ಕೆಲ ಹಾಸ್ಟೆಲ್ ಗಳಲ್ಲಿ- ಕುಡುಕ,ಪುಂಡ,ಪುಡಾರಿ ಸಿಬ್ಬಂದಿಯೇ ಡಾನ್.!? ಅಧಿಕಾರಿ ವೀಕು..
ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣ ಸೇರಿದಂತೆ ತಾಲೂಕಿನ ಕೆಲವು ಕಡೆಗಳಲ್ಲಿನ ಹಾಸ್ಥೆಲ್ ಗಳಲ್ಲಿ, ವಾರ್ಡ್ ನಗಳು/ಮೇಲ್ವಿಚಾರಕರು/ಪ್ರಾಂಶುಪಾಲರು/ಮೇಲಾಧಿಕಾರಿ ಇರೋದಿಲ್ಲ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ. ಬಹುತೇ ಹಾಸ್ಟೆಲ್ ಗಳಲ್ಲಿ ಹಳೇ ಕಾರ್ಮಿಕರೇ, ವಾರ್ಡ್ ನಗಳನ್ನು ನಿಯಂತ್ರಿಸುತ್ತಿದ್ದಾರೆಂಬ ಕೂಗೂ ಕೇಳಿ ಬಂದಿದೆ.
ಕೆಲವು ಹಾಸ್ಟೆಲ್ ಗಳಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಇಲಾಖೆ ಸಿಬ್ಬಂದಿಗೆ , ಮೇಲ್ವಿಚಾರಣೆ ಹಾಗೂ ಕೆಲ ವಾರ್ಡ್ ನ್ ಗಳಿಗೆ ಹೆಚ್ವುವರಿ ಕಾರ್ಯಕ್ಕೆ ನಿಯೋಜಿಸಲಾಗುತ್ತದೆ. ಅವುಗಳಲ್ಲಿ ನಿಯೋಜಿತ ಸಿಬ್ಬಂದಿ ತಾವು ಕಾರ್ಯ ನಿರ್ವಹಿಸದೇ ತಮ್ಮ ಮನೆಯ ಸದಸ್ಯರನ್ನ, ಅಥವಾ ಸಂಬಂಧಿಯನ್ನ ನಿಯೋಜಿಸಲಾಗಿರುತ್ತದೆ.
ಕೆಲ ಹಾಸ್ಟೆಲ್ ಗಳ ಸಿಬ್ಬಂದಿ ಮದ್ಯ ಸೇವಿಸಿಯೇ ಕರ್ಥವ್ಯಕ್ಕೆ ಹಾಜರಾಗುತ್ತಿದ್ದಾರೆಂದು, ನಿಯೋಜಿತ ಸಿಬ್ಬಂದಿ ಅನೇಕ ರೀತಿಯಲ್ಲಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆಂಬ ದೂರುಗಳು ಬಂದಿವೆ. ಕೆಲ ಹಾಸ್ಟೆಲ್ ಗಳಲ್ಲಿ ರಾತ್ರಿ ಪಾಳೆಯ ಸಿಬ್ಬಂದಿ ಕರ್ಥವ್ಯ ನಿರ್ವಹಿಸದೇ, ಮದ್ಯ ಸೇವಿಸಿ ವಿದ್ಯಾರ್ಥಿಗಳೊಂದಿಗೆ ಅಥವಾ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತನೆ ಮಾಡಿರುವ ಹಾಗೂ ಮಾಡುತ್ತಿರುವ ದೂರು ಕೇಳಿಬರುತ್ತಿವೆ.
ಕೆಲವೆಡೆ ರಾತ್ರಿ ಪಾಳೆಯದ ಸಿಬ್ಬಂದಿ ಯವರು, ಕರ್ಥವ್ಯದಲ್ಲಿದ್ದು ಹಾಸ್ಟೆಲ್ ನಲ್ಲಿರದೇ ಅನ್ಯರೊಂದಿಗೆ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ನಿದರ್ಶನಗಳು ಇವೆ ಎಂದು ಹಾಸ್ಟೇಲ್ ನ ಹಳೇ ವಿದ್ಯಾರ್ಥಿಗಳು ದೂರಿದ್ದಾರೆ.
