Sindhanuru : ಪರಿಸರ ರಾಜ್ಯ ಪ್ರಶಸ್ತಿ ವಿಜೇತ ಅಮರೇಗೌಡ ಮಲ್ಲಾಪೂರ ಅವರಿಗೆ ಬಾಳೆಹೊನ್ನೂರು ಶಾಖಾ ಮಠದ ಶ್ರೀಗಳಿಂದ ಸನ್ಮಾನ


ಪರಿಸರ ರಾಜ್ಯ ಪ್ರಶಸ್ತಿ ವಿಜೇತ ಅಮರೇಗೌಡ ಮಲ್ಲಾಪೂರ ಅವರಿಗೆ ಬಾಳೆಹೊನ್ನೂರು ಶಾಖಾ ಮಠದ ಶ್ರೀಗಳಿಂದ ಸನ್ಮಾನ

ಸಿಂಧನೂರು: ಶ್ರೀ ಷ, ಬ್ರ, ಸೋಮನಾಥ ಶಿವಾಚಾರ್ಯ  ಮಹಾಸ್ವಾಮಿಗಳು ಬಾಳೆಹೊನ್ನೂರು ಖಾಸಾಶಾಖಾಮಠ ಕರಿಬಸವ ನಗರ 3 ಮೇಲ್ ಕ್ಯಾಂಪ್ ಸಿಂಧನೂರು ಮಠಕ್ಕೆ ಇಂದು ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ವಿಜೇತರಾಗಿ ಮೊದಲ ಬಾರಿಗೆ ಭೇಟಿ ನೀಡಿ ಶ್ರೀಗಳಿಂದ ಆರ್ಶೀವಾದ ಪಡೆದರು.

ಈ ಸಂದರ್ಭದಲ್ಲಿ ಶ್ರೀ.ಷ,ಬ್ರ,ಸೋಮನಾಥ ಶಿವಾಚಾರ್ಯ  ಮಹಾಸ್ವಾಮಿಗಳು ತುಂಬಾ ಸಂತೋಷಗೊಂಡು ಶುಭ ಆರೈಸಿದರು.ಮೊದಲ ಬಾರಿಗೆ ನಮ್ಮ ಮಠಕ್ಕೆ ಆಗಮಿಸಿದ ಸಿಂಧನೂರಿನ ಪರಿಸರ ಪ್ರೇಮಿ ಹಾಗೂ ಶಿಷ್ಯರಾದ,ಪರಿಸರ ಸೇವೆಯಲ್ಲಿ ರಾಜ್ಯ ಪ್ರಶಸ್ತಿ ಪಡೆದ ಅಮರೇಗೌಡ ಮಲ್ಲಾಪೂರ ಅವರಿಗೆ ಭಗವಂತನ ಆರ್ಶೀವಾದ ಸದಾ ಇರಲಿ,ವೃಕ್ಷಮಾತೆ ಸದಾಕಾಲ ನಿಮ್ಮ ಬೆಂಬಲಕ್ಕಿರಲಿ, ಸಿಂಧನೂರಿನ ಕೀರ್ತಿಪತಾಕೆ ಇನ್ನಷ್ಟು ದೇಶದೆಲ್ಲೆಡೆ ಹರಡಲಿ, ವೃಕ್ಷಮಾತೆಯ ಸೇವೆ ನಿರಂತರವಾಗಿ ನಡೆಯಲಿ ಎಂದು ಆರ್ಶೀವದಿಸಿದರು. ನಂತರ ಮಠದ ವತಿಯಿಂದ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ವಿರೇಶ ನೀಡಿಗೋಳ,ಮುದಿಯಪ್ಪ ಹೊಸಳ್ಳಿ ಕ್ಯಾಂಪ್, ಚಂದ್ರಶೇಖರ ಪವಾಡ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">