ಮಾಧ್ಯಮ ರತ್ನ ಪ್ರಶಸ್ತಿ ಪಡೆದ ಬಸವರಾಜ ದೀಪಾವಳಿ
ಹುಬ್ಬಳ್ಳಿ: ಶ್ರೀನಿಧಿ ಫೌಂಡೇಶನ್ ಹಾಗೂ ಸಮಾಜಮುಖಿ ಸೇವಾ ಸಂಸ್ಥೆ ಇವರ ಸಹಯೋಗದಲ್ಲಿ, ಸಾಧಕರಿಗೆ 2023-24ನೇ ಸಾಲಿನ ಪ್ರಶಸ್ತಿ ಪುರಸ್ಕಾರ ನೀಡಿದ್ದು, ಕರ್ನಾಟಕದ ನಾಡು ನುಡಿಗಾಗಿ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಕ್ರಿಯಾತ್ಮಕ ಕಾರ್ಯ ತತ್ಪರತೆ ಹಾಗೂ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ, ಆಯೋಜಿಸಲಾದ ಸಾಧಕರಿಗೆ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಪ್ರಸ್ತಕ ಸಾಲಿನ" ರಾಷ್ಟ್ರೀಯ ಮಾಧ್ಯಮ ರತ್ನ ಪ್ರಶಸ್ತಿಯನ್ನು" ಕುಂದಗೋಳ ತಾಲೂಕಿನ ಯರೇಬೂದಿಹಾಳ ಗ್ರಾಮದ ಬಸವರಾಜ್ ಸಂಗಪ್ಪ ದೀಪಾವಳಿಯವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀನಿಧಿ ಫೌಂಡೇಶನ್ ಅಧ್ಯಕ್ಷರಾದ ಜ್ಯೋತಿ ಎಂ ಶಿವಕ್ಕನವರ್, ಸಮಾಜಮುಖಿ ಸೇವಾ ಸಂಸ್ಥೆಯ ಕಾರ್ಯದರ್ಶಿ ದಾನೇಶ್ವರಿ ಅನಿ ಶೆಟ್ರು, ಹಾಗೂ ಎಸ್ಎಲ್ ರಾಥೋಡ್, ಸಂಸ್ಥೆಯ ಗೌರಧಕ್ಷರಾದ ಮಂಜುನಾಥ್ ಎಸ್ ಶಿವಕ್ಕನವರ್ ಉಪಸ್ಥಿತರಿದ್ದರು.
ಇವರು ಸಮಾಜ ಸೇವಕರಾಗಿ ಹಾಗೂ ಕುಂದಗೋಳ ತಾಲೂಕಿನ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಸದಸ್ಯರಾಗಿ ಹಾಗೂ ಸಂಘದ ಸಹಕಾರದರ್ಶಿಯಾಗಿಯೂ ಮತ್ತು ವಿಜಯವಾಣಿ ದಿನ ಪತ್ರಿಕೆಯ ಗ್ರಾಮೀಣ ವರದಿಗರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ವರದಿ : ಕಿರಣಗೌಡ ತುಪ್ಪದಗೌಡ್ರ ಹುಬ್ಬಳ್ಳಿ