*ಕಾರ್ಮಿಕರಿಂದಲೇ ಕಾರ್ಮಿಕರಿಗೆ ಕಿರುಕುಳ*-
ಕೆಲ ಹಾಸ್ಟೆಲ್ ಗಳಲ್ಲಿ ಹೊಸದಾಗಿ ಬಂದ ಕಾರ್ಮಿಕರನ್ನ ಗುರಿಯಾಗಿಸಿಕೊಂಡು, ಹಳೇ ಕಾರ್ಮಿಕರು ತಮ್ಮ ಕೆಲಸವನ್ನು ಅನಗತ್ಯವಾಗಿ.
ಹೊಸಬರ ಮೇಲೆ ಕೆಲಸದ ಹೊತ್ತಡ ಹೇರುವ ಮೂಲಕ ಕಿರುಕುಳ ನೀಡಲಾಗುತ್ತದೆ, ಪಟ್ಟಣದ ಕೆಲ ವಿದ್ಯಾರ್ಥಿನಿಯರ ವಸತಿ ನಿಲಯಗಳಲ್ಲಿ ಇದು ಜೀವಂತ ಇದೆ ಎಂದು ಹೇಳಲಾಗುತ್ತಿದೆ.
ಹಳೇ ಕೆಲಸದವರು ತಾವೇ ಮೇಲಾಧಿಕಾರಿಗಳಂತೆ ದುರಹಂಕಾರದಿಂದ ವರ್ತಿಸುತ್ತಾರೆ, ಎಂಬ ದೂರುಗಳಿವೆ ಎಂದು ಕೆಲ ಸಂಘಟನೆಕಾರರು ದೂರಿದ್ದಾರೆ.
ಕೆಲ ಹಾಸ್ಟೆಲ್ ಗಳಲ್ಲಿ ಹಳೇ ಕೆಲದವರು ಹೊಸಬರಿಗೆ ವಿಪರೀತ ಕೆಲಸ ಹಂಚಿ, ತಾವು ತೋರ್ಪಡೆಗೆ ಮಾತ್ರ ಕೆಲಸ ಮಾಡಿದಂತೆ ನಟಿಸುವ ಜಾಯಮಾನದವರೂ ಇದ್ದಾರಂತೆ.
ಕೆಲ ಹಾಸ್ಟೆಲ್ ಗಳಲ್ಲಿ ಹಾಸ್ಟೆಲ್ ನ ಮೇಲ್ವಿಚಾರಕರನ್ನ, ಹಳೇ ಕಾರ್ಮಿಕರು ನಿಯಂತ್ರಿಸುತ್ತಾರಂತೆ. ಹಳೇ ಕಾರ್ಮಿಕರ ಕೀಲಿ ಗೊಂಬೆಯಂತೆ, ಮೇಲ್ವಿಚಾರಕರು ವರ್ತಿಸುತ್ತಾರಂತೆ.
ಇದರಿಂದಾಗಿ ಅಮಾಯಕ ಹೊಸ ಕಾರ್ಮಿಕರು ಧೈಹಿಕ ಹಾಗೂ ಮಾನಸಿಕ ಹಿಂಸೆಯನ್ನು, ನಿತ್ಯ ಅನುಭವಿಸುತ್ತಿದ್ದಾರೆಂದು ಕೇಳಿಬಂದಿದೆ.
