ಗೋಹತ್ಯೆಯ ಒಂದು ಹನಿ ರಕ್ತ ಕೂಡ ಭೂಮಿ ಮೇಲೆ ಬೀಳಲು ಬಿಡಲಾರೆವು : ಪ್ರಮೋದ್ ಮುತಾಲಿಕ್
******************************
ಬೆಂಗಳೂರು: ಎಮ್ಮೆ ಕೋಣಗಳನ್ನು ಕಡಿದು ಹಾಕುವುದಾದರೇ ಹಸುಗಳನ್ನು ಏಕೆ ಕಡಿಯಬಾರದು? ಎಂದು ಹೇಳಿದ ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್ ವಿರುದ್ಧ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ.
ಗೋ ಹತ್ಯೆ ನಿಷೇಧ ಕಾಯ್ದೆ, ಮತಾಂತರ ಕಾಯ್ದೆ ಹಿಂಪಡೆಯುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ. ಮುಸ್ಲಿಂ ಓಲೈಕೆಗಾಗಿ ಈ ರೀತಿ ಮಾಡುತ್ತಿದ್ದಾರೆ. ಕೋಣ ಮತ್ತು ಎಮ್ಮೆ ಕೂಡ ಗೋ ವ್ಯಾಖ್ಯಾನದಲ್ಲಿ ಬರುತ್ತೆ. ಅದನ್ನು ಕೂಡ ಕಡಿಯಬಾರದು. ಸಾಧು, ಸಂತರು, ಋಷಿ ಮುನಿಗಳು ಗೋ ಸಂರಕ್ಷಣೆ ಆಗಬೇಕು ಅಂದಿದ್ದಾರೆ. ಕಡಿದರೆ ಕಾಂಗ್ರೆಸ್ ಗೆ ಗೋವಿನ ಶಾಪ ತಟ್ಟಲಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಸ್ಲಿಂ ತುಷ್ಟೀಕರಣ ಒಂದೇ ಇವರ ಉದ್ದೇಶ ಆಗಿದೆ. ಗೋಹತ್ಯೆ ಹತ್ಯೆ ನಿಷೇಧ ಕಾನೂನು ಹಿಂಪಡೆದರೆ ಉಗ್ರ ಹೋರಾಟ ಮಾಡುತ್ತೇವೆ. ಗೋಹತ್ಯೆಯ ಒಂದು ಹನಿ ರಕ್ತ ಕೂಡ ಭೂಮಿ ಮೇಲೆ ಬೀಳಲು ಬಿಡಲಾರೆವು. ಮುಸ್ಲಿಂ ತುಷ್ಟೀಕರ ಮಾಡಲು ನಾವು ಬಿಡುವುದಿಲ್ಲ ಎಂದು ಪ್ರಮೋದ್ ಮುತಾಲಿಕ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.