರಳಿ ರಚಿತ ಎರಡು ಕವನ ಸಂಕಲನ ಲೋಕಾರ್ಪಣೆಗೊಂಡಿತು. ಅಮೃತ ಧಾರೆ - ಗಝಲ್ ಸಂಕಲನ ಮತ್ತು ಅರಳಿದ ಮೊಗ್ಗು ಕವನ ಸಂಕಲನ ಎರಡು ಪ್ರತ್ಯೇಕವಾಗಿವೆ. ಅಕ್ಕನ ಮಂಟಪದ ವತಿಯಿಂದ ಕೃತಿ ಲೋಕಾರ್ಪಣೆಗೊಂಡಿದೆ. ಮಹಿಳೆಯರಿಗೆ ಆದ್ಯತೆ ನೀಡಿ, ವೇದಿಕೆ ಕಲ್ಪಿಸುತ್ತಿದೆ ಅಕ್ಕನ ಬಳಗ. ಅದರ ಭಾಗವಾಗಿ ಲಲಿತಾ ಅವರಳಿ ಕವನ ಸಂಕಲನ ಹೊರ ತಂದಿದ್ದಾರೆ. ಸಾತ್ಯಲೋಕದಲ್ಲಿ ಮುನ್ನುಡಿ ಬರೆಯಲು ಅಣಿಯಾಗಿದ್ದು, ಮಹಿಳೆಯರಿಗೆ ದೊರೆತ ಸ್ವಾತಂತ್ರವೇ ಸರಿ ಎಂದು ಗಣ್ಯರು ತಮ್ಮ ಮನದಾಳ ಹಂಚಿಕೊಂಡರು.
ಶ್ರೀಮತಿ ಜಯಶ್ರೀ ಗುರುರಾಜ್ ತಿಳಿವಳ್ಳಿ ಪ್ರಾರ್ಥಿಸಿದರೇ, ಸೋಮಶೇಖರ್ ಸ್ವಾಗತಿಸಿದರು. ಶ್ರೀಮತಿ ಅನಸೂಯಾ ಸಿದ್ದರಾಮ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಡಾ. ಪುಲಿಗೆರೆ ಸಂಪದಾ, ಮಲ್ಲಿಕಾರ್ಜುನ ಅವರು ಉಪನ್ಯಾಸ ನೀಡಿದರು. ಅಕ್ಕನ ಮಂಟಪದ ರೂವಾರಿ ಶ್ರೀಮತಿ ವಿಜಯಾ ನಿರ್ಮಲ ಕೃತಿ ಲೋಕಾರ್ಪಣೆ ಮಾಡಿದರು.
ಶ್ರೀಮತಿ ಲಲಿತಾ ಮಹಾಂತೇಶ್ ರವರು ಕವನ ಸಂಕಲನದ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು. ಶ್ರೀಮತಿ ಮಹಾನಂದಕ್ಕ ಹುಲ್ಲೂರ್ ಅಧ್ಯಕ್ಷತೆ ವಹಿಸಿದ್ದರು. ಕುಮಾರಿ ನೈಜಾ ಹಾಡು ಹಾಡಿದ್ರೆ, ಕುಮಾರಿ ಅನನ್ಯಾ ನೃತ್ಯ ಮಾಡಿದರು. ಶ್ರೀಮತಿ ಜ್ಯೋತಿ ಮಲ್ಲಿಕಾರ್ಜುನ್ ವಂದನಾರ್ಪಣೆ ಸಲ್ಲಿಸಿದರು.
ಇನ್ನೂ ಈ ಸಮಾರಂಭದಲ್ಲಿ ಅಕ್ಕನ ಮಂಟಪದ ಸದಸ್ಯರು, ಸಾಹಿತಿಗಳು, ಹಾಗೂ ಕಲಾವಿದರು ಉಪಸ್ಥಿತರಿದ್ದರು.
ಬ್ಯೂರೋ ರೀಪೋರ್ಟ್, ಸಿದ್ದಿ ಟಿವಿ
Tags
ಟಾಪ್ ನ್ಯೂಸ್