ನಿರ್ಲಕ್ಷ್ಯ ತೋರಿದ್ದಲ್ಲಿ ವಿದ್ಯಾರ್ಥಿಗಳ ಸಹಕಾರೊಂದೊಂದಿಗೆ , ಪ್ರತಿಭಟಿಸಲಾಗುವುದೆಂದು ವಂದೇ ಮಾತರಂ ಜಾಗೃತಿ ವೆದಿಕೆ ಸೇರಿದಂತೆ ಕೆಲ ಸಂಘಟನೆಗಳ ಪದಾಧಿಕಾರಿಗಳು ಎಚ್ಚರಿಸಿದ್ದಾರೆ. *ಕಾರ್ಮಿಕರ ಬೆವರಿಗೇ ಕನ್ನ.!?*- ಹಾಸ್ಟೆಲ್ ಗಳು ನಿರುದ್ಯೋಗಿಗಳಿಗೆ ಜೀವನಾಧಾರ ಗಳಾಗಿವೆ, ಹೊರಗುತ್ತಿಗೆ ಆಧಾರದಂತೆ ಕೆಲಸಕ್ಕೆ ಸೇರುವ ಮಹಿಳಾ ಕಾರ್ಮಿಕರಿಗೆ ಜೀವನ ಊರುಗೋಲಾದೆ. ಆದರೆ ಕೆಲವೆಡೆಗಳಲ್ಲಿ ಅವರ ಕೂಲಿ ಹಣದಲ್ಲಿ, ಕೆಲವು ಸಿಬ್ಬಂದಿಗಳು ಹಾಗೂ ಕೆಲ ವಾರ್ಡ್ ನಗಳು ಮೋಸಮಾಡುತ್ತಾರೆ.
ಕೆಲವೆಡೆ ಕಾನೂನು ರೀತ್ಯ ಸರ್ಕಾರ ಕಾರ್ಮಿಕರಿಗೆ ನಿಗಧಿಪಡಿಸಿರುವ ಕೂಲಿ ನೀಡದೇ ವಂಚಿಸಲಾಗುತ್ತಿದೆ, ಕೆಲವೆಡೆ ಮಹಿಳೆಯರನ್ನು ಶೋಷಿಸಲಾಗುತ್ತಿದೆ ಮತ್ತು ಕಿರಕುಳ ನೀಡಲಾಗುತ್ತದೆ ಎಂಬ ದೂರುಗಳಿವೆ. ಕಾರ್ಮಿಕರ ಕೂಲಿ ಹಣವನ್ನು, ಹಾಸ್ಟೆಲ್ ನ ಮೇಲ್ವಿಚಾರಕ/ಪ್ರಾಂಶುಪಾಲ/ವಾರ್ಡನ್/ ಮುಖ್ಯಾಧಿಕಾರಿ ಗಳೇ ಕದ್ದು ತಿಂತಾರಂತೆ ಎಂದು ಕಾರ್ಮಿಕ ಮುಖಂಡರು ಗಂಭೀರ ಆರೋಪ ಮಾಡಿದ್ದಾರೆ.
ಈ ಗಂಭೀರ ದೂರುಗಳು ಪಟ್ಟಣದ ಕೆಲವೇ ಕೆಲ ಹಾಸ್ಟೆಲ್ ಗಳಲ್ಲಿ ಕೆಲ ಸಿಬ್ಬಂದಿಗೆ ಅನ್ವಹಿಸುತ್ತಿದೆ ವಿನಃ ಎಲ್ಲಾ ಹಾಸ್ಟೆಲ್ ಗಳಿಗಲ್ಲ.
ಈ ಹಗಲು ದರೋಡೆ ಪಟ್ಟಣದ ಕೆಲ ಹಾಸ್ಟೆಲ್ ಸೇರಿದಂತೆ ,
ತಾಲೂಕಿನ ಗ್ರಾಮೀಣ ಭಾಗದ ಬಹುತೇಕ ಹಾಸ್ಟೆಲ್ ಗಳಲ್ಲಿ ಜರುಗುತ್ತಿದ್ದು, ಸಂಬಂಧಿಸಿದಂತೆ ಅಧಿಕಾರಿಗಳು ಕುದ್ದು ಪರಿಶೀಲಿಸಿ ಸೂಕ್ತ ಕ್ರಮಗಳನ್ನು ಜರುಗಿಸಬೇಕಿದೆ ಎಂದು ಮಹಿಳಾ ಹೋರಾಟಗಾರರು ಆಗ್ರಹಿಸಿದ್ದಾರೆ.
