Koppal : ಕೊಪ್ಪಳದ ವೃದ್ದೆಯ ಭಾಗ್ಯಜ್ಯೋತಿ ಮನೆಗೆ 1 ಲಕ್ಷ ಕರೆಂಟ್ ಬಿಲ್


 ಕೊಪ್ಪಳದ ವೃದ್ದೆಯ ಭಾಗ್ಯಜ್ಯೋತಿ ಮನೆಗೆ 1 ಲಕ್ಷ ಕರೆಂಟ್ ಬಿಲ್

ಕೊಪ್ಪಳ  :   ಕೊಪ್ಪಳದ ವೃದ್ದೆಯೊಬ್ಬರ  ಮನೆಯ ಭಾಗ್ಯ ಜ್ಯೋತಿ ಸಂಪರ್ಕದ ಕರೆಂಟ್ ಬಿಲ್ 1 ಲಕ್ಷ ಬಂದಿದ್ದು ಕರೆಂಟ್ ಬಿಲ್ ನೋಡಿ ಆ ಅಜ್ಜಿ ಶಾಕ್ ಆಗಿದ್ದಾರೆ.

ಜೇಸ್ಕಾಂನ ಈ ಎಡವಟ್ಟಿಗೆ ಆ ವೃದ್ದೆಯು ಏನು ಮಾಡಬೇಕೆಂದು ತೋಚದೆ ಚಿಂತೆಗೀಡಗಿದ್ದಾರೆ.

ಈ ತಿಂಗಳ ಕರೆಂಟ್ ಬಿಲ್ ಬರೋಬ್ಬರಿ 1 ಲಕ್ಷ 3 ಸಾವಿರದ 315  ರೂ ಬಂದಿದೆ.

ಕೊಪ್ಪಳದ ವೃದ್ದೆ ಗಿರಿಜಮ್ಮ ಅವರಿಗೆ ಭಾಗ್ಯ ಜ್ಯೋತಿ ವಿದ್ಯುತ್ ಸಂಪರ್ಕ ಇದ್ದು ಎರಡೇ ಎರಡು ಬಲ್ಬ್ ಉರಿಯುತ್ತವೆ,  ಭಾಗ್ಯ ಜ್ಯೋತಿ ನಿಯಮದ ಪ್ರಕಾರ 18 ಯುನಿಟ್ ವಿದ್ಯುತ್ ಉಚಿತ.  ಈ ಹಿಂದೆ ಪ್ರತೀ ತಿಂಗಳಿಗೆ 70 ರಿಂದ 90 ರೂ ಮಾತ್ರ ಕರೆಂಟ್ ಬಿಲ್ ಬರುತ್ತಿತ್ತು. ಈಗ ಒಂದು ಲಕ್ಷದ ಕರೆಂಟ್ ಬಿಲ್ ಬಂದಿದೆ.

ಜೇಸ್ಕಾಂ ನ ಅನೇಕ ಯಡವಟ್ಟುಗಳಲ್ಲಿ ಈಗ ಇದು ಒಂದು ತಾಜಾ ಉದಾಹರಣೆಯಾಗಿದೆ. ಸಮಸ್ಯೆ ಬಗೆಹರಿಸಲು ವೃದ್ದೆ ಗಿರಿಜಮ್ಮ ಜೇಸ್ಕಾಂ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ವರದಿ : ಈರಯ್ಯ ಕುರ್ತಕೋಟಿ

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">