ಬರಗಾಲದ ಮುನ್ಸೂಚನೆ ಉದ್ಯೋಗ ಭರವಸೆ ಸೃಷ್ಟಿಗೆ ಅಧಿಕಾರಿಗಳಿಗೆ ರಾಯರಡ್ಡಿ ಸೂಚನೆ.
ಕುಕನೂರು : ಜುಲೈ ತಿಂಗಳು ಹತ್ತಿರ ಬಂದರೂ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆ ಸುರಿದಿಲ್ಲ, ಬರಗಾಲದ ಮುನ್ಸೂಚನೆ ಇದಾಗಿದ್ದು ಕುಕಾನೂರು, ಯಲಬುರ್ಗಾ ತಾಲೂಕಿನ ಅಧಿಕಾರಿಗಳು ಜನರಿಗೆ ಉದ್ಯೋಗ ಭರವಸೆ ಸೃಷ್ಟಿಸಿ ಖಾತರಿ ಯೋಜನೆ ಪ್ರಾರಂಭಿಸಲು ಈಗಲೇ ಅಗತ್ಯ ತಯಾರಿ ಮಾಡಿಕೊಳ್ಳಿ ಎಂದು ಶಾಸಕರಾದ ಬಸವರಾಜ್ ರಾಯರಡ್ಡಿ ತಾಲೂಕಿನ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ದ್ಯಾoಪುರ ಗ್ರಾಮದಲ್ಲಿ ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಶಾಸಕರು.
ಮುಂಗಾರು ಮಳೆ ಕೈಕೊಟ್ಟಿದ್ದು ಅವಳಿ ತಾಲೂಕಿನಲ್ಲಿ ಬರಗಾಲದ ಛಾಯೆ ಅವರಿಸಿದೆ, ಜುಲೈ ತಿಂಗಳು ಹತ್ತಿರ ಬಂದರೂ ಕೂಡಾ ಮಳೆಯಾಗಿಲ್ಲ. ಹೀಗಾಗಿ ಉದ್ಯೋಗ ಭರವಸೆ ಸೃಷ್ಟಿಸಿ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕೆಲಸ ಪ್ರಾರಂಭಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ತಾಲೂಕಿನ ಅಧಿಕಾರಿಗಳಿಗೆ ಸೂಚಿಸಿದರು.
ಕುಕನೂರು, ಯಲಬುರ್ಗಾ ಅವಳಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಸಿಸಲು ಶೀಘ್ರದಲ್ಲಿ ಸರ್ಕಾರಕ್ಕೆ ಮನವಿ ಮಾಡುತ್ತೇನೆ, ವಿಶೇಷ ಅನುದಾನಕ್ಕೆ ಮುಂಬರುವ ಅಧಿವೇಶನದಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಶಾಸಕ ಬಸವರಾಜ್ ರಾಯರಡ್ಡಿ ಅವರು ಹೇಳಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಎಂ ನೀಲಪ್ರಭಾ, ತಾಲೂಕು ಪಂಚಾಯತಿ ಇ. ಓ. ರಾಮಣ್ಣ ದೊಡ್ಡಮನಿ, ಸಿಡಿಪಿಒ ಸಿಂಧೂ ಎಲಿಗಾರ, ಬಿ ಇ ಓ ಪದ್ಮನಾಭ ಕರ್ಣಮ್, ಇತರ ಅಧಿಕಾರಿಗಳು, ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ವರದಿ : ಈರಯ್ಯ ಕುರ್ತಕೋಟಿ