Koppal : ಶ್ರೀಗವಿಮಠಕ್ಕೆ ಭೇಟಿ ನೀಡಿದ ಸಚಿವ ಎಂ.ಬಿ. ಪಾಟೀಲ್


 ಶ್ರೀಗವಿಮಠಕ್ಕೆ ಭೇಟಿ ನೀಡಿದ ಸಚಿವ ಎಂ.ಬಿ. ಪಾಟೀಲ್

ಗವಿಶ್ರೀಗಳವರ ಆಶೀರ್ವಾದ ಪಡೆದ ಸಚಿವರು

ಕೊಪ್ಪಳ,: ನೂತನ ಸರ್ಕಾರದಲ್ಲಿ ಸಂಪುಟ ದರ್ಜೆಯ ಸಚಿವರಾದ ಬಳಿಕ ಪ್ರಪ್ರಥಮ ಬಾರಿಗೆ ಶನಿವಾರ ವಿಜಯಪುರಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರಾದ ಎಂ.ಬಿ.ಪಾಟೀಲ ಅವರು ಕೊಪ್ಪಳ ನಗರಕ್ಕೆ ಆಗಮಿಸಿ ಶ್ರೀಗವಿಮಠಕ್ಕೆ ಭೇಟಿ ನೀಡಿ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳವರ ಆಶೀರ್ವಾದ  ಪಡೆದುಕೊಂಡರು.

ಪೂರ್ವನಿಗದಿಯಂತೆ ಸಚಿವರು ಬೆಳಗ್ಗೆ ಮೊದಲಿಗೆ ಚಿತ್ರದುರ್ಗದ‌‌ ಮುರುಗಾ ಮಠಕ್ಕೆ ಭೇಟಿ‌ ನೀಡಿ ಆಶೀರ್ವಾದ ಪಡೆದುಕೊಂಡ ಬಳಿಕ, ಅಲ್ಲಿಂದ‌ ಹೊರಟು ಹೊಸಪೇಟೆ ಮಾರ್ಗವಾಗಿ ನೇರವಾಗಿ ಕೊಪ್ಪಳ ನಗರಕ್ಕೆ ಆಗಮಿಸಿದರು. ಶನಿವಾರ ಮಧ್ಯಾಹ್ನ ಕೊಪ್ಪಳ ನಗರಕ್ಕೆ ಆಗಮಿಸಿದ‌ ಸಚಿವರು ನೇರವಾಗಿ ಗವಿಮಠಕ್ಕೆ ಭೇಟಿ ನೀಡಿದರು.

ಗವಿಮಠಕ್ಕೆ ಭೇಟಿ ನೀಡಿದ ಸಚಿವರಿಗೆ ಅಭಿನವ ಶ್ರೀಗವಿಸಿದ್ದೇಶ್ವರ ಮಹಾ ಸ್ವಾಮೀಜಿ ಅವರು ಸಚಿವರಾದ ಎಂ.ಬಿ.ಪಾಟೀಲ ಅವರಿಗೆ ಶಾಲುಹೊದಿಸಿ, ಹೂಗುಚ್ಛ ನೀಡಿ ಆಶೀರ್ವದಿಸಿದರು.

ಉತ್ತರ ಕರ್ನಾಟಕ ಭಾಗದ ಬೇರೆ ಬೇರೆ ಬರಪೀಡಿತ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಯೋಜನೆಗಳ ಕಾರ್ಯನುಷ್ಠಾನ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಗವಿಶ್ರೀಗಳವರು ಸಚಿವರೊಂದಿಗೆ ಚರ್ಚಿಸಿದರು. ಕೊಪ್ಪಳ ಜಿಲ್ಲೆಯ ಭೂಮಿಯಲ್ಲಿ ಒಂದು ವಿಶೇಷತೆ ಇದೆ.‌ ಇಲ್ಲಿನ ಜನರು ಪರಿಶ್ರಮ ಸಹ ದೊಡ್ಡದು. ಶಿಕ್ಷಣ, ಆರೋಗ್ಯದಂತಹ ವಿಷಯಗಳ ಬಗ್ಗೆ ಈ ಭಾಗದ ಜನರಿಗೆ ಇನ್ನು ಹೆಚ್ಚಿನ ಜಾಗೃತಿ‌ ಮೂಡಿಸಬೇಕಿದೆ. ಈ ಭಾಗಕ್ಕೆ ನೀರಾವರಿ ಯೋಜನೆಗಳು ಬರಬೇಕು. ವಿವಿಧ ಫ್ಯಾಕ್ಟರಿಗಳಲ್ಲಿ ದುಡಿಯುವ ಕಾರ್ಮಿಕರ‌ ಮತ್ತು ಬರಡು ನೆಲದಲ್ಲಿ ಕೃಷಿ ಮಾಡುವ ರೈತರ ಮಕ್ಕಳಿಗೆ ಸಹ ಸರಿಯಾದ ಶಿಕ್ಷಣ ಸಿಗುವಂತಾಗಬೇಕು ಎಂದು ಚರ್ಚೆಯಲ್ಲಿ ಗವಿಶ್ರೀಗಳವರು ಸಲಹೆ ಮಾಡಿದರು.

