ಕೈಕೊಟ್ಟ ಮುಂಗಾರು, ದಿನಸಿ ತರಕಾರಿ ಬೆಲೆ ದುಬಾರಿ
ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ದಿನಸಿ ಪದಾರ್ಥ, ಬೇಳೆಕಾಳು, ತರಕಾರಿ ಬೆಲೆಯಲ್ಲಿ ದೀಡೀರನೇ ಏರಿಕೆ ಕಂಡಿದೆ.
ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನ ಮಳೆ ರಾಜ್ಯದಲ್ಲಿ ಬಹುತೇಕ ವಿಫಲವಾಗಿದೆ. ಈಗಾಗಲೇ ಜುಲೈ ತಿಂಗಳ ಸನಿಹಬಂದರೂ ಮಳೆರಾಯ ಕೃಪೆ ತೋರಿಲ್ಲ. ಹೀಗಾಗಿ ತರಕಾರಿ ಬೆಲೆ ಗಗನಕ್ಕೆರಿದೆ, ಮುಖ್ಯವಾಗಿ ಟೊಮೇಟೊ ದರ 100 ರೂ ದಾಟಿದೆ, ಈರುಳ್ಳಿ ದರ ಕೂಡಾ ನೂರರ ಹತ್ತಿರ ಬಂದಿದೆ. ಬೀನ್ಸ್, ಹಿರೇಕಾಯಿ, ಅವರೆಕಾಯಿ ದರ ಮೊದಲಿಗಿಂದ ದುಪ್ಪಟ್ಟು ಆಗಿದೆ.
ದಿನಸಿ, ತರಕಾರಿ, ಬೇಳೆಕಾಳು ಪದಾರ್ಥಗಳ ದರ ಹೆಚ್ಚಳದಿಂದ ಜನಸಾಮಾನ್ಯರು ಕೈಸುಟ್ಟುಕೊಳ್ಳುವಂತೆ ಮಾಡಿದೆ. ಈಗಲೇ ಹೀಗಾದರೆ ಮುಂದೆ ಹೇಗೋ ಎಂಬ ಚಿಂತೆ ಜನಸಾಮಾನ್ಯರನ್ನು ಕಾಡುತ್ತಿದೆ.
ಮುಂಗಾರು ಪ್ರಾರಂಭದಲ್ಲೇ ಹೀಗಾದರೆ ಇನ್ನು ಬೇಸಿಗೆ ಕಾಲದಲ್ಲಿ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಮುಂಗಾರು ಮಳೆ ಕೈಕೊಟ್ಟಿದ್ದರಿಂದ ರೈತಾಪಿ ವರ್ಗ,ಜನಸಾಮಾನ್ಯರು ಚಿಂತೆಗೀಡಾಗುವಂತೆ ಮಾಡಿದ್ದು, ಜೀವ ಸಂಕುಲ, ಪ್ರಾಣಿ ಸಂಕುಲಕ್ಕೆ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಅಭಾವ ಎದುರಾಗಲಿದೆ.
ವರದಿ : ಈರಯ್ಯ ಕುರ್ತಕೋಟಿ