BJP : ಸಂಸದರ ನಿಧಿ ಸ್ವಂತಕ್ಕೆ ಬಳಸಿಕೊಂಡೆ : ಬಿಜೆಪಿ ಸಂಸದ ರಾಜಾರೋಷವಾಗಿ ಹೇಳಿಕೆ

ಸಂಸದರ ನಿಧಿ ಸ್ವಂತಕ್ಕೆ ಬಳಸಿಕೊಂಡೆ : ಬಿಜೆಪಿ ಸಂಸದ ರಾಜಾರೋಷವಾಗಿ ಹೇಳಿಕೆ

ಹೈದರಾಬಾದ್ : 

'ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು ಮನೆ ಕಟ್ಟೋಕೆ, ಮಗನ ಮದುವೆ ಮಾಡೋಕೆ ಬಳಸಿಕೊಂಡೆ' ಎಂದು ತೆಲಂಗಾಣದ ಆದಿಲಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಸೋಯಂ ಬಾಪು ರಾವ್ ಹೇಳಿದ್ದಾರೆ.

ಬಿಜೆಪಿ ಸ್ಥಳೀಯ ಕಾರ್ಯಕರ್ತರ ಸಭೆಯಲ್ಲಿ ಬಾಪು ರಾವ್ ಈ ರೀತಿ ಹೇಳಿರುವುದಾಗಿ ವಿಡಿಯೊ ಹಂಚಿಕೊಂಡು ಸೌತ್ ಫಸ್ಟ್ ವೆಬ್‌ಸೈಟ್ ವರದಿ ಮಾಡಿದೆ.

'ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನಾ ನಿಧಿ (ಎಂಪಿಎಲ್‌ಎಡಿಎಸ್) ಎರಡನೇ ಬಾರಿಗೆ ನನಗೆ 32.5 ಕೋಟಿ ಬಂದಿತ್ತು. ಅದರಲ್ಲೊಂದಿಷ್ಟು ಹಣವನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಿ ಉಳಿದಿದ್ದನ್ನು ನಾನು ಆದಿಲಾಬಾದ್‌ನಲ್ಲಿ ಮನೆ ಕಟ್ಟೋಕೆ ಹಾಗೂ ಮಗನ ಮದುವೆ ಮಾಡೋಕೆ ಬಳಸಿಕೊಂಡೆ' ಎಂದು ಹೇಳಿದ್ದಾರೆ.

'ಸಂಸದರ ನಿಧಿಯನ್ನು ಬಹುತೇಕ ಸಂಸದರು ಪೂರ್ತಿ ನುಂಗಿ ಹಾಕುತ್ತಾರೆ. ಆದರೆ, ನಾನು ನಿಜ ಹೇಳುತ್ತಿದ್ದೇನೆ. ಅದರಲ್ಲಿನ ಸ್ವಲ್ಪ ಹಣವನ್ನು ನಾನು ನನ್ನ ವೈಯಕ್ತಿಕ ಕೆಲಸಕ್ಕೆ ಬಳಸಿಕೊಂಡಿದ್ದೇನೆ. ಉಳಿದ ಸಂಸದರೂ ಈ ರೀತಿ ಸತ್ಯ ಹೇಳುವ ಧೈರ್ಯ ತೋರುತ್ತಾರೆಯೇ? ಎಂದು ಕಾರ್ಯಕರ್ತರನ್ನು ಪ್ರಶ್ನಿಸುತ್ತಾ ಹೇಳಿದ್ದಾರೆ.

ಈ ಹಿಂದೆ ಬಾಪು ರಾವ್, 'ಬುಡಕಟ್ಟು ಸಮುದಾಯದ ಹೆಣ್ಣುಮಕ್ಕಳನ್ನು ಹಿಂಬಾಲಿಸುವ ಮುಸ್ಲಿಂ ಯುವಕರ ತಲೆ ಕತ್ತರಿಸಬೇಕು' ಎಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದರು.

ಅವರು ಪ್ರತಿನಿಧಿಸುವ ಅದಿಲಾಬಾದ್ ಲೋಕಸಭಾ ಕ್ಷೇತ್ರ ಎಸ್.ಟಿ ಮೀಸಲು ಕ್ಷೇತ್ರವಾಗಿದೆ.
Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">