GruhaLakshmiHack : ಕೇಂದ್ರ ಸರ್ಕಾರ ಗೃಹಲಕ್ಷ್ಮೀ ʼಆ್ಯಪ್ʼ ಹ್ಯಾಕ್ ಮಾಡಿದೆ: ಸತೀಶ್ ಜಾರಕಿಹೊಳಿ ಆರೋಪ

ಕೇಂದ್ರ ಸರ್ಕಾರ ಗೃಹಲಕ್ಷ್ಮೀ ʼಆ್ಯಪ್ʼ ಹ್ಯಾಕ್ ಮಾಡಿದೆ: ಸತೀಶ್ ಜಾರಕಿಹೊಳಿ ಆರೋಪ
*-****************************
:ಬೆಳಗಾವಿ: ಮನೆಯ ಯಜಮಾನಿಗೆ ಮಾಸಿಕ ತಲಾ 2,000 ರೂ. ನೀಡುವ ಗೃಹಲಕ್ಷ್ಮೀ ಯೋಜನೆಯ ಆ್ಯಪ್ ಅನ್ನು ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದಾರೆ.
ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡಲು ಕೇಂದ್ರ ಸರ್ಕಾರ ಸತಾಯಿಸುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದಿಂದ ಪ್ರತಿಭಟನೆ ನಡೆಸುವ ವೇಳೆಯಲ್ಲಿ ಇನ್ನೊಂದು ಹೊಸ ಆರೋಪವನ್ನು ಜಾರಕಿಹೊಳಿ ಮಾಡಿದ್ದಾರೆ.
ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅಕ್ಕಿ ಕೊಡುತ್ತಿಲ್ಲ. ಇದನ್ನು ಖಂಡಿಸಿ ಇವತ್ತು ಪ್ರತಿಭಟನೆ ಮಾಡುತ್ತಿದ್ದೇವೆ. ನಾವು ಹಣಕೊಟ್ಟು ಅಕ್ಕಿ ಖರೀದಿ ಮಾಡುತ್ತೇವೆ. ಕೇಂದ್ರದಿಂದ ಉಚಿತವಾಗಿ ಅಕ್ಕಿ ಕೇಳ್ತಿಲ್ಲ. 10 ಕೆ.ಜಿ. ಅಕ್ಕಿ ಕೊಟ್ಟೆ ಕೊಡುತ್ತೇವೆ. ಒಂದು ತಿಂಗಳು ವಿಳಂಬ ಆಗಬಹುದು ಅಷ್ಟೇ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆ ಐದು ವರ್ಷ ಕೊಡುತ್ತೇವೆ ಎಂದರು.
Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">