*ಪಾರದರ್ಶಕತೆ ಮರೆಮಾಚಲು,ಹಾಸ್ಟೆಲ್ ಗಳಲ್ಲಿ ಸಿಸಿಕ್ಯಾಮೆರಾ ಬಂದ್.!?ಆರೋಪ*- ಕೆಲವು ವಿದ್ಯಾರ್ಥಿನಿಯರ ಹಾಸ್ಠೆಲ್ ಗಳು ಸೇರಿದಂತೆ, ತಾಲೂಕಿನ ಬಹುತೇಕ ಹಾಸ್ಟೆಲ್ ಗಳಲ್ಲಿ. ತಿಂಗಳುಗಳಿಂದ ಸಿಸಿ ಕ್ಯಾಮೆರಾಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ, ಉದ್ದೇಶ ಪೂರ್ವಕವಾಗಿ ಸರಿಯಾದ ನಿರ್ವಣೆ ಮಾಡುತ್ತಿಲ್ಲ ಎಂದು ಕೆಲ ಹಾಸ್ಟೆಲ್ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ದೂರಿದ್ದಾರೆ.
ಕಾರಣ ಹಾಸ್ಥೆಲ್ ನಲ್ಲಿ ಪಾರದರ್ಶಕತೆ ನಿರ್ವಹಣೆ ಕಾಣೆಯಾಗುತ್ತಿದ್ದು, ಅದನ್ನು ಮರೆಮಾಚಲು ಕ್ಯಾಮೆರಾಗಳನ್ನು ದುರಸ್ಥಿಗೊಳಿಸುವಲ್ಲಿ ಹಿಂಜರಿಯುತ್ತಿದ್ದಾರೆ ಎಂದು ಹಾಸ್ಟೆಲ್ ಗಳ ಹಿರಿಯ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಕೆಲ ಹಾಸ್ಟೆಲ್ ಗಳಲ್ಲಿ ಕೆಲ ಸಿಬ್ಬಂದಿಯವರೇ, ಖುದ್ದು ಸಿಸಿ ಕ್ಯಾಮೆರಾಗಳನ್ನು ತಾವೇ ಬಂದ್ ಮಾಡುತ್ತಾರಂತೆ. ಕಾರಣ ತಮ್ಮ ಅಕ್ರಮ ಚಟುವಟಿಕೆಗಳ, ಅನೈತಿಕ ಚಟುವಟಿಕೆಗಳ ಬಗ್ಗೆ, ನಿರ್ಲಕ್ಷ್ಯ ಧೋರಣೆಯ ಬಗ್ಗೆ ಸಾಕ್ಷ್ಯಾಧಾರ ಸಿಗುತ್ತದೆ ಎಂದು ಸಿಬ್ಬಂದಿಯವರು. ಸಿಸಿ ಕ್ಯಾಮೆರಾಗಳನ್ನು ತಮಗೆ ಅನುಕೂಲಕ್ಕೆ ತಕ್ಕಂತೆ, ಕ್ಯಾಮೆರಾ ಬಂದ್ ಮಾಡೋ ಕುತಂತ್ರಗಾರಿಕೆ ಮಾಡುತ್ತಾರಂತೆ ಸಿಬ್ಬಂದಿಯವರು.
ಇಲಾಖಾ ಅಧಿಕಾರಿಗಳು ಭೆಟ್ಟಿ ಕೊಡುತ್ತಿರಾದರೂ ಸುಧಾರಣೆ ಕಾಣುತ್ತಿಲ್ಲ ಎಂದು ಅವರು ಆರೋಪಿಸಿದ್ದರೆ.
