ಸಾರಿಗೆ ಬಸ್‌ನಲ್ಲಿ ನಿರ್ವಾಹಕಿಯ ಅಟ್ಟಹಾಸ - ವೃದ್ಧೆಗೆ ಕಪಾಳಮೋಕ್ಷ ಮಾಡಿದ ಕಂಡಕ್ಟರ್
ಹುಬ್ಬಳ್ಳಿ : ಕುಂದಗೋಳದಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸರ್ಕಾರಿ ಬಸ್‌ನಲ್ಲಿದ್ದ ನಿರ್ವಾಹಕಿಯೊಬ್ಬರು ವೃದ್ಧೆಯ ಮೇಲೆ ಹಲ್ಲೆ ನಡೆಸಿದ ಘಟನೆ ಇಂದು ಬೆಳಗಿನ ಜಾವ ನಡೆದಿದ್ದು ನಿರ್ವಾಹಕಿಯ ವರ್ತನೆಗೆ ಇದೀಗ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಬೆಳ್ಳಿಗ್ಗೆ 7 ಗಂಟೆಗೆ ಕುಂದಗೋಳದಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಮಾರ್ಗ ಮಧ್ಯ ಶರೇವಾಡ ಬಳಿ ನಿರ್ವಾಹಕಿ ವೃದ್ಧ ಮಹಿಳೆಯ ಜೊತೆ ಜಗಳ ತೆಗೆದಿದ್ದಾರೆ ಜಗಳ ಅತಿರೇಕಕ್ಕೆ ಹೋಗುತ್ತಿದ್ದ ಹಾಗೆ ನಿರ್ವಾಹಕಿ ವೃದ್ಧೆ ಎಂಬುದನ್ನು ನೋಡದೇ ಕಪಾಳ ಮೋಕ್ಷವನ್ನು ಮಾಡಿದ್ದಾರೆ. ಇದನ್ನು ನೋಡುತ್ತಿದ್ದ ಸಹ ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಈ ವಿಡಿಯೋ ಸೆರೆ ಹಿಡಿದಿದ್ದಾರೆ.
ವೃದ್ಧೆ ಎಂಬುದನ್ನು ನೋಡದೇ ಪ್ರಯಾಣಿಕರ ಸಮ್ಮುಖದಲ್ಲಿಯೇ ಕಪಾಳ ಮೋಕ್ಷ ಮಾಡಿದ ನಿರ್ವಾಹಕಿಯ ಮೇಲೆ ಹಿರಿಯ ಸಾರಿಗೆ ಇಲಾಖೆಯ ಅಧಿಕಾರಿಗಳು ಯಾವ ರೀತಿಯಾದ ಕ್ರಮವನ್ನು ಕೈಗೂಳ್ಳುತ್ತಾರೆ ಎಂಬುದನ್ನು ಇದೀಗ ಕಾದು ನೋಡಬೇಕಿದೆ.
ವರದಿ : ಕಿರಣಗೌಡ ತುಪ್ಪದಗೌಡ್ರ ಹುಬ್ಬಳ್ಳಿ