ದಿನಾಂಕ 28- 6 -2023 ರಂದು ಸಿರುಗುಪ್ಪ ತಾಲೂಕು ಅಭಯಾ ಆಂಜನೇಯ ದೇವಸ್ಥಾನದಲ್ಲಿ, ಸಿರುಗುಪ್ಪ ತಾಲೂಕು ಹಕ್ಕಿ ಗಿರಣಿ ಮಾಲೀಕರ ಸಂಘದ ವತಿಯಿಂದ, ಅಧ್ಯಕ್ಷರಾದ ಏನ್ ಜಿ ಬಸವರಾಜ, ಉಪಾಧ್ಯಕ್ಷರು,ಚಾಗಿ ಸುಬ್ಬಯ್ಯ, ಕಾರ್ಯದರ್ಶಿ ಮಾಣಿಕ್ಯ ರೆಡ್ಡಿ, ಖಜಾಂಚಿ ಚಾಗಿ ರಾಘವೇಂದ್ರ ಶೆಟ್ಟಿ, ಹಾಗೂ ಸಂಘದ ಎಲ್ಲಾ ಕಾರ್ಯಕರ್ತರು ಸೇರಿ ಸಿರುಗುಪ್ಪ ತಾಲೂಕು ವಿಧಾನ ಸಭಾ ಕ್ಷೇತ್ರ ಶಾಸಕರಾದ ಬಿಎಂ ನಾಗರಾಜ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು ಅದರ ಜೊತೆಗೆ ಅಕ್ಕಿ ಗಿರಣಿ ಮಾಲೀಕರ, ಮೂಲಸೌಕರ್ಯ ಹಾಗೂ ತಮಗೆ ಇರುವ ಸಮಸ್ಯೆಗಳ ಬಗ್ಗೆ, ಶಾಸಕರಲ್ಲಿ ಮನವಿ ಮಾಡಿಕೊಂಡರು, ಅದೇ ರೀತಿ ವಿದ್ಯುತ್ ದರ ಏರಿಕೆಯ ಬಗ್ಗೆ ಹಾಗೂ ಭತ್ತ ಖರೀದಿ ಕೇಂದ್ರಗಳ ಬಗ್ಗೆ ರೈತರಿಗೆ ಮತ್ತು ತಮಗೆ ಮಾಲೀಕರಿಗೆ ಆಗುವ ಅನುಕೂಲ ಅನಾನುಕೂಲಗಳ ಬಗ್ಗೆ ಮತ್ತು ಸಿರುಗುಪ್ಪ ನಗರಸಭೆ ವ್ಯಾಪ್ತಿಯಲ್ಲಿ ಅಕ್ಕಿ ಗಿರಣಿ ಮಾಲೀಕರು ಸರಿಯಾದ ರೀತಿಯಿಂದ ಪ್ರತಿವರ್ಷ ಸಾವಿರಾರು ರೂಪಾಯಿಗಳನ್ನು ತೆರಿಗೆ ಪಾವತಿಸಿದರು ಕೂಡ ನಮಗೆ ಮೂಲಸೌಕರ್ಯಗಳು ಸ್ಪಂದಿಸುತ್ತಿಲ್ಲ ಎಂದು ಶಾಸಕರಲ್ಲಿ ಮನವಿಯನ್ನು ಸಲ್ಲಿಸಿದರು, ಇದಕ್ಕೆ ಪರ್ಯಾಯವಾಗಿ ಶಾಸಕರಾದ ಬಿಎಮ್ ನಾಗರಾಜ ನವರು ನಿಮ್ಮೆಲ್ಲ ಬೇಡಿಕೆಗಳಿಗೆ ಕಾನೂನು ರೀತಿಯಲ್ಲಿ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ನಮ್ಮ ಸರ್ಕಾರದ ಜೊತೆಗೆ ಚರ್ಚೆ ನಡೆಸುತ್ತೇನೆ ಎಂದು ಭರವಸೆ ನೀಡಿದರು, ಅದೇ ರೀತಿ ಸಿರುಗುಪ್ಪ ತಾಲೂಕಿನ ಮಿಲ್ಲಿನ ಮಾಲೀಕರಿಗೆ ಸಾರ್ವಜನಿ ಹಿತದೃಷ್ಟಿಗಾಗಿ ಮಿಲ್ಲಿನಿಂದ ಉಗುಳುವ ಹೊಗೆ ಮತ್ತು ಬೂದಿಯ ಮಾಲಿನ್ಯದ ಬಗ್ಗೆ ತಾವುಗಳು ಸರಿಪಡಿಸಿಕೊಳ್ಳಿ ಎಂದು ಹೇಳಿದರು.