ಎರಡನೇ ಸಿದ್ಧಗಂಗಾ ಕ್ಷೇತ್ರ : ಅಂದುಕೊಂಡದ್ದನ್ನು ಸಾಧಿಸುವ ಅಭಿನವ ಶ್ರೀಗವಿಸಿದ್ದೇಶ್ವರ ಮಹಾಸ್ವಾಮಿಗಳವರು ತಮ್ಮ ಬದ್ಧತೆ ಮತ್ತು ಸಂಕಲ್ಪ ಅನನ್ಯವಾದುದಾಗಿದೆ.‌ ಗುರುತರ‌ ಮತ್ತು ವಿನೂತನ ಶೈಕ್ಷಣಿಕ, ಸಾಮಾಜಿಕ ಕಾರ್ಯಗಳ ಮೂಲಕ ಕೊಪ್ಪಳ ಗವಿಮಠವು ನಾಡಿನಾದ್ಯಂತ ಹೆಸರು ಮಾಡಿದೆ. ಶ್ರೀಗವಿಮಠವನ್ನು ನಾಡಿನ ಎರಡನೇ ಸಿದ್ಧಗಂಗಾ ಕ್ಷೇತ್ರ ಎಂದು ಹೇಳಲು ತಮಗೆ ಖುಷಿ ಆಗುತ್ತದೆ ಎಂದು‌ ಸಚಿವರು ಗವಿಶ್ರೀಗಳಿಗೆ ತಿಳಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ‌ ಸಚಿವರು, ಕೊಪ್ಪಳ ಶ್ರೀಗವಿಮಠವು ಜನಪ್ರೀತಿ ಗಳಿಸಿ, ಸರ್ಕಾರ ಮಾಡುವ‌ ಕೆಲಸ ಮಾಡುತ್ತಿದೆ.‌ ಈ ದಿಶೆಯಲ್ಲಿ ಶ್ರೀಗವಿಸಿದ್ದೇಶ್ವರ ಸ್ವಾಮೀಜಿಗಳವರ ಪರಿಶ್ರಮವು ಇತರರಿಗೆ ಪ್ರೇರಣಾದಾಯಕವಾಗಿದೆ. ವಿಜಯಪುರದಲ್ಲಿ ಲಿಂ. ಶ್ರೀಸಿದ್ದೇಶ್ವರ ಶ್ರೀಗಳು ತಮಗೆ ಪ್ರೇರಕ ಶಕ್ತಿ ಆಗಿರುವಂತೆ ಕೊಪ್ಪಳದ ಅಭಿನವ ಗವಿಶ್ರೀಗಳವರ ಆಶೀರ್ವಾದವು ಸಹ ತಮ್ಮನ್ನು ಆಶಾವಾದದ ದೂರದ ದಾರಿಗೆ  ಕೊಂಡೋಯ್ಯಲಿದೆ ಎಂದು ತಾವು ಗವಿಮಠಕ್ಕೆ ಭೇಟಿ ನೀಡಿದ್ದಾಗಿ ಸಚಿವರು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ಮುಖಂಡರಾದ ಮುತ್ತುರಾಜ ಕುಷ್ಟಗಿ, ಕೆಎಮ್ ಸಯ್ಯದ್ ಸೇರಿದಂತೆ ಅನೇಕರು ಇದ್ದರು.

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">