ಪರಿಸರ ಪ್ರೇಮಿ ಸರಸ್ವತೆಮ್ಮ ಗೆ ವನಸಿರಿ ಮಹಿಳಾ ಘಟಕ ಸನ್ಮಾನ
ಸಿಂಧನೂರಿನ ಅಮರ ಶ್ರೀ ಆಲದ ಮರದ ಹತ್ತಿರ ದಿನನಿತ್ಯ ಸ್ವಚ್ಛಗೊಳಿಸಿ ಗಿಡಮರಗಳಿಗೆ ನೀರುಣಿಸುವ ಕಾಯಕದಲ್ಲಿ ತೊಡಗಿರುವ ಸಿಂಧನೂರಿನ ಪರಿಸರ ಪ್ರೇಮಿ ಸರಸ್ವತೆಮ್ಮ ಅವರಿಗೆ ವನಸಿರಿ ಮಹಿಳಾ ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಪರಿಸರ ಪ್ರೇಮಿ ಸರಸ್ವತೆಮ್ಮ ಅವರು ಅಮರ ಶ್ರೀ ಆಲದ ಮರಕ್ಕೆ ದಿನಾಲು ನೀರುಣಿಸುವುದು, ಆಲದ ಮರದ ಸುತ್ತಲೂ ಸ್ವಚ್ಛ ಗೊಳಿಸುವುದು,ಗಿಡಗಳಿಗೆ ಕಟ್ಟಿಗೆ ಕಟ್ಟಿ ರಕ್ಷಣೆ ಮಾಡುವುದು ಹೀಗೆ ಹತ್ತು ಹಲವು ಕಾರ್ಯಗಳನ್ನು ಮಾಡುತ್ತ ದಿನನಿತ್ಯ ತಮ್ಮ ಸೇವೆಯನ್ನು ವನಸಿರಿ ಫೌಂಡೇಶನ್ ಜೊತೆಗೆ ಮೀಸಲಿಟ್ಟಿದ್ದಾರೆ ಅವರು ಇಲ್ಲಿಯವರೆಗೂ ಯಾವುದೇ ಪ್ರತಿಫಲ ಬಯಸಿರುವುದಿಲ್ಲ ಇವರ ನಿಸ್ವಾರ್ಥ ಸೇವೆಗೆ ವನಸಿರಿ ತಂಡ ಸದಾಕಾಲ ಆಭಾರಿಯಾಗಿತ್ತದೆ ಅವರ ನಿಸ್ವಾರ್ಥ ಸೇವೆಗೆ ವನಸಿರಿ ಮಹಿಳಾ ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಹಿಳೆಯರನ್ನು ಪ್ರೋತ್ಸಾಹಿಸುವುದು,ಪರಿಸರಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಲ್ಲಿಸಿದಂತವರಿಗೆ ಸನ್ಮಾನಿಸಿ ಗೌರವಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ವನಸಿರಿ ಫೌಂಡೇಶನ್ ಮಹಿಳಾ ಘಟಕದ ಜಿಲ್ಲಾದ್ಯಕ್ಷೆ ಸಂಗೀತಾ ಸಾರಂಗ ಮಠ ತಿಳಿಸಿದರು.
ಈ ಸಂದರ್ಭದಲ್ಲಿ ಬ್ರಹ್ಮಕುಮಾರಿ ಅಮ್ಮನವರು, ಮಮತಾ ಹಿರೇಮಠ, ದ್ರಾಕ್ಷಾಯಣಿ ಮಾಲಿ ಪಾಟೀಲ, ಆನಂದಿ ಲಾಹೋಟಿ ಇನ್ನೂ ಮುಂತಾದವರು ಇದ್ದರು. ಡಿ ಆಲಂಬಾಷ