ಬಸ್ ಗೆ ಕಲ್ಲೆಸೆದು ಐದು ಸಾವಿರ ದಂಡ ಕಟ್ಟಿದ ಮಹಿಳೆ
ಕೊಪ್ಪಳ : ಬಸ್ ನಿಲ್ಲಿಸಲಿಲ್ಲವೆಂಬ ಕಾರಣಕ್ಕೆ ಕೋಪಗೊಂಡು ಬಸ್ ಗೆ ಕಲ್ಲೆಸೆದು ಮಹಿಳೆ ಒಬ್ಬರು ಐದು ಸಾವಿರ ದಂಡ ಕಟ್ಟಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳದ ಹೊಸಲಿಂಗಾಪುರ ಕ್ರಾಸ್ ಬಳಿ ಬಸ್ ಗಾಗಿ ಕಾದು ಕುಳಿತಿದ್ದ ಮಹಿಳೆ ಬಸ್ ನಿಲ್ಲಿಸದ ಕಾರಣ, ಬಸ್ ಗೆ ಕಲ್ಲು ತೂರಿದ್ದಾಳೆ, ಬಸ್ ನ ಗ್ಲಾಸ್ ಒಡೆಡಿದೆ. ಈ ಹಿನ್ನೆಲೆ ಬಸ್ ಡ್ರೈವರ್ ಪ್ಯಾಸೆಂಜರ್ ಸಮೇತ ಬಸ್ ನ್ನು ಮುನಿರಾಬಾದ್ ಪೊಲೀಸ್ ಠಾಣೆ ಗೆ ತಂದು ನಿಲ್ಲಿಸಿದ್ದಾರೆ.
ಡ್ರೈವರ್ ದೂರು ಕೊಡಲು ಮುಂದಾದಾಗ ಕೊನೆಗೆ ಮಹಿಳೆ ಬಸ್ಸಿನ ಗ್ಲಾಸ್ ಒಡೆದಿದ್ದಕ್ಕೆ ಐದು ಸಾವಿರ ರೂ ದಂಡ ಕಟ್ಟಿದ್ದಾರೆ.
ಕೊಪ್ಪಳದ ಹುಲಿಗಿಯ ಹುಲಿಗೆಮ್ಮ ದೇವಿಯ ದರ್ಶನಕ್ಕೆ ಬಂದಿದ್ದ ಮಹಿಳೆ ಲಿಂಗಾಪುರ ಕ್ರಾಸ್ ಬಳಿ ಬಸ್ ಗಾಗಿ ಗಂಟೆಗಟ್ಟಲೆ ಕಾದು ಕುಳಿತಿದ್ದರು. ಐದಾರು ಬಸ್ ಹೋದರೂ ಯಾವೊಂದು ಬಸ್ ನಿಲ್ಲಿಸಿರಲಿಲ್ಲ. ಹೀಗಾಗಿ ಕೊಪ್ಪಳ ಹೊಸಪೇಟೆ ನಾನ್ ಸ್ಟಾಫ್ ಬಸ್ ನಿಲ್ಲಿಸದಿದ್ದಾಗ ಸಿಟ್ಟು ಬಂದು ಮಹಿಳೆ ಬಸ್ ಗೆ ಕಲ್ಲು ಎಸೆದಿದ್ದಳು.
ಕೊನೆಗೆ ಮಹಿಳೆ ದಂಡ ಕಟ್ಟುವುದರೊಂದಿಗೆ ಪ್ರಕರಣ ಸುಖಾoತ್ಯಗೊಂಡಿದೆ.
ವರದಿ : ಈರಯ್ಯ ಕುರ್ತಕೋಟಿ