*ಕಿರಾತಕ ವಿದ್ಯಾರ್ಥಿಗಳ ಹಾವಳಿ*- ಪಟ್ಟಣ ಸೇರಿದಂತೆ ತಾಲೂಕಿನ ಕೆಲವು ಹಾಸ್ಟೆಲ್ ಗಳಲ್ಲಿ, ಹಾಸ್ಟೆಲ್ ಗೆ ಬರುವ ಕೆಲ ಕಾರ್ಮಿಕರಿಗೆ ಕೆಲ ಕಿಡಿಗೇಡಿ ವಿದ್ಯಾರ್ಥಿಗಳು ಕಿರಿ ಕಿರಿಯುಂಟು ಮಾಡುತ್ತಿದ್ದಾರೆ ಎಂಬ ದೂರಿದೆ.
ಕಿಡಿಗೇಡಿ ವಿದ್ಯಾರ್ಥಿಗಳ ಪೋಷಕರನ್ನು ಕರೆಸಿ ಬುದ್ದಿವಾದ ಹೇಳಿಸಬೇಕಿದೆ ನಂತರ ಕಾನೂನು ರೀತ್ಯ ಶಿಸ್ಥುಕ್ರಮ ಜರುಗಿಸಬೇಕಿದೆ. ಇದನ್ನು ನಿಯಂತ್ರಿಸಬೇಕಿರುವ ಹೊಣೆ ಸಂಬಂಧಿಸಿದ ಅಧಿಕಾರಿಗಳದ್ದು. ಕೆಲವೇ ಕೆಲ ಹಾಸ್ಟೆಲ್ ಗಳಲ್ಲಿ ಕೆಲವೇ ಕೆಲ ವಿದ್ಯಾರ್ಥಿಗಳು ಮಾಡುವ ಕಿರಿ ಕರಿಯಿಂದಾಗಿ, ಇಡೀ ಹಾಸ್ಟೆಲ್ ವಿದ್ಯಾರ್ಥಿಗಳ ಸಮುದಾಯಕ್ಕೆ ಕೆಟ್ಟು ಹೆಸರು ತರುವಂತಾಗುತ್ತದೆ. ಕಾರಣ ಸಂಬಂಧಿಸಿದಂತೆ ಹಾಸ್ಟೆಲ್ ವಾರ್ಡ್ ನಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ, ನಿರ್ಲಕ್ಷ್ಯ ತೋರಿದ್ದಲ್ಲಿ ಜರುಗಬಹುದಾದ ಅವಘಡಗಳಿಗೆ ಇಲಾಖಾಧಿಕಾರಿಗಳೇ ನೇರ ಹೊಣೆ ಹೊರಬೇಕಾಗುತ್ತದೆ.
ಕೆಲ ಹಾಸ್ಟೆಲ್ ಗಳಲ್ಲಿ ನೀಡುವ ಆಹಾರದಲ್ಲಿ ಗುಣಮಟ್ಟ ಇರುವುದಿಲ್ಲ, ಶೌಚಾಲಯಗಳು ತುಂಬಿ ದುರ್ನಾಥ ಬೀರುತ್ತಿವೆ ವಾರ್ಡ್ ನಗಳು ತಿಂಗಳೊಮ್ಮೆ ಬರುತ್ತಾರೆ. ಎಲ್ಲವನ್ನು ಸ್ಥಳೀಯ ಪ್ರಭಾವಿಗಳ ಸಂಬಂಧಿ ಹಿರಿಯ ಕಾರ್ಮಿಕರನ್ನೇ ನೇಮಿಸಲಾಗುತ್ತಿದೆ. ಕೆಲಸ ಹಂಚುವುದರಲ್ಲಿ ತಾರತಮ್ಯ ಹಾಗೂ ಅನಗತ್ಯ ಕೆಲದ ಹೊರೆ ಹೇರಲಾಗುತ್ತದೆ ಎಂಬ ದೂರುಗಳಿವೆ. ಕೆಲ ಹಾಸ್ಟೆಲ್ ಗಳು ಹಾಸ್ಟೆಲ್ ಗಳ ಆವರಣಗಳು ಅಬಾಚಾರ ಹಾಗೂ ಅಕ್ರಮ ಚಟುವಟಿಕೆಗಳ ತಾಣವಾಗುತ್ತಿವೆ ಎಂಬ ಗಂಭೀರ ಆರೋಪಗಳಿವೆ, ಎಲ್ಲವೂ ಸರಿಹೋಗಬೇಕಾದರೆ ಮೊದಲು ಹಾಸ್ಟೆಲ್ ಗಳಲ್ಲಿ ಸಿಸಿ ಕ್ಯಾಮೆರಾಗಳನ್ನ ಹಾಕಬೇಕಿದೆ.
ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲಾ ಹಾಸ್ಟೆಲ್ ಗಳಲ್ಲಿ ಸಿಸಿ ಕ್ಯಾಮೆರಾಗಳ ಕಣ್ಗಾವಲು ವ್ಯವಸ್ಥೆ ಮಾಡಬೇಕಿದೆ, ಕೆಲವೆಡೆಗಳ ಲ್ಲಿ ದುರುದ್ದೇಶ ಪೂರ್ವಕವಾಗಿಯೇ ಕ್ಯಾಮೆರಾಗಳನ್ನ ಬಂದ್ ಮಾಡಲಾಗುತ್ತದೆ. ಕೆಟ್ಟು ನಿಂತ ಕ್ಯಾಮೆರಾಗಳನ್ನು ಸರಿಮಾಡಲು ಇಚ್ಚಿಸುವುದಿಲ್ಲ. ಮೇಲಾಧಿಕಾರಿಗಳು ಬಂದಾಗ ಮಾತ್ರ ಎಲ್ಲಾ ಸರಿ ಮಾಡುತ್ತಾರೆ, ನಂತರ ಮೊದಲಿನಂತೆ ಬಂದ್ ಮಾಡಲಾಗುತ್ತದೆ ಎಂದು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ದೂರಿದ್ದಾರೆ. ಹಾಸ್ಟೆಲ್ ಗಳಲ್ಲಿ ಜರುಗುವ ಎಲ್ಲಾ ಅವ್ಯವಸ್ಥೆಗಳನ್ನು ಮತ್ತು ವಿದ್ಯಾರ್ಥಿಗಳ ಮೇಲಾಗುವ ಮತ್ತು ಕಾರ್ಮಿಕರ ಮೇಲಾಗುತ್ತಿರುವ ಶೋಷಣ,ಕಿರುಕುಳಗಳನ್ನು ನಿಯಂತ್ರಿಸಲು ಸಿಸಿಕ್ಯಾಮೆರಾ ದುರಸ್ತಿ ಮಾಡಿಸಬೇಕಿದೆ ಎಂದು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು, ಈ ಮೂಲಕ ಜಿಲ್ಲಾಧಿಕಾರಿಗಳಿಗೆ ಕ್ರಮಕ್ಕಾಗಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ವಂದೇ ಮಾತಂ ಜಾಗೃತಿ ವೇದಿಕೆಯ ಮುಖಂಡರು ಹಾಗೂ ವಿದ್ಯಾರ್ಥಿಗಳ ಒಕ್ಕೂಟದ ಮುಖಂಡರು, ಮಹಿಳಾ ಸಂಘ, ರೈತ ಸಂಘ, ಕಾರ್ಮಿಕರ ಸಂಘದ ಪಾದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ವಿ.ಜಿ.ವೃಷಭೇಂದ್ರ ಕೂಡ್ಲಿಗಿ
Tags
ಕ್ರೈಂ