Police Suspend : ಶಾಸಕ ರಾಯರಡ್ಡಿ ಜನಸಂಪರ್ಕ ಸಭೆಯಲ್ಲಿ ಭದ್ರತೆ ಲೋಪ, ಮೂವರು ಪೊಲೀಸ್ ರ ಸಸ್ಪೆಂಡ್


ಶಾಸಕ ರಾಯರಡ್ಡಿ ಜನಸಂಪರ್ಕ ಸಭೆಯಲ್ಲಿ ಭದ್ರತೆ ಲೋಪ, ಮೂವರು ಪೊಲೀಸ್ ರ ಸಸ್ಪೆಂಡ್

ಕುಕನೂರು  :  ಯಲಬುರ್ಗಾ ಶಾಸಕ ಬಸವರಾಜ್ ರಾಯರಡ್ಡಿ ಅವರ ಜನ ಸಂಪರ್ಕ ಸಭೆಯಲ್ಲಿ ಆದ ಸಣ್ಣ ಗಲಾಟೆಯಿಂದಾಗಿ ಭದ್ರತೆಗೆ ನಿಯೋಜನೆಗೊಂಡಿದ್ದ ಮೂವರು ಪೊಲೀಸ್ ಸಿಬಂದಿಯನ್ನು ಕರ್ತವ್ಯ ನಿರ್ಲಕ್ಷ್ಯ ಅಡಿಯಲ್ಲಿ ಕೊಪ್ಪಳ ಎಸ್ ಪಿ ಯಶೋಧ ವಂಟಿಗೂಡಿ ಸಸ್ಪೆಂಡ್ ಮಾಡಿದ್ದಾರೆ.

ನಿನ್ನೆ ಗುರುವಾರ ಕುಕನೂರು ತಾಲೂಕಿನ ಬಟಪನಹಳ್ಳಿಯಲ್ಲಿ ಶಾಸಕ ಬಸವರಾಜ್ ರಾಯರಡ್ಡಿ ಅವರ ಜನ ಸಂಪರ್ಕ ಸಭೆ ಹಮ್ಮಿಕೊಳ್ಳಲಾಗಿತ್ತು, ಈ ವೇಳೆ ಗ್ರಾಮದ ಕೆಲವರು ಸೌಚಾಲಯ ನಿರ್ಮಾಣ, ಇತರ ಅಭಿವೃದ್ಧಿ ವಿಷಯಕ್ಕೆ ಸಂಬಂಧಿಸಿದಂತೆ ಶಾಸಕರೊಂದಿಗೆ ವಾಗ್ವದಕ್ಕಿಳಿದರು, ಈ ಸಂದರ್ಭದಲ್ಲಿ ಭದ್ರತೆ ಗೆ ನಿಯೋಜನೆ ಮಾಡಲಾಗಿದ್ದ ಮೂವರು ಪೊಲೀಸ್ ಸಿಬಂದಿಗಳು ಘಟನೆ ನಡೆದ ಸ್ಥಳದಲ್ಲಿ ಇರದೇ  ಭದ್ರತೆಗೆ ಹಾಜರಾಗದೆ ನಿರ್ಲಕ್ಷ್ಯ ತೋರಿದ ಹಿನ್ನೆಲೆ ಕುಕನೂರು ಪೊಲೀಸ್ ಠಾಣೆಯ ಮೂವರು ಸಿಬಂದಿಗಳನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಕೊಪ್ಪಳ ಜಿಲ್ಲಾ ವರಿಷ್ಟಾಧಿಕಾರಿ ಯಶೋಧ ವಂಟಿಗೂಡಿ ಅವರು ತಿಳಿಸಿದ್ದಾರೆ.

ಶಾಸಕರೊಂದಿಗೆ ಗಲಾಟೆ ಮಾಡಿದ ಏಳು ಜನರನ್ನು ಕುಕನೂರು ಠಾಣೆಗೆ ಕರೆ ತಂದು ವಿಚಾರಣೆ ಮಾಡಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

ವರದಿ : ಈರಯ್ಯ ಕುರ್ತಕೋಟಿ

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">