ಹುಬ್ಬಳ್ಳಿ
ಮಂಜುನಾಥಾಯ ಶ್ರೀ ಕ್ಷೆತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ದಡಿಯಲ್ಲಿ ಬೀದಿ ನಾಟಕ ಕಾರ್ಯಕ್ರಮವನ್ನು ಶ್ರೀ ಗುರು ಮಡಿವಾಲೆಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದು ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಗ್ರಾಮ ಪಂಚಾಯತ್ ಸದಸ್ಯರು ಸಂತೋಷ ದಾಸನಕೊಪ್ಪ ವಹಿಸಿಕೊಂಡಿದ್ದರು.
ಕಾರ್ಯಕ್ರಮ ವೇದಿಕೆಯಲ್ಲಿ ಒಕ್ಕೂಟದ ಅಧ್ಯಕ್ಷರು ನಾಗಮ್ಮ ಪಾಟೀಲ ಹಾಗೂ ಊರಿನ ಹಿರಿಯರು ಕಲಾ ತಂಡದ ಹಿರೇಮಠ್ ಸರ್ ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ವಿಜಯಲಕ್ಷ್ಮಿ ಜೆ ರಾಯನಾಳ ಅವರು ಯೋಜನೆಯ ಕಾರ್ಯಕ್ರಮ ಗಳ ಬಗ್ಗೆ ಪ್ರಾಸ್ತವಿಕ ಮಾತನಾಡಿದರು.
ಪೂಜ್ಯರ ಕಾರ್ಯಕ್ರಮಗಳ ಬಗ್ಗೆ ಗ್ರಾಮ ಪಂಚಾಯತ್ ಬಗ್ಗೆ ಮೆಚ್ಚುಗೆ ವೇಕ್ತಪಡಿಸಿದರು ಕಲಾ ತಂಡದವರು ನೀರು ಉಳಿಸಿ. ಜಲ ಜೀವ ಉಳಿಸಿ ಮತ್ತು ಯು ಟ್ಯೂಬ್ ಚಾನಲ್ ಸಬ್ಸ್ಕ್ರೈಬ್ ಬಗ್ಗೆ ಯೋಜನೆಯ ಕಾರ್ಯಕ್ರಮ ಗಳ ಬಗ್ಗೆ ಸಿರಿ ಧಾನ್ಯ ಬಳಕೆಯ ಬಗ್ಗೆ ಜನರಿಗೆ ಮನಮುಟ್ಟುವಂತೆ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಸೇವಾಪ್ರತಿನಿಧಿ ಪವಿತ್ರ. ಮತ್ತು ಸಾವಿತ್ರಿ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಗ್ರಾಮದ ಹಿರಿಯರು ಮಕ್ಕಳು ಕಾರ್ಯಕ್ರಮದ ಸದುಪಯೋಗ ಪಡೆದು ಕೊಂಡರು.
ವರದಿ ಕಿರಣಗೌಡ ತುಪ್ಪದಗೌಡ್ರ, ಹುಬ್ಬಳ್ಳಿ