ರತ್ನಾಪುರ ಗ್ರಾಮದಲ್ಲಿ ವಾಂತಿಬೇದಿಯಿಂದ ಬಳಲುತ್ತಿರುವ ಜನರು.
ತುರ್ವಿಹಾಳ ಸಮೀಪದ ರತ್ನಾಪೂರ ಗ್ರಾಮದಲ್ಲಿ ವಾಂತಿಭೇದಿ ಉಲ್ಬಣ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜನರು.
ಮಸ್ಕಿ ತಾಲ್ಲೂಕಿನ ರತ್ನಾಪೂರ ಗ್ರಾಮದ ಸುಮಾರು ಜನರಿಗೆ ವಾಂತಿ ಭೇದಿ ಆರಂಭವಾಗಿದ್ದು, ತುರ್ವಿಹಾಳ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾವರಗೇರ ಸಮುದಾಯ ಆರೊಗ್ಯ ಕೇಂದ್ರದಲ್ಲಿ ಬುಧವಾರ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಶುದ್ಧಿಕರೀಸಿದ ನೀರಿನ ಸರಬರಾಜು ಪೈಪು ಒಡೆದು ಅದರ ಮೂಲಕ ನೀರು ಕಲುಸಿತಗೊಂಡಿವೆ, ಅದೇ ಕಲುಸಿತ ನೀರನ್ನು ಕುಡಿದ ಪರಿಣಾಮ ಗ್ರಾಮದಲ್ಲಿ ಕೆಲವು ಜನರಿಗೆ ಎರಡು ದಿನಗಳಿಂದ ವಾಂತಿಭೇದಿ ಆರಂಭವಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು.
ವಾಂತಿಭೇದಿಯಿಂದ ಬಳಲುತ್ತಿದ್ದ ರೋಗಿಗಳು ಸರ್ಕಾರಿ ಆರೋಗ್ಯ ಕೆಂದ್ರದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ, ರತ್ನಾಪೂರ ಗ್ರಾಮದಲ್ಲಿ ರೋಗ ನಿಯಂತ್ರಣಕ್ಕಾಗಿ ಚಿಕಿತ್ಸಾ ಕೇಂದ್ರ ತೆರೆದು ಇಬ್ಬರು ವೈದ್ಯರು ಹಾಗೂ ಸಿಬ್ಬಂದಿಯನ್ನು ನೇಮಿಸಿಲಾಗಿದೆ ಎಂದು ವೈದ್ಯಾಧಿಕಾರಿ ಡಾ.ರಮೇಶ ನಾಯಕ್ ಮಾಹಿತಿ ನೀಡಿದರು.
ರಿಪೋರ್ಟರ್ : ಮೆಹಬೂಬ ಮೋಮಿನ.
Tags
ಟಾಪ್ ನ್ಯೂಸ್