Koppal :ಬಿಜೆಪಿಯ ಸಂಘಟನಾ ಶಕ್ತಿ ಕುಂದಿಲ್ಲ: ಕೆಎಸ್ ಈಶ್ವರಪ್ಪ


ಬಿಜೆಪಿಯ ಸಂಘಟನಾ ಶಕ್ತಿ ಕುಂದಿಲ್ಲ: ಕೆಎಸ್ ಈಶ್ವರಪ್ಪ

ಕೊಪ್ಪಳ,: ವಿಧಾನಸಭೆ ಚುನಾವಣೆಯ ಸೋಲು ಕೆಟ್ಟ ಕನಸು ಎಂದು ತಿಳಿದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರನ್ನು ಗೆಲ್ಲಿಸಲೇಬೇಕು. ಬಿಜೆಪಿಯ ಸಂಘಟನಾ ಶಕ್ತಿ ಕುಂದಿಲ್ಲ. ಕೇಂದ್ರ ಸರಕಾರದ ಸಾಧನೆ ದೇಶ ಪ್ರಶಂಸೆ ಮಾಡುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಹೇಳಿದರು.

 ಶುಕ್ರವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಕಾಂಗ್ರೆಸ್ ನವರು ಅಕ್ಕಿ ನೀಡುವ ಬಗ್ಗೆ ಬಿಜೆಪಿ ವಿರುದ್ಧ ಟೀಕೆ ಮಾಡುತ್ತ ಕಾಲ ಕಳೆಯುತ್ತಿದ್ದಾರೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಕುರಿತು ಹೈಕಮಾಂಡ ನಿರ್ಧಾರ ಮಾಡಲಿದೆ. ಹಾಲಿ ಸಂಸದರಿಗೆ ಟಿಕೆಟ್ ನೀಡುವ ಕುರಿತು ಎದ್ದಿರುವ ಗೊಂದಲ ಮಾಧ್ಯಮಗಳ ಸೃಷ್ಠಿ. ಪಕ್ಷದಲ್ಲಿ ಈ ಬಗ್ಗೆ ಏನೂ ನಿರ್ಧಾರವಾಗಿಲ್ಲ ಎಂದರು. ಈ ಬಾರಿ ಮಳೆ ಕಡಿಮೆಯಾಗಿದ್ದು, ರಾಜ್ಯದಲ್ಲಿ ರೈತ ಬರದಿಂದ ಒದ್ದಾಡುತ್ತಿದ್ದಾನೆ. ಈ ಬಗ್ಗೆ ಕಾಂಗ್ರೆಸ್ ಸರಕಾರಕ್ಕೆ ಕಾಳಜಿ ಇಲ್ಲ ಎಂದರು. ಈ ಸಂದರ್ಭದಲ್ಲಿ ಸಂಸದ ಸಂಗಣ್ಣ ಕರಡಿ, ಶಾಸಕ ದೊಡ್ಡನಗೌಡ ಪಾಟೀಲ. ವಿಧಾನ ಪರಿಷತ್ತು ಸದಸ್ಯೆ ಹೇಮಲತಾ ನಾಯಕ, ಮಾಜಿ ಸಚಿವ ಹಾಲಪ್ಪ ಆಚಾರ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಕೆ. ಶರಣಪ್ಪ, ಮುಖಂಡರಾದ ನವೀನ ಗುಳಗಣ್ಣನವರ, ಮಂಜುಳಾ ಕರಡಿ ಸೇರಿದಂತೆ ಅನೇಕರು ಮುಖಂಡರು ಇದ್ದರು.

ವರದಿ : ಶಿವಕುಮಾರ್ ಹಿರೇಮಠ

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">