Sindhanuru : ಪರಿಸರ ರಾಜ್ಯ ಪ್ರಶಸ್ತಿ ಸಿಂಧನೂರಿಗೆ ಸಿಹಿ ಹಂಚಿ ಸಂಭ್ರಮ


ಪರಿಸರ ರಾಜ್ಯ ಪ್ರಶಸ್ತಿ ಸಿಂಧನೂರಿಗೆ ಸಿಹಿ ಹಂಚಿ ಸಂಭ್ರಮ

ಸಿಂಧನೂರಿನ pwd ಕ್ಯಾಂಪ್ ನ ಚನ್ನಬಸವೇಶ್ವರ ನಗರದ ಶ್ರೀ ಶಿವಾಲಯ ದೇವಸ್ಥಾನದಲ್ಲಿ ದೇವಸ್ಥಾನದ ಟ್ರಸ್ಟ್ ವತಿಯಿಂದ ಪರಿಸರ ಕ್ಷೇತ್ರದಲ್ಲಿ ರಾಜ್ಯ ಸರ್ಕಾರದ "ಕರ್ನಾಟಕ ಪರಿಸರ ರಾಜ್ಯ ಪ್ರಶಸ್ತಿ"ಯನ್ನು ಪಡೆದ ಸಿಂಧನೂರಿನ ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷ ಅಮರೇಗೌಡ ಮಲ್ಲಾಪೂರ ಮತ್ತು ಕೃಷಿ ಇಲಾಖೆಯ ನಿವೃತ್ತ ಅಧಿಕಾರಿಗಳಾದ ಶರಣಬಸವ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.


ಇದೇ ಸಂದರ್ಭದಲ್ಲಿ ಸಿಂಧನೂರಿನ ವನಸಿರಿ ಫೌಂಡೇಶನ್ ಗೆ ರಾಜ್ಯ ಪ್ರಶಸ್ತಿ ಲಭಿಸಿರುವುದು ಇಡೀ ರಾಜ್ಯಕ್ಕೆ ಕೀರ್ತಿ ತಂದಿರುವ ಕಾರಣ ಶ್ರೀ ಶಿವಾಲಯ ಟ್ರಸ್ಟ್ ಅದ್ಯಕ್ಷರು, ಪದಾಧಿಕಾರಿಗಳು ಹಾಗೂ ವನಸಿರಿ ಫೌಂಡೇಶನ್ ಸದಸ್ಯರು ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಿದರು.


ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಅಮರೇಗೌಡ ಮಲ್ಲಾಪೂರ, ಶ್ರೀ ಶಿವಾಲಯ ಟ್ರಸ್ಟ್ ಅದ್ಯಕ್ಷರಾದ ವೀರೇಶ ಸಾನಬಾಳ,ಕೃಷಿ ಇಲಾಖೆಯ ನಿವೃತ್ತ ಅಧಿಕಾರಿಗಳಾದ ಶರಣಬಸವ,ವನಸಿರಿ ತಂಡದ ಸದಸ್ಯರಾದ ವೀರಭದ್ರಯ್ಯ ಸ್ವಾಮಿ ತಿಮ್ಮಾಪೂರ, ವೆಂಕಟರಡ್ಡಿ ಹಡಗಿನಾಳ ಹಾಗೂ ಸಿಂಧನೂರ ಚನ್ನಬಸವ ನಗರದ ಶ್ರೀ ಶಿವಾಲಯ ದೇವಸ್ಥಾನ ಟ್ರಸ್ಟ್ ಆಡಳಿತ ಮಂಡಳಿಯ ಸದಸ್ಯರು ವನಸಿರಿ ತಂಡದ ಸದಸ್ಯರು ಉಪಸ್ಥಿತರಿದ್ದರು.

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">