ಕಾಲುವೆ ದುರಸ್ತಿ ಮಾಡಿ ಜನರಿಗೆ ಅನುಕೂಲ ಮಾಡಿ.
ಸಿಂಧನೂರು ತಾಲೂಕಿನ ತುರುವಿಹಾಳ ಪಟ್ಟಣದ ಹೃದಯ ಭಾಗದಲ್ಲಿ ಹಾದು ಹೋಗುವ ಉಪಕಾಲುವೆ 40 ಚೈನ್ 78 ಮುಖ್ಯ ಕಾಲುವೆ ಶಿಥಿಲಗೊಂಡಿದ್ದು ಕಾಲುವೆ ದುರಸ್ತಿಗೊಳಿಸುವಂತೆ ಸಾರ್ವಜನಿಕರು ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದರು ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ.
ಸುಮಾರು ವರ್ಷಗಳ ಹಿಂದೆ ಮಾಡಲಾಗಿರುವ ಕಾಲುವೆಯೂ ಪಟ್ಟಣದ ಜನರಿಗೆ ಬಹುಪಯೋಗಿಯಾಗಿದ್ದು ರೈತರ ಜಮೀನುಗಳಿಗೆ, ಕುಡಿಯುವ ನೀರಿಗಾಗಿ, ಮಹಿಳೆಯರು ಬಟ್ಟೆ ತೊಳೆಯಲು,ಹಾಗೂ ಜಾನುವಾರುಗಳಿಗೆ ದಾಹ ತೀರಿಸಲು ಕಾಲುವೆಯನ್ನೇ ಇಲ್ಲಿನ ಜನ ಅವಲಂಬಿಸಿದ್ದಾರೆ.
ಹಲವು ವರ್ಷಗಳಿಂದ ಈ ಕಾಲುವೆಯ ಹೂಳನ್ನೆ ತೆಗೆದಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕಾಲುವೆಯ ಎರಡೂ ಬದಿಯ ಸಿಮೆಂಟ್ ಕಿತ್ತು ಹೋಗಿದ್ದು, ನೀರು ಇದ್ದಾಗ ಕೆಸರಿನ ಗದ್ದೆಯಾಗಿ ಜನರಿಗೆ ತೊಂದರೆಯಾಗುತ್ತಿದೆ.
ಬೇಸಿಗೆಯಾಗಿರುವುದ ರಿಂದ ಸದ್ಯನೀರು ಪೂರೈಕೆ ಸ್ಥಗಿತವಾಗಿದ್ದು ಇಂಥ ಸಂದರ್ಭದಲ್ಲಿ ಕಾಲುವೆ ದುರಸ್ತಿ ಕಾಮಗಾರಿ ಕೈಗೊಂಡು ಮುಂಬರುವ ದಿನಗಳಲ್ಲಿ ರೈತರಿಗೆ, ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಪಟ್ಟಣದ ಜನರು ಆಗ್ರಹಿಸುತ್ತಿದ್ದಾರೆ.
ರಿಪೋರ್ಟರ್ : ಮೆಹಬೂಬ ಮೊಮೀನ.